- ಕಾಂಗ್ರೆಸ್ ಪಕ್ಷದ ನಾಯಕತ್ವ ವಿಚಾರದ ಗೊಂದಲಕ್ಕೆ ತೆರೆ
- ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮುಂದುವರಿಕೆ
- ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡುವ ವರೆಗೆ ಸೋನಿಯಾ ಪಕ್ಷದ ಮುಖ್ಯಸ್ಥರಾಗಿರಲಿದ್ದಾರೆ
- ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ
ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮುಂದುವರಿಕೆ: CWC ಸಭೆಯಲ್ಲಿ ನಿರ್ಧಾರ - ಕಾಂಗ್ರೆಸ್ ಮುಖಂಡರ ಪತ್ರ

17:54 August 24
ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಮುಂದುವರಿಕೆ: CWC ಸಭೆಯಲ್ಲಿ ನಿರ್ಧಾರ
17:25 August 24
ಸೋನಿಯಾ - ರಾಹುಲ್ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಇದೆ : ಕೈ ನಾಯಕರು
- ಪಕ್ಷದಲ್ಲಿ ಸುಧಾರಣೆ ತರಲು ಸಲಹೆಗಳನ್ನು ನೀಡಿ ನಾವು ಪತ್ರ ಬರೆದದ್ದು ಅಷ್ಟೇ
- ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಇದೆ
- CWC ಸಭೆಯಲ್ಲಿ ಕಾಂಗ್ರೆಸ್ ನಾಯಕರ ಹೇಳಿಕೆ
16:05 August 24
ರಿವರ್ಸ್ ಹೊಡೆದ ಗುಲಾಮ್ ನಬಿ ಆಜಾದ್
- ಪತ್ರ ಬರೆದ ಕಾಂಗ್ರೆಸ್ ನಾಯಕರು ಬಿಜೆಪಿಯೊಂದಿಗೆ ಕೈ ಜೋಡಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿಲ್ಲ
- ಕಾರ್ಯಕಾರಿ ಸಮಿತಿಯಲ್ಲಾಗಲಿ, ಹೊರಗಡೆಯಾಗಲಿ ರಾಗಾ ಹಾಗೆ ಆರೋಪ ಮಾಡಿಲ್ಲ
- ಗುಲಾಮ್ ನಬಿ ಆಜಾದ್ ಹೇಳಿಕೆ
- ಈ ಹಿಂದೆ ರಾಹುಲ್ ಆರೋಪ ನಿಜವಾದರೆ ರಾಜೀನಾಮೆ ನೀಡುವೆ ಎಂದಿದ್ದ ಆಜಾದ್
15:18 August 24
ಕಾಂಗ್ರೆಸ್ ಕಥೆ ಮುಗಿಯಿತು: ಉಮಾ ಭಾರತಿ
- ಗಾಂಧಿ-ನೆಹರೂ ಕುಟುಂಬದ ಅಸ್ತಿತ್ವ ಬಿಕ್ಕಟ್ಟಿನಲ್ಲಿದೆ
- ಅವರ ರಾಜಕೀಯ ಪ್ರಾಬಲ್ಯ ಮುಗಿದಿದೆ, ಕಾಂಗ್ರೆಸ್ ಕಥೆ ಮುಗಿಯಿತು
- ಯಾರು ಈಗ ಯಾವ ಸ್ಥಾನದಲ್ಲಿ ನಿಲ್ಲುತ್ತಾರೆ ಎಂಬುದು ಈಗ ಮುಖ್ಯವಲ್ಲ
- ಕಾಂಗ್ರೆಸ್ ಪಕ್ಷ ಯಾವುದೇ ವಿದೇಶಿ ಅಂಶಗಳಿಲ್ಲದೆ ನಿಜವಾದ 'ಸ್ವದೇಶಿ' ಗಾಂಧಿ ತತ್ವಗಳಿಗೆ ಮರಳಬೇಕು
- ಮಾಧ್ಯಮಗಳಿಗೆ ಬಿಜೆಪಿ ನಾಯಕಿ ಉಮಾ ಭಾರತಿ ಹೇಳಿಕೆ
15:12 August 24
ಕಾಂಗ್ರೆಸ್ ಉಳಿಸಲು ಯಾರಿಂದಲೂ ಸಾಧ್ಯವಿಲ್ಲ: ಶಿವರಾಜ್ ಸಿಂಗ್ ಚೌಹಾಣ್
- ಜ್ಯೋತಿರಾಧಿತ್ಯ ಸಿಂಧಿಯಾ ತಿರುಗಿಬಿದ್ದಾಗ ಕೂಡ ಅವರ ವಿರುದ್ಧ ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು
- ಇದೀಗ ಗುಲಾಮ್ ನಬಿ ಆಜಾದ್ ಮತ್ತು ಕಪಿಲ್ ಸಿಬಲ್ರಂತಹ ನಾಯಕರು ಪಕ್ಷದ ಪೂರ್ಣಾವಧಿ ನಾಯಕತ್ವಕ್ಕೆ ಒತ್ತಾಯಿಸುತ್ತಿರುವಾಗ ಕೂಡ ಇದೇ ಆರೋಪ ಮಾಡಲಾಗಿದೆ
- ಇಂತಹ ಪಕ್ಷವನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ
- ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿಕೆ
14:17 August 24
ಕಪಿಲ್ ಸಿಬಲ್ ಟ್ವೀಟ್ ಡಿಲೀಟ್...
- ರಾಗಾ ಆರೋಪ ಖಂಡಿಸಿ ಮಾಡಿದ್ದ ಟ್ವೀಟ್ ಡಿಲೀಟ್ ಮಾಡಿದ ಕಪಿಲ್ ಸಿಬಲ್
- ನಿಮ್ಮ ವಿರುದ್ಧ ಆರೋಪ ಮಾಡಿದ್ದಲ್ಲ ಎಂದು ರಾಹುಲ್ ಗಾಂಧಿಯವರು ವೈಯಕ್ತಿಕವಾಗಿ ತಿಳಿಸಿದ್ದಾರೆ
- ಹೀಗಾಗಿ ನಾನು ನನ್ನ ಟ್ವೀಟ್ ಅನ್ನು ಹಿಂತೆಗೆದುಕೊಂಡಿದ್ದೇನೆ ಎಂದು ಮತ್ತೆ ಟ್ವೀಟ್ ಮಾಡಿ ಕಪಿಲ್ ಸ್ಪಷ್ಟನೆ
14:10 August 24
ರಾಹುಲ್ ಆರೋಪಕ್ಕೆ ಸಂಜಯ್ ಝಾ ತಿರುಗೇಟು
- ಬಿಜೆಪಿಯೊಂದಿಗೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ರಾಗಾ ಹೇಳಿದ್ದಾರೆ
- ಬಿಜೆಪಿಯೊಂದಿಗೆ ನಾವು ಕೈ ಜೋಡಿಸುವುದು ಬೋರಿಸ್ ಜಾನ್ಸನ್ ಅವರು ಫೇರ್‌ನೆಸ್ ಕ್ರೀಮ್ ಬಳಸಿದಂತೆ
- ಸಂಜಯ್ ಝಾ ಟ್ವೀಟ್
13:59 August 24
ರಾಹುಲ್ ಜೀ ತಪ್ಪು ಮಾಡಿದ್ದಾರೆ: ರಮ್ಯಾ
- ನನ್ನ ಪ್ರಕಾರ ರಾಹುಲ್ ಜೀ ತಪ್ಪು ಮಾಡಿದ್ದಾರೆ
- ಬಿಜೆಪಿಯೊಂದಿಗೆ ಕೈ ಮುಖಂಡರು ಕೈ ಜೋಡಿಸಿದ್ದಾರೆ ಎಂದು ಅವರು ಹೇಳುವ ಬದಲು
- ಬಿಜೆಪಿ ಮತ್ತು ಮಾಧ್ಯಮಗಳೊಂದಿಗೆ ಕೈ ಜೋಡಿಸಿದ್ದಾರೆ ಎಂದು ಹೇಳಬೇಕಿತ್ತು
- ಮಾಜಿ ಕಾಂಗ್ರೆಸ್ ಸಂಸದೆ ರಮ್ಯಾ ಟ್ವೀಟ್
13:48 August 24
ಟ್ವೀಟರ್ನಲ್ಲಿ ರಮ್ಯಾ ಗರಂ
- ಕೈ ಮುಖಂಡರು ಕೇವಲ ಪತ್ರವನ್ನ ಮಾತ್ರ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿಲ್ಲ
- CWC ಸಭೆಯಲ್ಲಿ ನಡೆಯುತ್ತಿರುವ ನಿಮಿಷ-ನಿಮಿಷದ ಸಂಭಾಷಣೆಯನ್ನೂ ಬಹಿರಂಗಪಡಿಸುತ್ತಿದ್ದಾರೆ
- ಟ್ವಿಟರ್ ಮೂಲಕ ಮಾಜಿ ಕಾಂಗ್ರೆಸ್ ಸಂಸದೆ ರಮ್ಯಾ(ದಿವ್ಯಾ ಸ್ಪಂದನ) ಆರೋಪ
13:18 August 24
ರಾಗಾ ಆರೋಪ ಖಂಡಿಸಿದ ಕಪಿಲ್ ಸಿಬಲ್
- ಕಳೆದ 30 ವರ್ಷದಲ್ಲಿ ಬಿಜೆಪಿ ಪರವಾಗಿ ಒಂದೇ ಒಂದು ಹೇಳಿಕೆ ನೀಡಿಲ್ಲ
- ಆದರೂ ರಾಹುಲ್ ಗಾಂಧಿ ಹೀಗೆ ಆರೋಪ ಮಾಡಿದ್ದಾರೆ
- ಕಪಿಲ್ ಸಿಬಲ್ ಟ್ವೀಟ್
13:12 August 24
ರಾಗಾ ಆರೋಪ ನಿಜವಾದರೆ ರಾಜೀನಾಮೆ ನೀಡುವೆ: ಗುಲಾಮ್ ನಬಿ ಆಜಾದ್
- ಪತ್ರ ಬರೆದ ಮುಖಂಡರು ಬಿಜೆಪಿಯೊಂದಿಗೆ ತಂತ್ರ ರೂಪಿಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪ
- ರಾಗಾ ಆರೋಪ ಸಾಬೀತಾದರೆ ರಾಜೀನಾಮೆ ನೀಡುವೆ ಎಂದ ಗುಲಾಮ್ ನಬಿ ಆಜಾದ್
13:08 August 24
ನಮ್ಮ ಮುಖಂಡರು ಬಿಜೆಪಿಯೊಂದಿಗೆ ತಂತ್ರ ರೂಪಿಸಿದ್ದಾರೆ: ರಾಗಾ
- ಪತ್ರ ಬರೆದ ಮುಖಂಡರು ಬಿಜೆಪಿಯೊಂದಿಗೆ ತಂತ್ರ ರೂಪಿಸಿದ್ದಾರೆ
- ಸಭೆಯಲ್ಲಿ ರಾಗಾ ಆರೋಪ
12:48 August 24
ಕಾಂಗ್ರೆಸ್ ನಾಯಕರ ಪತ್ರಕ್ಕೆ ರಾಗಾ ಆಕ್ಷೇಪ
- ಪೂರ್ಣಾವಧಿ ನಾಯಕತ್ವಕ್ಕೆ ಆಗ್ರಹಿಸಿ ಬರೆದ ಹಿರಿಯ ನಾಯಕರ ಪತ್ರಕ್ಕೆ ರಾಹುಲ್ ಗಾಂಧಿ ಆಕ್ಷೇಪ
- ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದಾಗ ಏಕೆ ಈ ವಿಚಾರ ಪ್ರಸ್ತಾಪ ಮಾಡಲಿಲ್ಲ
- ಸೋನಿಯಾ ಗಾಂಧಿ ಅನಾರೋಗ್ಯದಿಂದ ಬಳಲುತ್ತಿರುವಾಗ ಏಕೆ ಪತ್ರ ಬರೆದಿದ್ದೀರಾ?
- ಸಭೆಯಲ್ಲಿ ರಾಗಾ ಪ್ರಶ್ನೆ
12:42 August 24
ಸೋನಿಯಾ ಬಿಟ್ಟರೆ ರಾಹುಲ್ ಅಧ್ಯಕ್ಷರಾಗುವಂತೆ APCC ಮನವಿ
- ಬಲವಾದ ನಾಯಕತ್ವವನ್ನು ನೀಡಲು ಕಾಂಗ್ರೆಸ್‌ನಲ್ಲಿ ಬೇರೆ ನಾಯಕರು ಇಲ್ಲ
- ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮುಂದುವರೆಯಲಿ
- ಒಂದು ವೇಳೆ ಸೋನಿಯಾ ಮನಸ್ಸು ಬದಲಿಸಿದರೆ, ರಾಹುಲ್ ಗಾಂಧಿ ಅಧ್ಯಕ್ಷರಾಗಿ ಜವಾಬ್ದಾರಿ ತೆಗೆದುಕೊಳ್ಳಬೇಕು
- ಸಭೆಯಲ್ಲಿ ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ (APCC) ಮನವಿ
12:26 August 24
ಪಕ್ಷಕ್ಕೆ ಹೊಸ ಮುಖ್ಯಸ್ಥರನ್ನು ಆಯ್ಕೆ ಮಾಡಿ: ಸೋನಿಯಾ
- ಪಕ್ಷಕ್ಕೆ ನೂತನ ಸಾರಥಿಯನ್ನು ಆಯ್ಕೆ ಮಾಡಿ ಎಂದ ಸೋನಿಯಾ ಗಾಂಧಿ
- ಪೂರ್ಣಾವಧಿ ನಾಯಕತ್ವಕ್ಕೆ ಆಗ್ರಹಿಸಿದ ಹಿರಿಯ ನಾಯಕರಿಗೆ ಸೋನಿಯಾ ಪತ್ರ
- ಸಭೆಯಲ್ಲಿ ಸೋನಿಯಾ ಬರೆದ ಪತ್ರ ಓದಿದ ಕೆ ಸಿ ವೇಣುಗೋಪಾಲ್
- ಪತ್ರದಲ್ಲಿ ತಮ್ಮ ಸ್ಥಾನದಿಂದ ಕೆಳಗಿಳಿಯುವ ಇಂಗಿತ ವ್ಯಕ್ತಪಡಿಸಿರುವ ಕೈ ನಾಯಕಿ
- ಕಾಂಗ್ರೆಸ್ಗೆ ಹೊಸ ಮುಖ್ಯಸ್ಥರನ್ನು ಆಯ್ಕೆ ಮಾಡಿ ಎಂದು ಉಲ್ಲೇಖ
12:16 August 24
ಪಕ್ಷದ ಮುಖ್ಯಸ್ಥೆಯಾಗಿ ಸೋನಿಯಾ ಮುಂದುವರೆಯುವಂತೆ ಮನಮೋಹನ್ ಸಿಂಗ್ ಒತ್ತಾಯ
- ಸಭೆಯಲ್ಲಿ ಪಕ್ಷದ ನಾಯಕತ್ವ ಸ್ಥಾನದ ಕುರಿತ ಚರ್ಚೆ ಆರಂಭ
- ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮುಂದುವರೆಯುವಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಮಾಜಿ ರಕ್ಷಣಾ ಸಚಿವ ಎ ಕೆ ಆಂಟೋನಿ ಒತ್ತಾಯ
12:09 August 24
ಸೋನಿಯಾ ಗಾಂಧಿ ನೇತೃತ್ವದಲ್ಲಿ CWC ವರ್ಚುವಲ್ ಸಭೆ ಆರಂಭ
- ವಿಡಿಯೋ ಕಾನ್ಫರೆನ್ಸ್ ಮೂಲಕ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಆರಂಭ
- ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಸಭೆ
- ಮನಮೋಹನ್ ಸಿಂಗ್, ಪ್ರಿಯಾಂಕಾ ಗಾಂಧಿ ವಾದ್ರಾ, ಅಮರಿಂದರ್ ಸಿಂಗ್ ಸೇರಿದಂತೆ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಭಾಗಿ
11:52 August 24
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಮಹತ್ವದ ಸಭೆ
ನವದೆಹಲಿ:ಭಾರತದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್‌ನಲ್ಲಿ ನಾಯಕತ್ವದ ಬಿಕ್ಕಟ್ಟು ಎದುರಾಗಿದೆ. ಮುಖಂಡರು, ಸಂಸದರು, ಮಾಜಿ ಕೇಂದ್ರ ಸಚಿವರು ಸೇರಿದಂತೆ ಕಾಂಗ್ರೆಸ್ನ 23 ನಾಯಕರು ಪಕ್ಷದಲ್ಲಿ ಪೂರ್ಣಾವಧಿ, ದಕ್ಷ, ಪರಿಣಾಮಕಾರಿ ನಾಯಕತ್ವ ಹಾಗೂ ಸುಧಾರಣೆಗಳ ಅಗತ್ಯವಿದೆ ಎಂದು ಉಲ್ಲೇಖಿಸಿ, ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು.
ಕಾಂಗ್ರೆಸ್ ಹಿರಿಯ ನಾಯಕರ ಮನವಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ನೂತನ ಅಧ್ಯಕ್ಷರನ್ನು ಹುಡುಕಿಕೊಡಿ ಎಂದು ಕೇಳಿದ್ದರು. ಈ ಮೂಲಕ ಸೋನಿಯಾ ಗಾಂಧಿ ತಮ್ಮ ಹಂಗಾಮಿ ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಂದು ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆ ಅತ್ಯಂತ ಮಹತ್ವದ್ದಾಗಿದ್ದು, ಪಕ್ಷಕ್ಕೆ ನೂತನ ಸಾರಥಿ ಆಯ್ಕೆಯಾಗುವ ಸಾಧ್ಯತೆಯಿದೆ.