ಕರ್ನಾಟಕ

karnataka

ETV Bharat / bharat

ರಾಜ್ಯಸಭೆ ಚುನಾವಣೆಗೆ ಮತ ಚಲಾಯಿಸಿದ್ದ ಬಿಜೆಪಿ ಶಾಸಕನಿಗೆ ಕೊರೊನಾ​... ಮಧ್ಯಪ್ರದೇಶದಲ್ಲಿ ಆತಂಕ!

ಮಧ್ಯಪ್ರದೇಶದಲ್ಲಿ ನಿನ್ನೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಭಾಗಿಯಾಗಿ ಮತದಾನ ಮಾಡಿರುವ ಬಿಜೆಪಿ ಶಾಸಕನೋರ್ವನಿಗೆ ಕೊರೊನಾ​ ಇರುವುದು ದೃಢಪಟ್ಟಿದೆ.

BJP MLA
BJP MLA

By

Published : Jun 20, 2020, 5:37 PM IST

ಭೋಪಾಲ್​:ಮಧ್ಯಪ್ರದೇಶದ ಬಿಜೆಪಿ ಹಿರಿಯ ಶಾಸಕನಿಗೆ ಕೊರೊನಾ ದೃಢಪಟ್ಟಿದ್ದು, ಅವರ ಸಂಪರ್ಕದಲ್ಲಿ ಬಂದಿರುವ ಕೆಲವರು ಖುದ್ದಾಗಿ ಆಸ್ಪತ್ರೆಗೆ ತೆರಳಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ.

ನಿನ್ನೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಭಾಗಿಯಾಗಿದ್ದ ಅವರಿಗೆ ವೋಟ್​ ಮಾಡಿದ ಒಂದೇ ಗಂಟೆಯಲ್ಲಿ ಕೋವಿಡ್​ ಪಾಸಿಟಿವ್​ ಇರುವುದು ಕನ್ಫರ್ಮ್​ ಆಗಿದ್ದು, ಅವರ ಪತ್ನಿಯಲ್ಲೂ ಸೋಂಕು ಕಾಣಿಸಿಕೊಂಡಿದೆ.

ಕಳೆದ ಗುರುವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗಿಯಾಗಿದ್ದ ಅವರು, ನಿನ್ನೆ ನಡೆದ ವೋಟಿಂಗ್​​ನಲ್ಲೂ ಇದ್ದರು. ಇವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ತೆರಳಿದ್ದು, ಅಲ್ಲಿ ಟೆಸ್ಟ್​ ಮಾಡಿದಾಗ ಸೋಂಕು ತಗುಲಿರುವುದು ಕನ್ಫರ್ಮ್​ ಆಗಿದೆ. ಸದ್ಯ ಅವರನ್ನ ಹೋಂ ಕ್ವಾರಂಟೈನ್​ ಮಾಡಲಾಗಿದ್ದು, ಅವಶ್ಯ ಬಿದ್ದರೆ ಆಸ್ಪತ್ರೆಗೆ ದಾಖಲು ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಶಾಸಕರ ಸಂಪರ್ಕ ಹೊಂದಿದವರಿಗೂ ಇದೀಗ ಕೋವಿಡ್​ ಪರೀಕ್ಷೆ ನಡೆಸುವ ಸಾಧ್ಯತೆ ಇದೆ. ಈಗಾಗಲೇ ಬಿಜೆಪಿಯ ಕೆಲ ಶಾಸಕರು ಖುದ್ದಾಗಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​ ಶಾಸಕನಿಗೆ ಕೊರೊನಾ ವೈರಸ್​ ತಗುಲಿದ್ದು, ನಿನ್ನೆ ಚುನಾವಣೆಯಲ್ಲಿ ಪಿಪಿಇ ಕಿಟ್ ಹಾಕಿಕೊಂಡು ಬಂದು ವೋಟ್​ ಮಾಡಿದ್ದರು.

ABOUT THE AUTHOR

...view details