ಕರ್ನಾಟಕ

karnataka

ETV Bharat / bharat

ಬರೋಬ್ಬರಿ 2 ಕೆಜಿ ತೂಕದ ಮೂಸಂಬಿ ಬೆಳೆದ ರೈತ!! - 2 ಕೆಜಿ ತೂಕದ ಮೂಸಂಬಿ ಬೆಳೆದ ಮಧ್ಯಪ್ರದೇಶ ರೈತ

ಇದಕ್ಕೂ ಮೊದಲು ಭಗತ್ ಅವರು 500 ಗ್ರಾಂ ತೂಕದ ನಿಂಬೆ ಮತ್ತು 40 ಕೆಜಿ ತೂಕದ ಹಲಸಿನ ಹಣ್ಣನ್ನು ಬೆಳೆದು ಪರಿಚಿತರಾಗಿದ್ದರು..

Ramdayal Rawat aka Bhagat
ರೈತ ರಾಮದಯಾಲ್ ರಾವತ್ ಅಕಾ ಭಗತ್

By

Published : Sep 21, 2020, 10:10 PM IST

ಶಿವಪುರಿ(ಮಧ್ಯಪ್ರದೇಶ): ಇಲ್ಲಿನ ಬೈರಾದ್​ ಗ್ರಾಮದ ರೈತರೊಬ್ಬರು ಸುಮಾರು 2 ಕೆಜಿ ತೂಗುವ ಮೂಸಂಬಿ ಹಣ್ಣುಗಳನ್ನು ಬೆಳೆದು ಅಚ್ಚರಿ ಮೂಡಿಸಿದ್ದಾರೆ.

ರೈತ ರಾಮ ದಯಾಲ್ ರಾವತ್ ಅಕಾ ಭಗತ್, ಸುಮಾರು 2.1ಕೆಜಿ ತೂಕದ ಹಣ್ಣುಗಳನ್ನು ಬೆಳೆದಿದ್ದಾರೆ. ಈ ತೂಕದ ಹಣ್ಣುಗಳನ್ನು ಹೊಂದಿರುವ ಮೂಸಂಬಿ ಗಿಡವನ್ನು ಇಸ್ರೇಲ್​ನಿಂದ ತನ್ನ ಸಹೋದರ ತಂದಿದ್ದಾನೆ ಎಂದು ರೈತ ರಾಮದಯಾಲ್ ಹೇಳಿದ್ದಾರೆ.

ನನ್ನ ಸಹೋದರ ಎರಡು ಮೂಸಂಬಿ ಗಿಡಗಳನ್ನು ಇಸ್ರೇಲ್​ನಿಂದ ತಂದಿದ್ದಾನೆ. ಅವುಗಳನ್ನು ಎಚ್ಚರಿಕೆಯಿಂದ ನೆಟ್ಟು ನಿಯಮಿತವಾಗಿ ಗೊಬ್ಬರ ಹಾಗೂ ನೀರನ್ನು ಹಾಕಿ ಪೋಷಿಸುತ್ತಾ ಬಂದಿದ್ದೇನೆ ಎಂದು 60 ವರ್ಷದ ರೈತ ರಾಮದಯಾಲ್ ಸಂತೋಷದಿಂದ ಹೇಳಿದ್ದಾರೆ.

ರೈತ ರಾಮದಯಾಲ್ ರಾವತ್ ಅಕಾ ಭಗತ್

ನನ್ನನ್ನು ನಂಬದವರು ಯಾರೇ ಇದ್ದರು ನನ್ನ ಜಮೀನಿಗೆ ಬರಬಹುದು. ತೋಟದಲ್ಲಿರುವ ಮೂಸಂಬಿ ಮರವನ್ನು ನೀವೇ ನೋಡಬಹುದು. ನನಗೆ ಕೃಷಿ ಅಂದರೆ ಅಚ್ಚುಮೆಚ್ಚು. ಅದರಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಲು ಇಷ್ಟಪಡುತ್ತೇನೆ ಎಂದು ಹುರುಪಿನಿಂದ ಹೇಳುತ್ತಾರೆ ಭಗತ್ ಜಿ.

ಇದಕ್ಕೂ ಮೊದಲು ಭಗತ್ ಅವರು 500 ಗ್ರಾಂ ತೂಕದ ನಿಂಬೆ ಮತ್ತು 40 ಕೆಜಿ ತೂಕದ ಹಲಸಿನ ಹಣ್ಣನ್ನು ಬೆಳೆದು ಪರಿಚಿತರಾಗಿದ್ದರು.

ABOUT THE AUTHOR

...view details