ಕರ್ನಾಟಕ

karnataka

ಬಂಧುಗಳೇ ಬರದಿದ್ದಾಗ ಹಿಂದೂ ಮಹಿಳೆಯ ಚಟ್ಟಕ್ಕೆ ಹೆಗಲು ಕೊಟ್ಟರು ಮುಸ್ಲಿಂ ಯುವಕರು

ಕೊರೊನಾ ಭೀತಿಯಿಂದಾಗಿ ಮಹಿಳೆಯ ಶವವನ್ನು ಮನೆಯಿಂದ ಎರಡೂವರೆ ಕಿ.ಮೀ. ದೂರದಲ್ಲಿರುವ ಸ್ಮಶಾನಕ್ಕೆ ಸಾಗಿಸಲು ಮಹಿಳೆಯ ಕುಟುಂಬಸ್ಥರು ನಿರಾಕರಿಸಿದ್ದಾರೆ. ಆಗ ಮಹಿಳೆಯ ಇಬ್ಬರು ಗಂಡುಮಕ್ಕಳಿಗೆ ದೇವರಂತೆ ಸಹಾಯಕ್ಕೆ ಬಂದವರು ಈ ಮುಸ್ಲಿಂ ಯುವಕರು. ಸಾವಿಗೆ ಧರ್ಮದ ತಡೆ ಏಕೆ? ಎಂದು ಇಬ್ಬರು ಗಂಡು ಮಕ್ಕಳ ಜೊತೆಗೆ ಚಟ್ಟಕ್ಕೆ ಹೆಗಲು ಕೊಟ್ಟು ಮುಸ್ಲಿಂ ಯುವಕರು ಎರಡೂವರೆ ಕಿ.ಮೀ ನಡೆದಿದ್ದಾರೆ. ಸ್ಮಶಾನದವರೆಗೂ ಮೆರವಣಿಗೆಯಲ್ಲಿ ಸಾಗಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿ, ಮಾನವೀಯತೆಗಿಂತ ದೊಡ್ದದು ಯಾವುದೂ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

By

Published : Apr 8, 2020, 11:14 AM IST

Published : Apr 8, 2020, 11:14 AM IST

Muslim men help to carry hindu woman bier to the cemetery
ಹಿಂದೂ ಮಹಿಳೆಯ ಚಟ್ಟಕ್ಕೆ ಹೆಗಲು ಕೊಟ್ಟ ಮುಸ್ಲಿಂ ಯುವಕರು

ನವದೆಹಲಿ:ಸಾವನ್ನಪ್ಪಿದ ಹಿಂದೂ ಮಹಿಳೆಯ ಶವವನ್ನು ಸ್ಮಶಾನಕ್ಕೆ ಸಾಗಿಸಲು ಸ್ಥಳೀಯ ಮುಸ್ಲಿಂ ಯುವಕರು ಹೆಗಲು ಕೊಟ್ಟು ಕೋಮು ಸಾಮರಸ್ಯ ಮೆರೆದ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ.

ಇಲ್ಲಿನ ಮಹಿಳೆ ದ್ರೌಪದಿ ಬಾಯಿ ಎಂಬವರು ಸಾವನ್ನಪ್ಪಿದ್ದಾರೆ. ಕೊರೊನಾ ಭೀತಿಯಿಂದಾಗಿ ಮಹಿಳೆಯ ಶವವನ್ನು ಮನೆಯಿಂದ ಎರಡೂವರೆ ಕಿ.ಮೀ. ದೂರದಲ್ಲಿರುವ ಸ್ಮಶಾನಕ್ಕೆ ಸಾಗಿಸಲು ಮಹಿಳೆಯ ಕುಟುಂಬಸ್ಥರು ನಿರಾಕರಿಸಿದ್ದಾರೆ. ಆಗ ಮಹಿಳೆಯ ಇಬ್ಬರು ಗಂಡುಮಕ್ಕಳಿಗೆ ದೇವರಂತೆ ಸಹಾಯಕ್ಕೆ ಬಂದವರು ಈ ಮುಸ್ಲಿಂ ಯುವಕರು. ಸಾವಿಗೆ ಧರ್ಮದ ತಡೆಯಾಕೆ ಎಂದು ಇಬ್ಬರು ಗಂಡು ಮಕ್ಕಳ ಜೊತೆಗೆ ಚಟ್ಟಕ್ಕೆ ಹೆಗಲು ಕೊಟ್ಟು ಮುಸ್ಲಿಂ ಯುವಕರು ಎರಡೂವರೆ ಕಿ.ಮೀ ನಡೆದಿದ್ದಾರೆ. ಸ್ಮಶಾನದವರೆಗೂ ಮೆರವಣಿಗೆಯಲ್ಲಿ ಸಾಗಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿ, ಮಾನವೀಯತೆಗಿಂತ ದೊಡ್ದದು ಯಾವುದೂ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಅಂದಹಾಗೆ ಮಹಿಳೆಗೆ ಸಂಬಂಧಿಕರಿದ್ದಾರೆ. ಆದ್ರೆ ಎಲ್ಲಿ ನಮಗೆ ಕೊರೊನಾ ವಕ್ಕರಿಸಿಕೊಂಡುಬಿಡುತ್ತೋ ಎಂಬ ಭೀತಿಯಲ್ಲಿ ಅವರೆಲ್ಲಾ ಮಹಿಳೆಯ ಶವದ ಹತ್ತಿರ ಸುಳಿಯಲು ನಿರಾಕರಿಸಿದ್ದರಂತೆ. ಆದ್ರೆ ನೆರೆಯ ಈ ಯುವಕರು ಹಾಗಲ್ಲ. ಸಾವಿನ ಸಮಯದಲ್ಲಿ ಮನುಷ್ಯತ್ವಕ್ಕಿಂತ ದೊಡ್ಡದು ಯಾವುದೂ ಅಲ್ಲ ಎಂದು, ಕೊರೊನಾ ಭೀತಿಯ ನಡುವೆಯೂ ಮುಖಕ್ಕೆ ಮಾಸ್ಕ್​ ಹಾಕಿಕೊಂಡು ಧರ್ಮದ ಗೋಡೆ ದಾಟಿ ಹಿಂದೂ ಮಹಿಳೆಯ ಅಂತ್ಯ ಸಂಸ್ಕಾರ ನಡೆಸಿದ್ದಾರೆ.

ಇನ್ನು ಈ ಸುದ್ದಿಯನ್ನು ಶೇರ್​ ಮಾಡಿರುವ ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್​ ಹಿರಿಯ ನಾಯಕ ಕಮಲ್​ ನಾಥ್​, ಯುವಕರ ಕಾರ್ಯವನ್ನು ಪ್ರಶಂಶಿಸಿದ್ದಾರೆ.

ABOUT THE AUTHOR

...view details