ಕರ್ನಾಟಕ

karnataka

ETV Bharat / bharat

ಪ್ರೀತಿ ಅಂದ್ರೆ ಇದಲ್ವಾ: ಹೆಂಡ್ತಿಯ ಸುಖ ನಿದ್ರೆಗಾಗಿ ವಿಮಾನದಲ್ಲಿ 6 ಗಂಟೆ ನಿಂತು ಪ್ರಯಾಣಿಸಿದ ಗಂಡ!

ಕಟ್ಟಿಕೊಂಡ ಹೆಂಡತಿಗಾಗಿ ಇಲ್ಲೊಬ್ಬ ಗಂಡ ಬರೋಬ್ಬರಿ ಆರು ಗಂಟೆಗಳ ಕಾಲ ವಿಮಾನದಲ್ಲಿ ಎದ್ದು ನಿಂತಿರುವ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ತರೇಹವಾರಿ ಕಮೆಂಟ್​ ಬರ್ತಿವೆ.

ಹೆಂಡತಿಗಾಗಿ ಆರು ತಾಸು ನಿಂತುಕೊಂಡೇ ಪ್ರಯಾಣ

By

Published : Sep 10, 2019, 5:12 PM IST

ಹೈದರಾಬಾದ್​: ಕಟ್ಟಿಕೊಂಡ ಹೆಂಡತಿಯನ್ನ ಪ್ರತಿದಿನ ಹೊಡೆದು-ಬಡೆದು ಕಿರುಕುಳ ನೀಡುವ ಅನೇಕ ಗಂಡದಿರು ಇಂದು ನಮ್ಮ ಮಧ್ಯೆ ಸಿಗುತ್ತಾರೆ. ಆದರೆ ಬೆರಳು ಎಣಿಕೆಯಷ್ಟು ಗಂಡದಿಂದ ತಮ್ಮ ಪ್ರೀತಿಯ ಮಡದಿಗಾಗಿ ಎಲ್ಲ ತ್ಯಾಗಕ್ಕೂ ಸಿದ್ದರಾಗಿರುತ್ತಾರೆ. ಅಂತಹ ಘಟನೆವೊಂದು ಇದೀಗ ನಡೆದಿದೆ.

ಗಂಡ-ಹೆಂಡತಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗಂಡ ಕುಳಿತುಕೊಳ್ಳಬೇಕಾದ ಸೀಟ್​​​ ಮೇಲೆ ಹೆಂಡತಿ ತಲೆಯಿಟ್ಟು ಏಕಾಏಕಿ ನಿದ್ರೆಗೆ ಜಾರಿದ್ದಾಳೆ. ಈ ವೇಳೆ ಆಕೆಗೆ ಯಾವುದೇ ರೀತಿಯಲ್ಲೂ ತೊಂದರೆ ಮಾಡಬಾರದು ಎಂಬ ಉದ್ದೇಶದಿಂದ ಗಂಡ ಬರೋಬ್ಬರಿ 6 ಗಂಟೆಗಳ ಕಾಲ ನಿಂತುಕೊಂಡೇ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ.

ಈ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಬಹಳಷ್ಟು ಮಂದಿ ಕಮೆಂಟ್​​ ಮಾಡ್ತಿದ್ದಾರೆ. ಕೆಲವರು ಇದಲ್ವಾ ನಿಜವಾದ ಪ್ರೀತಿ ಎಂದರೆ ಎಂದು ಕಮೆಂಟ್​ ಮಾಡಿದ್ದರೆ, ಇನ್ನು ಕೆಲವರು ನಿಜಕ್ಕೂ ಆತನ ನಿರ್ಧಾರ ಹೆಮ್ಮೆ ಪಡುವಂತಹದ್ದು ಎಂದು ಬರೆದಿದ್ದಾರೆ.

ABOUT THE AUTHOR

...view details