ಕರ್ನಾಟಕ

karnataka

ಹಾಲಿನ ದರದಲ್ಲಿ ಮತ್ತಷ್ಟು ಏರಿಕೆ: ಲೀಟರ್​​ ಹಾಲಿಗೆ 3 ರೂ ಏರಿಕೆ

ಎರಡು ತಿಂಗಳ ಹಿಂದೆ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಿದ್ದ ಮದರ್​ ಡೈರಿ ಇದೀಗ ಪ್ರತಿ ಲೀಟರ್​ ಹಾಲಿನ ಬೆಲೆಯಲ್ಲಿ ಮತ್ತಷ್ಟು ಏರಿಕೆ ಮಾಡಿದೆ.

By

Published : Dec 14, 2019, 7:27 PM IST

Published : Dec 14, 2019, 7:27 PM IST

ಹಾಲಿನ ದರದಲ್ಲಿ ಮತ್ತಷ್ಟು ಏರಿಕೆ
Mother Dairy hikes milk prices

ನವದೆಹಲಿ:ಕಳೆದ ಕೆಲ ತಿಂಗಳ ಹಿಂದೆ ಲೀಟರ್​ ಹಾಲಿಗೆ ಎರಡು ರೂ ಏರಿಕೆ ಮಾಡಿದ್ದ ಮದರ್​ ಡೈರಿ ಇದೀಗ ತನ್ನ ಹಾಲಿನ ದರ ಏರಿಸಿದೆ.

ಹಾಲಿನ ದರದಲ್ಲಿ ಮತ್ತಷ್ಟು ಏರಿಕೆ

ದೇಶದ ಅತಿದೊಡ್ಡ ಹಾಲು ವಿತರಕರಲ್ಲಿ ಒಂದಾಗಿರುವ ಮದರ್​ ಡೈರಿ ಈ ನಿರ್ಧಾರ ಕೈಗೊಂಡಿದ್ದು, ರೈತರಿಂದ ಹಾಲು ಪಡೆದುಕೊಳ್ಳಲು ಹೆಚ್ಚಿನ ಹಣ ನೀಡುತ್ತಿರುವ ಕಾರಣ, ಈ ದರ ಏರಿಕೆ ಮಾಡಲಾಗಿದೆ ಎಂದು ಮದರ್​ ಡೈರಿಯ ವಕ್ತಾರರು ತಿಳಿಸಿದೆ. ಇಂದಿನಿಂದಲೇ ನೂತನ ದರ ಜಾರಿಯಾಗಲಿದೆ.ಈ ಹಿಂದೆ 2019ರ ಸೆಪ್ಟೆಂಬರ್​ ತಿಂಗಳಲ್ಲಿ ಎರಡು ರೂ ಏರಿಕೆ ಮಾಡಲಾಗಿತ್ತು. ಈ ದರ ದೆಹಲಿ-ಎನ್‌ಸಿಆರ್‌ನಲ್ಲಿ ಮಾತ್ರ ಅನ್ವಯಿಸುತ್ತದೆ. ಇದೀಗ ಪೂರ್ಣ ಕೆನೆ ಹಾಲಿನ(Full Cream Milk) ಬೆಲೆ ಲೀಟರ್​ಗೆ 55 ಆಗಲಿದೆ.

ಅಮೂಲ್​ ಕೂಡ ತನ್ನ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಿದ್ದು, ಪ್ರತಿ ಲೀಟರ್​ಗೆ ಎರಡು ರೂ ಹೆಚ್ಚಳ ಮಾಡಿದೆ. ನೂತನ ದರ ಡಿಸೆಂಬರ್​ 15ರಿಂದ ಜಾರಿಯಾಗಲಿದೆ. ಅಹಮದಾಬಾದ್​, ಸೌರಾಷ್ಟ್ರ,ದೆಹಲಿ ಎನ್​ಸಿಆರ್​, ಪಶ್ಚಿಮ ಬಂಗಾಳ,ಮುಂಬೈ ಹಾಗೂ ಮಹಾರಾಷ್ಟ್ರದ ಕೆಲ ಪ್ರದೇಶಗಳಲ್ಲಿ ಈ ಬೆಲೆ ಜಾರಿಯಾಗಲಿದೆ.

ನೂತನ ದರ ಇಂತಿದೆ

ಹಾಲಿನ ದರದಲ್ಲಿ ಮತ್ತಷ್ಟು ಏರಿಕೆ

ABOUT THE AUTHOR

...view details