ಹೈದರಾಬಾದ್:ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಕಮೆಂಟೇಟರ್ ನಾಸಿರ್ ಹುಸೇನ್ ಅವರು 2020 ಐಪಿಎಲ್ ಟೀಮ್ ಆಫ್ ಟೂರ್ನ್ಮೆಂಟ್ನ ನಾಯಕನಾಗಿ ಕೆ.ಎಲ್ . ರಾಹುಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಜೊತೆಗೆ ಈ ತಂಡವು ಆರು ಭಾರತೀಯ ಕ್ರಿಕೆಟರ್ಸ್ಅನ್ನು ಒಳಗೊಂಡಿದೆ.
ಐಪಿಎಲ್-2020 ಸೀಸನ್ನ ಚಾಂಪಿಯನ್ ಆದ ಮುಂಬೈ ಇಂಡಿಯನ್ಸ್ ಟೀಮ್ನಿಂದ ನಾಸಿರ್ ಹುಸೇನ್ ಐದು ಜನ ಆಟಗಾರರನ್ನು ಆಯ್ಕೆ ಮಾಡಿಕೊಂಡರು. ಆದರೆ ತಂಡದ ನಾಯಕರಾಗಿದ್ದ ರೋಹಿತ್ ಶರ್ಮಾ ಇಲೆವೆನ್ನಲ್ಲಿ ಸ್ಥಾನ ಪಡೆದಿಲ್ಲ.
ಮಾಜಿ ಬ್ಯಾಟ್ಸ್‌ಮನ್ ಹಾಗೂ ಕಾಮೆಂಟೇಟರ್ ನಾಸಿರ್ ಹುಸೇನ್,2020ನೇ ಸಾಲಿನ ಟಾಪ್ ಸ್ಕೋರರ್ಗಳಾದ ಕೆ.ಎಲ್. ರಾಹುಲ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರ ಶಿಖರ್ ಧವನ್ ಅವರನ್ನು ಆರಂಭಿಕ ಬ್ಯಾಟ್ಸ್ಮನ್ಗಳನ್ನಾಗಿ ಆಡಿಸಲು ನಿರ್ಧರಿಸಿದ್ದಾರೆ. ಇವರನ್ನು ಆಯ್ಕೆ ಮಾಡಿರುವುದು ಕೇವಲ ರನ್ ಕಾರಣಕ್ಕಾಗಿ ಅಲ್ಲ, ಈ ಇಬ್ಬರೂ ಎಡಗೈ ಮತ್ತು ಬಲಗೈ ಬ್ಯಾಟ್ಸ್ಮನ್ಗಳು ಉತ್ತಮ ಜೊತೆಯಾಟ ಆಡುವುದರಿಂದ ಇಬ್ಬರನ್ನೂ ಆರಂಭಿಕ ಬ್ಯಾಟ್ಸ್ಮನ್ಗಳಾಗಿ ಆಯ್ಕೆ ಮಾಡಲಾಗಿದೆ.
ಟಿ20 ಎನ್ನುವುದು ಹೊಡಿಬಡಿ ಆಟ. ಇದರಲ್ಲಿ ಅವರು ಪಡೆಯುವ ರನ್ ಮಾತ್ರ ಮುಖ್ಯವಲ್ಲ. ರಾಹುಲ್ ಇದುವರೆಗೆ ಉತ್ತಮ ಪಂದ್ಯಾವಳಿಗಳನ್ನು ಆಡಿದ್ದಾರೆ. ವೈಟ್ ಬಾಲ್ ಪಂದ್ಯಗಳಲ್ಲಿ ರಾಹುಲ್ ಒಬ್ಬ ಅತ್ಯುತ್ತಮ ಆಟಗಾರ. ಹೊಸದಾಗಿ ಕ್ರಿಕೆಟ್ ಕಲಿಯೋರಿಗೆ ರಾಹುಲ್ ಆಟವೇ ಒಂದು ಪಾಠ. ಪ್ರತೀ ಬಾಲ್ ಅನ್ನು ರಾಹುಲ್ ಚೆನ್ನಾಗಿ ಸ್ಟ್ರೋಕ್ ಮಾಡುತ್ತಾರೆ ಎಂದು ನಾಸಿರ್ ಹುಸೇನ್ ಹೇಳಿದ್ದಾರೆ.
ನಾಸಿರ್ ಹುಸೇನ್ ಆಯ್ಕೆಯ IPL ಟೀಮ್ ಆಟಗಾರರು:ಕೆ.ಎಲ್. ರಾಹುಲ್( ಕ್ಯಾಪ್ಟನ್), ಶಿಖರ್ ಧವನ್, ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್,ಎಬಿ ಡಿವಿಲಿಯರ್ಸ್( ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಜೋಫ್ರಾ ಆರ್ಚರ್, ರಶೀದ್ ಖಾನ್, ಕಾಗಿಸೊ ರಬಾಡ, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್.