ಕರ್ನಾಟಕ

karnataka

ನೌಕರರ ಭವಿಷ್ಯ ನಿಧಿ ಮೇಲೂ ಕೊರೊನಾ ಕರಿಛಾಯೆ: ಎರಡು ಕಂತುಗಳಲ್ಲಿ ಬಡ್ಡಿ ನೀಡಲು ನಿರ್ಧಾರ!

ಮಹಾಮಾರಿ ಕೊರೊನಾ ವೈರಸ್​​ ನೌಕರರ ಭವಿಷ್ಯ ನಿಧಿ ಮೇಲೂ ಕೆಟ್ಟ ಪರಿಣಾಮ ಬೀರಿದ್ದು,ಹೀಗಾಗಿ ಎರಡು ಕಂತುಗಳಲ್ಲಿ ಬಡ್ಡಿ ದರ ನೀಡಲು ನಿರ್ಧರಿಸಲಾಗಿದೆ.

By

Published : Sep 9, 2020, 8:11 PM IST

Published : Sep 9, 2020, 8:11 PM IST

Employees' Provident Fund Interest
Employees' Provident Fund Interest

ನವದೆಹಲಿ: ಮಹಾಮಾರಿ ಕೊರೊನಾ ವೈರಸ್​ ಎಲ್ಲ ವಲಯಗಳ ಮೇಲೂ ತನ್ನ ಪ್ರಭಾವ ಬೀರಿದ್ದು, ಇದೀಗ ನೌಕರರ ಭವಿಷ್ಯ ನಿಧಿ ಮೇಲೂ ಇದರ ಕರಿಛಾಯೆ ಮೂಡಿದೆ. ಹೀಗಾಗಿ ಎರಡು ಕಂತುಗಳಲ್ಲಿ ಬಡ್ಡಿ ದರ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ.

ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್​ಐ)2019-20 ಹಣಕಾಸು ವರ್ಷದಲ್ಲಿ ಶೇ.8.5ರಷ್ಟು ಬಡ್ಡಿ ಪಾವತಿಯನ್ನ ಶೇ. 8.15 ಹಾಗೂ ಶೇ.0.35 ಎರಡು ಪ್ರತ್ಯೇಕ ಕಂತುಗಳಲ್ಲಿ ಪಾವತಿ ಮಾಡಲು ನಿರ್ಧರಿಸಲಾಗಿದೆ.ಶೇ. 0.35 ಬಡ್ಡಿ ಹಣವನ್ನು ಡಿಸೆಂಬರ್‌ನಲ್ಲಿ ಪಾವತಿಸಲಾಗುವುದು ಎಂದು ತಿಳಿಸಿದೆ. ಮಹಾಮಾರಿ ಕೊರೊನಾ ವೈರಸ್​ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ. ಆದರೆ ಬಡ್ಡಿಗೆ ಕತ್ತರಿ ಹಾಕದಿರಲು ಸರ್ಕಾರ ನಿರ್ಧರಿಸಿದೆ.

ಶೇ. 8.5ರ ಬಡ್ಡಿದರ 7 ವರ್ಷದ ಕನಿಷ್ಠ ಬಡ್ಡಿದರವಾಗಿದೆ. ಕಳೆದ ಮಾರ್ಚ್​​ನ ಮೊದಲ ವಾರದಲ್ಲಿ ಶೇ.8.5ರ ಬಡ್ಡಿ ದರವನ್ನು ಇಪಿಎಫ್​ಒ ಘೋಷಿಸಿತ್ತು. ಹಿಂದಿನ ಹಣಕಾಸು ವರ್ಷದಲ್ಲಿ ಇಪಿಎಫ್​ಒ ತನ್ನ ಚಂದಾದಾರರಿಗೆ ಶೇ.8.65ರಷ್ಟು ಆದಾಯ ನೀಡಿತ್ತು.

ABOUT THE AUTHOR

...view details