ಕರ್ನಾಟಕ

karnataka

ETV Bharat / bharat

'ಮಿಷನ್ ಸಾಗರ್': ಆಹಾರ ಸಾಮಗ್ರಿಯೊಂದಿಗೆ ಎರಿಟ್ರಿಯಾ ತಲುಪಿದ ಭಾರತೀಯ ನೌಕಾ ಹಡಗು

ಸಾಗರ್ -2, ಇದು ನೈಸರ್ಗಿಕ ವಿಕೋಪಗಳು ಹಾಗೂ ಕೋವಿಡ್​ ಸಾಂಕ್ರಾಮಿಕದಿಂದ ಹೊರಬರಲು ಸ್ನೇಹಿ ರಾಷ್ಟ್ರಗಳಿಗೆ ನೆರವು ನೀಡಲು ಭಾರತ ಸರ್ಕಾರ ಜಾರಿಗೆ ತಂದ ಅಭಿಯಾನವಾಗಿದೆ. ಇದೀಗ ಮಿಷನ್ ಸಾಗರ್​ನಡಿ ಎರಿಟ್ರಿಯಾ ದೇಶಕ್ಕೆ ಭಾರತ ಆಹಾರ ನೆರವು ನೀಡಿದೆ.

Mission Sagar II
ಮಿಷನ್ ಸಾಗರ್

By

Published : Nov 7, 2020, 3:01 PM IST

ವಿಶಾಖಪಟ್ಟಣಂ: ‘ಸಾಗರ್ -2’ ಮಿಷನ್​​ ಭಾಗವಾಗಿ, ಭಾರತೀಯ ನೌಕಾ ಹಡಗು (ಐಎನ್​ಎಸ್) ಐರಾವತ್ ಆಹಾರ ಸಾಮಗ್ರಿಗಳನ್ನು ಹೊತ್ತು ಎರಿಟ್ರಿಯಾ ದೇಶದ ಮಾಸಾವಾ ಬಂದರು ತಲುಪಿದೆ.

ಸಾಗರ್ -2, ಇದು ನೈಸರ್ಗಿಕ ವಿಕೋಪಗಳು ಹಾಗೂ ಕೋವಿಡ್​ ಸಾಂಕ್ರಾಮಿಕದಿಂದ ಹೊರಬರಲು ಸ್ನೇಹಿ ರಾಷ್ಟ್ರಗಳಿಗೆ ನೆರವು ನೀಡಲು ಭಾರತ ಸರ್ಕಾರ ಜಾರಿಗೆ ತಂದ ಅಭಿಯಾನವಾಗಿದೆ. ಇದೀಗ ಐಎನ್​ಎಸ್​ ಐರಾವತ್ ಮೂಲಕ ಎರಿಟ್ರಿಯಾ ದೇಶಕ್ಕೆ ಆಹಾರ ನೆರವು ನೀಡಲಾಗಿದೆ.

ಐಎನ್​ಎಸ್ ಐರಾವತ್

ಸಾಗರ್ ಮಿಷನ್​ (SAGAR -Security and Growth for All in the Region), ಪ್ರಧಾನಿ ನರೇಂದ್ರ ಮೋದಿಯವರ ಮಹತ್ತರ ಅಭಿಯಾನವಾಗಿದ್ದು, ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಬರುವ ದೇಶಗಳಿಗೆ ಸಹಾಯ ಹಸ್ತ ಚಾಚಿ, ಸಾಗರೋತ್ತರ ರಾಷ್ಟ್ರಗಳೊಂದಿಗಿನ ಭಾರತದ ಬಾಂಧವ್ಯ ಮತ್ತಷ್ಟು ಬಲಪಡಿಸಲು ಆರಂಭಿಸಲಾಗಿದೆ. ರಕ್ಷಣಾ ಮತ್ತು ವಿದೇಶಾಂಗ ಸಚಿವಾಲಯಗಳು, ಭಾರತ ಸರ್ಕಾರದ ಇತರ ಏಜೆನ್ಸಿಗಳೊಂದಿಗೆ ಸೇರಿ ಭಾರತೀಯ ನೌಕಾಪಡೆಯು ಸಾಗರ್ ಮಿಷನ್​ನಡಿ ಕಾರ್ಯಾಚರಣೆ ನಡೆಸುತ್ತಿದೆ.

ದೇಶೀ ನಿರ್ಮಿತ ಐಎನ್ಎಸ್ ಐರಾವತ್ 2009ರಿಂದ ಕಾರ್ಯ ನಿರ್ವಹಿಸುತ್ತಿದ್ದು, ವಿಪತ್ತು ಪರಿಹಾರ ಕಾರ್ಯಾಚರಣೆಗಳಿಗೆ ಇದನ್ನು ಬಳಸಲಾಗುತ್ತಿದೆ.

ABOUT THE AUTHOR

...view details