ಕರ್ನಾಟಕ

karnataka

By

Published : May 11, 2020, 1:58 PM IST

ETV Bharat / bharat

ಈ ಬಾರಿ ಹೈದರಾಬಾದ್​ನಲ್ಲಿ ಜೀವಂತ ಮೀನಿನ ಔಷಧ ನೀಡಲ್ಲ..ಕಾರಣ?

"ಕಳೆದ 175 ವರ್ಷಗಳಿಂದ ನಾವು ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಜನರಿಗೆ ಜೀವಂತ ಮೀನಿನ ಔಷಧವನ್ನು ವಿತರಿಸುತ್ತಿದ್ದೇವೆ. ಆದರೆ, ಈ ಬಾರಿ ಕೋವಿಡ್-19 ಸೃಷ್ಟಿಸಿರುವ ಪರಿಸ್ಥಿತಿಯಿಂದಾಗಿ ಔಷಧಗಳನ್ನು ವಿತರಿಸದಿರಲು ನಿರ್ಧರಿಸಿದ್ದೇವೆ. ಈ ಬಗ್ಗೆ ಹರಡಿರುವ ಯಾವುದೇ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ನಾವು ಜನರಲ್ಲಿ ಮನವಿ ಮಾಡುತ್ತೇವೆ" ಎಂದು ಬತಿನಿ ಹರಿನಾಥ್ ಗೌಡ್ ಹೇಳಿದ್ದಾರೆ.

Bathini Harinath Goud
ಬತಿನಿ ಹರಿನಾಥ್ ಗೌಡ್

ಹೈದರಾಬಾದ್ : ಕೊರೊನಾ ವೈರಸ್​ ಭೀತಿಯಿಂದಾಗಿ ಈ ಬಾರಿ ಅಸ್ತಮಾ ರೋಗಿಗಳಿಗೆ ಜೀವಂತ ಮೀನಿನ ಔಷಧವನ್ನು ವಿತರಿಸಲಾಗುವುದಿಲ್ಲ ಎಂದು ಔಷಧ ವಿತರಣೆಯ ಮುಖ್ಯ ಸಂಘಟಕ ಬತಿನಿ ಹರಿನಾಥ್ ಗೌಡ್ ತಿಳಿಸಿದ್ದಾರೆ.

ನಾವು ಔಷಧ ವಿತರಿಸುತ್ತೇವೆ ಎನ್ನುವ ಬಗೆಗಿನ ಯಾವುದೇ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಹರಿನಾಥ್ ಜನರಲ್ಲಿ ಮನವಿ ಮಾಡಿದ್ದಾರೆ.

ಪ್ರತಿವರ್ಷ ಬತಿನಿ ಹರಿನಾಥ್ ಗೌಡ್ ಮತ್ತು ಅವರ ಕುಟುಂಬವು ಹೈದರಾಬಾದ್‌ನಲ್ಲಿ ನಡೆಯುವ ಪ್ರಸಿದ್ಧ ನಾಂಪಲ್ಲಿ ಎಕ್ಸಿಬಿಷನ್ ಮೈದಾನದಲ್ಲಿ ಜೀವಂತ ಮೀನಿನ ಔಷಧವನ್ನು ವಿತರಿಸುತ್ತಾರೆ. ಅಂದ್ರೆ 'ಮುರ್ರೆಲ್' ಎಂಬ ಸಣ್ಣ ಗಾತ್ರದ ಜೀವಂತ ಮೀನುಗಳ ಬಾಯಲ್ಲಿ ಗಿಡಮೂಲಿಕೆಯಿಂದ ತಯಾರಿಸಿದ ಹಳದಿ ಲೇಹವನ್ನು ತುಂಬಿ ಅದನ್ನು ಅಸ್ತಮಾ ರೋಗಿಗಳ ಬಾಯಿಗೆ ತುರುಕಲಾಗುತ್ತದೆ. ಅದು ಗಂಟಲನ್ನು ಸ್ವಚ್ಛಗೊಳಿಸಿ ರೋಗಿಗಳು ಸುಲಭವಾಗಿ ಉಸಿರಾಡಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತದೆ.

ಪ್ರತಿವರ್ಷ ನಡೆಯುವ ಈ ಎಕ್ಸಿಬಿಷನ್​ನಲ್ಲಿ ಈ ಔಷಧ ಸೇವಿಸಲು ಸಾವಿರಾರು ರೋಗಿಗಳು ಬೇರೆ ಬೇರೆ ರಾಜ್ಯಗಳಿಂದ ಬರುತ್ತಾರೆ. ಹೀಗಾಗಿ ಪ್ರತಿವರ್ಷ ಈ ಕಾರ್ಯಕ್ರಮವನ್ನು ತೆಲಂಗಾಣ ರಾಜ್ಯ ಸರ್ಕಾರದ ಸಹಾಯದಿಂದ ನಡೆಸಲಾಗುತ್ತದೆ.

"ಕಳೆದ 175 ವರ್ಷಗಳಿಂದ ನಾವು ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಜನರಿಗೆ ಜೀವಂತ ಮೀನಿನ ಔಷಧವನ್ನು ವಿತರಿಸುತ್ತಿದ್ದೇವೆ. ಆದರೆ, ಈ ಬಾರಿ ಕೋವಿಡ್-19 ಸೃಷ್ಟಿಸಿರುವ ಪರಿಸ್ಥಿತಿಯಿಂದಾಗಿ ಔಷಧಗಳನ್ನು ವಿತರಿಸದಿರಲು ನಾವು ನಿರ್ಧರಿಸಿದ್ದೇವೆ. ಈ ಬಗ್ಗೆ ಹರಡಿರುವ ಯಾವುದೇ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ನಾವು ಜನರಲ್ಲಿ ಮನವಿ ಮಾಡುತ್ತೇವೆ" ಎಂದು ಬಾತಿನಿ ಹರಿನಾಥ್ ಗೌಡ್ ವಿಡಿಯೋವೊಂದರಲ್ಲಿ ಹೇಳಿದ್ದಾರೆ.

ABOUT THE AUTHOR

...view details