ಕರ್ನಾಟಕ

karnataka

By

Published : Feb 10, 2021, 1:10 PM IST

ETV Bharat / bharat

ಲೈವ್​ ವಿಡಿಯೋ: ಕೆನಾಲ್​ನಲ್ಲಿ ಕೊಚ್ಚಿ ಹೋದ ಕಾರು, ಮೂವರು ಸಾವು.. ಸಾವಿಗೂ ಮುನ್ನ ಲಿಫ್ಟ್​ ಕೇಳಿದ್ಲು ಶಿಕ್ಷಕಿ!

ತೆಲಂಗಾಣದ ವರಂಗಲ್​ ಗ್ರಾಮೀಣ ಜಿಲ್ಲೆಯಲ್ಲಿ ದುರಂತವೊಂದು ಸಂಭವಿಸಿದೆ. ನಿಯಂತ್ರಣ ತಪ್ಪಿದ ಕಾರೊಂದು ತುಂಬಿ ಹರಿಯುತ್ತಿದ್ದ ಕೆನಾಲ್​ನಲ್ಲಿ ಕೊಚ್ಚಿ ಹೋಗಿದೆ. ದುರ್ಘಟನೆಯ ದೃಶ್ಯ ಮನಕಲಕುವಂತಿದೆ.

Car washed away into canal, Car washed away into canal in Warangal, Warangal tragedy, Warangal tragedy news, ಕೆನಾಲ್​ನಲ್ಲಿ ಕೊಚ್ಚಿ ಹೋದ ಕಾರು, ವರಂಗಲ್​ನಲ್ಲಿ ಕೆನಾಲ್​ನಲ್ಲಿ ಕೊಚ್ಚಿ ಹೋದ ಕಾರು, ವರಂಗಲ್​ ದುರಂತ, ವರಂಗಲ್​ ದುರಂತ ಸುದ್ದಿ,
ಕೆನಾಲ್​ನಲ್ಲಿ ಕೊಚ್ಚಿ ಹೋದ ಕಾರು, ಮೂವರು ಸಾವು

ವರಂಗಲ್​:ಇಲ್ಲಿನ ಎಸ್​ಆರ್​ಎಸ್​ಪಿ ಕೆನಾಲ್​ನಲ್ಲಿ ಕಾರೊಂದು ಕೊಚ್ಚಿ ಹೋಗಿರುವ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ಸಂಭವಿಸಿದೆ.

ನಡೆದಿದ್ದೇನು?

ಕೆನಾಲ್​ನಲ್ಲಿ ಕೊಚ್ಚಿ ಹೋದ ಕಾರು, ಮೂವರು ಸಾವು

ವರಂಗಲ್​ನಿಂದ ತೋರ್ರೂರ್​ ಗ್ರಾಮಕ್ಕೆ ಮೂವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಕ್ರಮದಲ್ಲಿ ಸಂಗಂ ತಾಲೂಕಿನ ತಿಗರಾಜು ಪಲ್ಲಿ ಗ್ರಾಮದ ಬಳಿ ಸರ್ಕಾರಿ ಶಾಲೆಯ ಶಿಕ್ಷಕಿ ಸರಸ್ವತಿ ಲಿಫ್ಟ್​ ಕೇಳಿ ಕಾರಿನಲ್ಲಿ ಹತ್ತಿದ್ದಾರೆ.

ಪರ್ವತಗಿರಿ ತಾಲೂಕಿನ ಕೊಂಕಪಾಕ ಬಳಿ ಪ್ರಯಾಣಿಸುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಕೆನಾಲ್​ಗೆ ಉರುಳಿ ಬಿದ್ದಿದೆ. ತುಂಬಿ ಹರಿಯುತ್ತಿದ್ದ ಕೆನಾಲ್​ನಲ್ಲಿ ಕಾರು ಕೊಚ್ಚಿಕೊಂಡು ಹೋಗಿದೆ. ಈ ವೇಳೆ ಕಾರಿನಲ್ಲಿದ್ದ ಶಿಕ್ಷಕಿ ಸರಸ್ವತಿ, ಶ್ರೀಧರ್​ ಮತ್ತು ಚಾಲಕ ರಾಕೇಶ್​ ಕಾರಿನಲ್ಲೇ ಸಿಲುಕಿಕೊಂಡು ಮೃತಪಟ್ಟಿದ್ದಾರೆ. ಆದ್ರೆ ವಿಜಯ ಭಾಸ್ಕರ್​ನನ್ನು ಸ್ಥಳೀಯರು ಕಾಪಾಡುವಲ್ಲಿ ಯಶಸ್ಸಾಗಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವ

ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತದೇಹಗಳನ್ನು ಕೆನಾಲ್​ನಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.

ಘಟನೆಗೆ ತಕ್ಷಣ ಸ್ಪಂದಿಸಿದ ಪಂಚಾಯತಿ ರಾಜ್ ಸಚಿವ ಎರ್ರಾಬೆಲ್ಲಿ ದಯಾಕರ್ ರಾವ್ ಸ್ಥಳಕ್ಕೆ ಭೇಟಿ ನೀಡಿ ಪ್ರಯಾಣಿಕರ ಸಾವಿನ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದರು. ಸರ್ಕಾರ ಅವರಿಗೆ ಬೆಂಬಲ ನೀಡಲಿದೆ ಎಂದು ಸಚಿವರು ಭರವಸೆ ನೀಡಿದರು.

ABOUT THE AUTHOR

...view details