ಕರ್ನಾಟಕ

karnataka

By

Published : Dec 30, 2020, 4:33 AM IST

Updated : Dec 30, 2020, 5:12 AM IST

ETV Bharat / bharat

'ಜಮ್ಮು ಕಾಶ್ಮೀರ ಭಾರತ-ಪಾಕ್​​ ನಡುವಿನ ಶಾಂತಿ ಸೇತುವೆಯಾಗಬೇಕು'

ದೇಶದ ಸಂವಿಧಾನದ ಅಡಿಯಲ್ಲಿ ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ವಾಪಸ್​ ತರಬೇಕೆಂದು ಗುಪ್ಕಾರ್ ಮೈತ್ರಿಕೂಟ ಹೋರಾಡುತ್ತಿದೆ ಎಂದು ಮುಫ್ತಿ ಹೇಳಿದ್ದಾರೆ.

Mehbooba Mufti
ಮೆಹಬೂಬಾ ಮುಫ್ತಿ

ಶ್ರೀನಗರ ( ಜಮ್ಮು ಕಾಶ್ಮೀರ) : ಜಮ್ಮು ಕಾಶ್ಮೀರವನ್ನು ಭಾರತ ಮತ್ತು ಪಾಕಿಸ್ತಾನದ ನಡುವಿನ ಶಾಂತಿಯ ಸೇತುವೆಯನ್ನಾಗಿ ರೂಪಿಸುವುದೇ ಪೀಪಲ್ಸ್​ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯ ಉದ್ದೇಶ ಎಂದು ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ಶ್ರೀನಗರದಲ್ಲಿ ಮಾತನಾಡಿದ ಮೆಹಬೂಬಾ ಮುಫ್ತಿ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವ ಮೂಲಕ ಸಂವಿಧಾನಕ್ಕೆ ಅಗೌರವ ಸೂಚಿಸಿದೆ ಎಂದು ಆರೋಪಿಸಿದ್ದು, ದೇಶದ ಸಂವಿಧಾನದ ಅಡಿಯಲ್ಲಿ ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ವಾಪಸ್​ ತರಬೇಕೆಂದು ಗುಪ್ಕಾರ್ ಮೈತ್ರಿಕೂಟ ಹೋರಾಡುತ್ತಿದೆ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಶ್ರೀನಗರದಲ್ಲಿ ಭದ್ರತಾ ಪಡೆ-ಭಯೋತ್ಪಾದಕರ ನಡುವೆ ಗುಂಡಿನ ಕಾಳಗ

ಇದೇ ವೇಳೆ ಜಮ್ಮು ಕಾಶ್ಮೀರದ ಎಲ್ಲಾ ವ್ಯಾಪಾರ ಮಾರ್ಗಗಳನ್ನು ಕೇಂದ್ರ ಸರ್ಕಾರ ಮುಚ್ಚಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಜಾರಿ ತಂದಿದೆ. ಆದರೆ ಭಾರಿ ಚಳಿಯಲ್ಲಿ ರೈತರು ರಸ್ತೆಗಳಲ್ಲಿ ನಿಂತು ಪ್ರತಿಭಟನೆ ಮಾಡುತ್ತಿದ್ದಾರೆ. ಕಾನೂನುಗಳನ್ನು ರೈತರು ಒಪ್ಪಿಕೊಳ್ಳದಿದ್ದರೆ ಒಳ್ಳೆಯದಾಗುತ್ತದೆ. ಜನರಿಗೆ ಒಳ್ಳೆಯದಾಗದ ಕಾನೂನುಗಳನ್ನು ನೀವು ಜಾರಿಗೆ ತಂದರೆ ನೀವು ದೇಶದ ಸಂವಿಧಾನಕ್ಕೆ ಅಗೌರವ ಸೂಚಿಸಿದ್ದೀರಿ ಎಂದು ಅರ್ಥ ಎಂದು ಪೀಪಲ್ಸ್​ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥೆ ಅಸಮಾಧಾನ ವ್ಯಕ್ತಪಡಿಸಿದರು.

Last Updated : Dec 30, 2020, 5:12 AM IST

ABOUT THE AUTHOR

...view details