ಕರ್ನಾಟಕ

karnataka

ಇದು ಮೋದಿ ಚಾಯ್​​ ಅಲ್ಲ... ಮತ್ತಿನ್ಯಾರದ್ದು? : ಯುವಕನ ಹೊಸ ರಣತಂತ್ರ!

ದೆಹಲಿ ಚುನಾವಣಾ ಕಣ ರಂಗೇರುತ್ತಿದ್ದು, ಗೆಲುವಿನ ಕುದುರೆ ಏರಲು ಎಲ್ಲಾ ಪಕ್ಷಗಳು ಪ್ರಯತ್ನಿಸುತ್ತಿವೆ. ಹಾಗೆಯೇ ಆಮ್​ ಆದ್ಮಿ ಪಕ್ಷವೂ ಅಧಿಕಾರ ಉಳಿಸಿಕೊಳ್ಳುವತ್ತ ತಮ್ಮ ಚಿತ್ತ ಹರಿಸಿದ್ದು, ಈ ಪಕ್ಷಕ್ಕಾಗಿ ಇಲ್ಲೊಬ್ಬ ಯುವಕ ಚಹಾ ಮಾರಾಟ ಮಾಡುತ್ತಿದ್ದಾನೆ.

By

Published : Jan 23, 2020, 7:16 PM IST

Published : Jan 23, 2020, 7:16 PM IST

Updated : Jan 23, 2020, 8:01 PM IST

chai wala in support of Kejriwal
ಚಹಾ ಅಂಗಡಿಯಿಟ್ಟರುವ ಯುವಕ

ನವದೆಹಲಿ:ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಈ ಚುನಾವಣೆ ಗೆಲ್ಲಲು ಅರವಿಂದ್​ ಕೇಜ್ರಿವಾಲ್​ ಶತಾಯಗತಾಯ ಪ್ರಯತ್ನಿಸುತ್ತಿದ್ದು, ಕೇಂದ್ರ ಸರ್ಕಾರದ ದೂಷಣೆ ಮಾಡುವುದನ್ನು ಬಿಟ್ಟು ತಮ್ಮ ಸಾಧನೆಗಳ ಮೂಲಕವೇ ಜನರ ಮನ ಮುಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಆಮ್​ ಆದ್ಮಿ ಪಕ್ಷದ ಮುಂದೆ ಯುವಕನೊಬ್ಬ ಚಹಾ ಅಂಗಡಿ ತೆರೆದಿರುವುದು ಸಹ ಪಕ್ಷಕ್ಕೆ ಪ್ಲಸ್​ ಪಾಯಿಂಟ್​ ಆಗಿ ಪರಿಣಮಿಸಿದೆ.

ಆಮ್ ಆದ್ಮಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಎಂಬಿಎ ಓದಿರುವ ವಿದ್ಯಾರ್ಥಿ ಪ್ರಫುಲ್ ಬಿಲರ್ ಎಂಬಾತ ಈ ಚಹಾ ಅಂಗಡಿ ತೆರೆದಿದ್ದು, ಅಂಗಡಿ ತುಂಬಾ ಆಮ್​ ಆದ್ಮಿ ಪಕ್ಷದ ಹಾಗೂ ಅರವಿಂದ್​ ಕೇಜ್ರಿವಾಲ್​​ರ ಚಿತ್ರಗಳನ್ನು ಅಂಟಿಸಿದ್ದಾನೆ.

ಇನ್ನು ಪ್ರಫುಲ್ ಬಿಲರ್ ಗುಜರಾತ್​ನ ಅಹಮದಾಬಾದ್‌ನಿಂದ ಇಲ್ಲಿಗೆ ಪಯಣ ಬೆಳೆಸಿದ್ದು, ಕೇಜ್ರಿವಾಲ್ ಸರ್ಕಾರ ಮಾಡಿರುವ ಕೆಲಸಗಳಿಂದ ಹಾಗೂ ದೆಹಲಿಯಲ್ಲಿ ಮಾಡಿದ ಸಾಧನೆಗಳಿಂದ ನಾನು ಪ್ರಭಾವಿತನಾಗಿದ್ದೇನೆ. ಆದ್ದರಿಂದ ಈ ಚುನಾವಣೆಯಲ್ಲಿ ಕೇಜ್ರಿವಾಲ್​ ಅವರು ಗೆದ್ದು ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಿ ಎಂಬ ಹಂಬಲದಿಂದ ನಾನು ಈ ಕಾರ್ಯಕ್ಕೆ ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ಈ ಚಹಾ ಅಂಗಡಿಯನ್ನು ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಚಹಾ ಕುಡಿಯುವ ಮೂಲಕ ಉದ್ಘಾಟನೆ ಮಾಡಿದ್ದು, ಪ್ರಫುಲ್ಲಾ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ, ಈ ಚಹಾ ಅಂಗಡಿಯಿಂದ ದೆಹಲಿಯ ಜನರನ್ನು ತಲುಪಿ ಆಮ್​ ಆದ್ಮಿ ಪಕ್ಷದ ಗೆಲುವಿಗೆ ಈ ಯುವಕ ಶ್ರಮಿಸುತ್ತಿದ್ದು, ಮತದಾರ ಬಂಧುಗಳು ಕೇಜ್ರಿವಾಲ್​ ಕೈ ಹಿಡಿಯುವರೇ ಎಂಬುದು ಚುನಾವಣೆ ನಂತರವೇ ತಿಳಿಯಬೇಕಿದೆ.

2014 ರಲ್ಲಿ ಚಾಯ್​​ ಪೇ ಚರ್ಚಾ ಮೂಲಕ ದೊಡ್ಡ ಹವಾ ಎಬ್ಬಿಸಿದ್ದ ಮೋದಿ, ಚುನಾವಣೆಯಲ್ಲಿ ಪವಾಡವನ್ನೇ ಸೃಷ್ಟಿಸಿದ್ದರು. ಇದೀಗ ಇದೇ ಮಂತ್ರವನ್ನ ಉಪಯೋಗಿಸಿ ಗುಜರಾತ್​ನ ಬಾಲಕ ಹಾಗೂ ಆಮ್​ ಆದ್ಮಿ ಪಕ್ಷ ಕಮಾಲ್​ ಮಾಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

Last Updated : Jan 23, 2020, 8:01 PM IST

For All Latest Updates

ABOUT THE AUTHOR

...view details