ಕರ್ನಾಟಕ

karnataka

ETV Bharat / bharat

ಕೋವಿಡ್​ ಪರೀಕ್ಷಾ ಕಿಟ್​ಗಳನ್ನು ಸಾಧ್ಯವಾದಷ್ಟು ಕಡಿಮೆ ದರದಲ್ಲಿ ನೀಡಿ: ದೆಹಲಿ ಹೈಕೋರ್ಟ್

ಜಿಎಸ್‌ಟಿ ಸೇರಿದಂತೆ ಪ್ರತಿ ಕಿಟ್‌ಗೆ 400 ರೂ.ಗಿಂತ ಕಡಿಮೆ ಬೆಲೆಗೆ ವಿತರಿಸಲು ನ್ಯಾಯಮೂರ್ತಿ ನಜ್ಮಿ ವಾಜಿರಿ ನಿರ್ದೇಶನ ನೀಡಿದರು.

By

Published : Apr 26, 2020, 11:27 PM IST

ದೆಹಲಿ ಹೈಕೋರ್ಟ್
ದೆಹಲಿ ಹೈಕೋರ್ಟ್

ನವದೆಹಲಿ: ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ವೈದ್ಯಕೀಯ ಬಿಕ್ಕಟ್ಟು ದೇಶಕ್ಕೆ ಎದುರಾಗಿರುವ ಹಿನ್ನೆಲೆ ಕೋವಿಡ್​ ಸಂಬಂಧಿತ ಪರೀಕ್ಷೆಯ ಕಿಟ್​ಗಳನ್ನು ಸಾರ್ವಜನಿಕರಿಗೆ ಸಾಧ್ಯವಾದಷ್ಟು ಕಡಿಮೆ ವೆಚ್ಚದಲ್ಲಿ ಲಭ್ಯವಾಗುವಂತೆ ನೀಡಲು ದೆಹಲಿ ಹೈಕೋರ್ಟ್ ನಿರ್ದೇಶಿಸಿದೆ.

ಅಪರೂಪದ ಮೆಟಾ ಬಾಲಿಕ್ಸ್ ಮತ್ತು ಆರ್ಕ್ ಫಾರ್ಮಾಸುಟಿಕಲ್ಸ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸಿತು. ಕಿಟ್‌ಗಳ ಆಮದುದಾರ ಪ್ರತಿವಾದಿ ಮ್ಯಾಟ್ರಿಕ್ಸ್‌ನಿಂದ 7.24 ಲಕ್ಷ ಕೋವಿಡ್​-19 ಪರೀಕ್ಷಾ ಕಿಟ್‌ಗಳನ್ನು ಬಿಡುಗಡೆ ಮಾಡುವಂತೆ ಕೋರಿ ಅವುಗಳನ್ನು ತಲುಪಿಸುವ ಮೊದಲು ಪೂರ್ಣ ಹಣ ಪಾವತಿಗಾಗಿ ಕೋರಿತ್ತು. ದೇಶದಲ್ಲಿ ಪರೀಕ್ಷಾ ಕಿಟ್‌ಗಳ ವಿತರಣೆಯ ಕುರಿತು ಎರಡು ಕಂಪನಿಗಳು ಮ್ಯಾಟ್ರಿಕ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿವೆ.

ನ್ಯಾಯಮೂರ್ತಿ ನಜ್ಮಿ ವಾಜಿರಿ ಅವರು ಮೂರೂ ಕಂಪನಿಗಳಿಗೆ ಚೀನಾದಿಂದ 10 ಲಕ್ಷ ಪರೀಕ್ಷಾ ಕಿಟ್‌ಗಳನ್ನು ಆಮದು ಮಾಡಿಕೊಳ್ಳಬೇಕು ಮತ್ತು ಜಿಎಸ್‌ಟಿ ಸೇರಿದಂತೆ ಪ್ರತಿ ಕಿಟ್‌ಗೆ 400 ರೂ.ಗಿಂತ ಕಡಿಮೆ ಬೆಲೆಗೆ ಇಲ್ಲಿ ವಿತರಿಸುವಂತೆ ನಿರ್ದೇಶನ ನೀಡಿದರು.

ABOUT THE AUTHOR

...view details