ಕರ್ನಾಟಕ

karnataka

ತಾಯಿ ಪ್ರೀತಿ ಎಂಥಾದ್ದು ಅನ್ನೋದಕ್ಕೆ ಈ ಸಮೀಕ್ಷೆಯೇ ಸಾಕ್ಷಿ!!

ತಾಯಿ ಪ್ರೀತಿ ಪಡೆದ ಮಕ್ಕಳು ಕೆಟ್ಟ ಸಂಬಂಧಗಳಲ್ಲಿ ಬೀಳುವುದಿಲ್ಲ ಯುನಿವರ್ಸಿಟಿ ಎಂದು ಅಟ್​ ಬಫಾಲೋದ ಸಂಶೋಧನೆಯೊಂದು ಹೇಳುತ್ತದೆ.

By

Published : Nov 6, 2019, 2:26 PM IST

Published : Nov 6, 2019, 2:26 PM IST

Updated : Nov 6, 2019, 7:23 PM IST

ತಾಯಿ ಪ್ರೀತಿ

ನ್ಯೂಯಾರ್ಕ್​( ಅಮೆರಿಕ):ತಾಯಿ ಪ್ರೀತಿ ಬೆಲೆಕಟ್ಟಲಾಗದ್ದು, ಅದಕ್ಕೆ ಹೋಲಿಕೆಯಾಗುವ ಪರ್ಯಾಯ ಈ ಜಗತ್ತಿನಲ್ಲಿ ಯಾವುದೂ ಕೂಡಾ ಇಲ್ಲ. ತಾಯಿ ಪ್ರೀತಿಗೆ ಇನ್ನೊಂದು ಗರಿಮೆ ಮೂಡಿದೆ. ಅದೇನು ಗೊತ್ತಾ..? ತಾಯಿಯೊಂದಿಗೆ ಪ್ರೀತಿ- ಬಾಂಧ್ಯವದಲ್ಲಿ ಬೆಳೆದ ಮಕ್ಕಳು ತುಂಬಾ ಕಾಳಜಿಯಿಂದ ಬೆಳೆದಿರುತ್ತಾರೆ. ಅದರಲ್ಲೂ ತಾಯಿ ಪ್ರೀತಿಯಲ್ಲಿ ಬೆಳೆದ ಹದಿಹರೆಯದವರು ಭವಿಷ್ಯದಲ್ಲಿ ಕೆಟ್ಟವರೊಂದಿಗೆ ಸಂಬಂಧ ಬೆಳೆಸುವುದು ಕಡಿಮೆ. ಹೀಗಂತಾ ನಾವು ಹೇಳ್ತಿರೋದಲ್ಲ.. ಇದು ಸಂಶೋಧನೆಯೊಂದು ಹೇಳಿರುವ ಮಾತಿದು.

ಈ ಸಂಶೋಧನೆಯನ್ನು ಮಾಡಿದ್ದು ನ್ಯೂಯಾರ್ಕ್​ನ ಯುನಿವರ್ಸಿಟಿ ಅಟ್​​ ಬಫಾಲೋದ ಸಮಾಜ ವಿಜ್ಞಾನಿಗಳು. ಈ ಸಂಶೋಧನೆಯಿಂದಾಗಿ ತಾಯಿ ಪ್ರೀತಿಯ ಮಹತ್ವ ಇನ್ನಷ್ಟು ಜಾಸ್ತಿಯಾಗಿದೆ. ಅಕಸ್ಮಾತ್​ ತಾಯಿ ತನ್ನ ತಾಯಿಯ ವಿವಾಹ ಹಾಗೂ ವಿವಾಹಪೂರ್ವ ಸಂಬಂಧಗಳು ವಿವಾದಾಸ್ಪದವಾಗಿದ್ದರೂ ಕೂಡಾ ಅವರ ಮಕ್ಕಳು ಕೆಟ್ಟ ಸಂಬಂಧಗಳನ್ನು ಹೊಂದುವ ಸಾಧ್ಯತೆ ತುಂಬಾ ಕಡಿಮೆ ಅಂತ ಹೇಳುತ್ತೆ ಈ ಸಂಶೋಧನೆ.

ಇದಕ್ಕೂ ಹಿಂದಿನ ಸಂಶೋಧನೆಯೊಂದು ಹದಿಹರೆಯದವರ ಮೇಲೆ ಅಧ್ಯಯನ ಮಾಡಿತ್ತು. ಚಿಕ್ಕ ವಯಸ್ಸಿನಲ್ಲಿ ವಿವಾಹದಿಂದ ಸಂಘರ್ಷಕ್ಕೆ ಒಳಗಾದ ಹದಿಹರೆಯದವರು ಭವಿಷ್ಯದಲ್ಲಿ ಸಂಬಂಧಗಳ ವಿಚಾರದಲ್ಲಿ ಎಡವುತ್ತಾರೆ ಅನ್ನೋದನ್ನು ಸಂಶೋಧನೆ ಹೇಳಿತ್ತು. ಈಗ ಬಂದಿರುವ ಹೊಸ ಅಧ್ಯಯನ ತಾಯಿಯೊಬ್ಬಳು ತನ್ನ ಹದಿಹರೆಯ ಮಕ್ಕಳೊಂದಿಗೆ ಹೊಂದಿರುವ ಭಾವನಾತ್ಮಕ ಸಂಬಂಧವು ಅವರಲ್ಲಿನ ಮೌಲ್ಯಯುತ ಸಂಬಂಧಗಳನ್ನು ಉತ್ತೇಜಿಸುತ್ತದೆ ಯುನಿವರ್ಸಿಟಿ ಅಟ್​​ ಬಫಾಲೋದ ಸಂಶೋಧಕ ಹಾಗೂ ಸಹಾಯಕ ಪ್ರಾಧ್ಯಾಪಕ ಪಿಎಚ್‌ಡಿ ಜೆನ್ನಿಫರ್ ಲಿವಿಂಗ್ಸ್​ಟನ್​​ ಹೇಳುವ ಮಾತು.

ತಾಯಿಯೊಂದಿಗಿನ ಉತ್ತಮ ಸಂಬಂಧ ಹದಿಹರೆಯದವರಲ್ಲಿ ದೈಹಿಕ, ಭಾವನಾತ್ಮಕ ಹಾಗೂ ಲೈಂಗಿಕ ಸಂಬಂಧಗಳಿಂದ ಜೀವನ ಹಾಳು ಮಾಡಿಕೊಳ್ಳುವುದನ್ನು ತಡೆಯುತ್ತದೆ. ಇತ್ತೀಚಿನ ವರದಿಗಳ ಶೇಕಡಾ 30ಕ್ಕೂ ಹೆಚ್ಚು ಹದಿಹರೆಯದವರು ಇಂತಹ ಕೆಟ್ಟ ಸಂಬಂಧಗಳಿಗೆ ಬಲಿಯಾಗುತ್ತಿದ್ದಾರೆ ಎಂಬುದು ಲಿವಿಂಗ್ಸ್​​​ಟನ್​ ಅಭಿಪ್ರಾಯ. ಜರ್ನಲ್​​​​​​ ಆಫ್​ ಇಂಟರ್​​ಪರ್ಸನಲ್ ವಯಲೆನ್ಸ್​ ಎಂಬ ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನೆಯೊಂದು ವಿಭಿನ್ನ ವಿಚಾರವನ್ನು ಬಹಿರಂಗಪಡಿಸುತ್ತದೆ. ಅದರಲ್ಲಿ ಪ್ರಕಟವಾದಂತೆ 140 ಹದಿಹರೆಯದವರ ಮೇಲೆ ಸಂಶೋಧನೆ ಮಾಡಲಾಯಿತು.

ಈ ಹದಿಹರೆಯದವರ ಆಯ್ಕೆ ಆಯ್ಕೆ ಪ್ರಕ್ರಿಯೆ ತುಂಬಾ ವಿಭಿನ್ನವಾಗಿತ್ತು. ಯಾವ ಮಗು ತನ್ನ ತಂದೆ ತಾಯಿಗಳು ಲಿವಿಂಗ್​ -ಟು-ಗೆದರ್​​ನಲ್ಲಿ ಜೀವಿಸುತ್ತಿದ್ದಾಗ ಜನಿಸಿರುತ್ತಾರೋ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಸಂಶೋಧನೆಯಲ್ಲಿ ಭಾಗವಹಿಸಿದ್ದವರು ಎಂಟನೇ ತರಗತಿ ವಿದ್ಯಾರ್ಥಿಗಳು, ಅವರ ಹಿರಿಯರು ಹಾಗೂ ಕಿರಿಯರು. ಅವರಲ್ಲಿ ಬಹುಪಾಲು ಮಂದಿ ತಾಯಿ ಜೊತೆ ವಾಸವಿದ್ದವರು ಕೆಟ್ಟ ಸಂಬಂಧಗಳಿಂದ ದೂರ ಉಳಿದಿದ್ದರು.

ಈ ಸಂಶೋಧನೆಯಲ್ಲಿ ಹಲವಾರು ವಿಚಾರಗಳು ಬೆಳೆಕಿಗೆ ಬಂದವು. ಇಲ್ಲಿ ಭಾಗವಹಿಸಿದ್ದ ಹದಿಹರೆಯದವರಲ್ಲಿ ಅರ್ಧದಷ್ಟು ಮಂದಿ ಏಕ ಪೋಷಕರನ್ನು ಹೊಂದಿದ್ದರು. ಅಂದ್ರೆ ತಂದೆ ಅಥವಾ ತಾಯಿ ಮಾತ್ರ ಇವರನ್ನು ಪೋಷಿಸುತ್ತಿದ್ದರು. ಇರುವ ಪೋಷಕರಲ್ಲಿ ತಂದೆ ಮದ್ಯಪಾನ ಮಾಡುತ್ತಿದ್ದರು. ಬಹುಪಾಲು ತುಂಬಾ ಮಂದಿಗೆ ಇದು ಅನ್ವಯವಾಗುತ್ತಿತ್ತು. ಈ ಸಂಶೋಧನೆ ನಡೆದದ್ದು ಕುಟುಂಬದಲ್ಲಿ ಮದ್ಯಪಾನ ಯಾವ ರೀತಿಯ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂಬುದನ್ನು ತಿಳಿಯುವ ಸಲುವಾಗಿಯಾದರೂ ತಾಯಿ ಪ್ರೀತಿಯ ಮಹತ್ವವನ್ನು ತಿಳಿಸುವಂತಿತ್ತು. ಈ ಮೂಲಕ ಅವರು ತಾಯಿ ಪ್ರೀತಿಯು ಹದಿಹರೆಯದವರನ್ನು ಒಳ್ಳೆಯ ಮಾರ್ಗದಲ್ಲಿ ನಡೆಸುತ್ತದೆ ಎಂಬುದು ಈ ಸಂಶೋಧನೆಯಿಂದ ಸಾಬೀತಾಗಿದೆ

Last Updated : Nov 6, 2019, 7:23 PM IST

ABOUT THE AUTHOR

...view details