ಕರ್ನಾಟಕ

karnataka

By

Published : Feb 9, 2020, 9:41 PM IST

Updated : Feb 10, 2020, 6:53 AM IST

ETV Bharat / bharat

ಕೇರಳ ಪ್ರವಾಹ ಸಂತ್ರಸ್ತರಿಗೆ ಮಿಡಿದ 'ಈ' ಮನ: 121 ಮನೆಗಳನ್ನು ಹಸ್ತಾಂತರಿಸಿದ ಪಿಣರಾಯಿ ವಿಜಯನ್

ಭೀಕರ ಪ್ರವಾಹದಿಂದಾಗಿ ಕೇರಳದ ಅಲಪ್ಪುಜದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗಾಗಿ ಈನಾಡು-ರಾಮೋಜಿ ಗ್ರೂಪ್ ವತಿಯಿಂದ ನಿರ್ಮಿಸಿದ 121 ಮನೆಗಳ ಕೀಗಳನ್ನು ಹಸ್ತಾಂತರಿಸಲಾಯಿತು.

Eenadu-Ramoji Group for Alappuzha flood victims,ಸಂಸ್ರಸ್ತರಿಗೆ 121 ಮನೆಗಳ ಹಸ್ತಾಂತರ
ಸಂಸ್ರಸ್ತರಿಗೆ 121 ಮನೆಗಳ ಹಸ್ತಾಂತರ

ಕೇರಳ:ಭಾರಿ ಪ್ರವಾಹದಿಂದ ಕೇರಳದ ಅಲಪ್ಪುಜದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಾದ ಸಂತ್ರಸ್ತರಿಗಾಗಿ ಈನಾಡು-ರಾಮೋಜಿ ಗ್ರೂಪ್ ನಿರ್ಮಿಸಿದ 121 ಮನೆಗಳ ಕೀಗಳನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಯಾ ಕುಟುಂಬಗಳಿಗೆ ಹಸ್ತಾಂತರಿಸಿದ್ದಾರೆ.

ಕುಡುಂಬಶ್ರೀ ಮತ್ತು 'ಐ ಆಮ್ ಫಾರ್ ಅಲೆಪ್ಪಿ' ಯೋಜನೆಯ ಸಹಕಾರದೊಂದಿಗೆ ಪ್ರತಿ ಮನೆಯನ್ನು 40 ದಿನಗಳ ಅವಧಿಯಲ್ಲಿ ನಿರ್ಮಿಸಲಾಗಿದೆ.

ಸಂಸ್ರಸ್ತರಿಗೆ 121 ಮನೆಗಳ ಹಸ್ತಾಂತರ

ಕಾರ್ಯಕ್ರಮದಲ್ಲಿ ಮಾತನಾಡಿದ ಈನಾಡು ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಚೆರುಕುರಿ ಕಿರಣ್, ವಿಪತ್ತಿನ ಸಂದರ್ಭಗಳು ಎದುರಾದಾಗ ಸಾಧ್ಯವಾದಾಗಲೆಲ್ಲ ರಾಮೋಜಿ ಗ್ರೂಪ್ ಸಹಾಯ ಹಸ್ತ ಚಾಚುತ್ತದೆ. ಅದು ಯಾವ ರೀತಿಯ ವಿಪತ್ತೇ ಆಗಿರಲಿ, ಇದು ನಮ್ಮ ಜವಾಬ್ದಾರಿ ಎಂದು ನಾನು ಭಾವಿಸುತ್ತೇನೆ. ಅಂತಹ 10 ಕ್ಕೂ ಹೆಚ್ಚು ಕೆಲಸಗಳಲ್ಲಿ ನಾವು ಈಗಾಗಲೇ ಭಾಗಿಯಾಗಿದ್ದೇವೆ. ಈ ಕಾರ್ಯಕ್ಕೆ ರಾಮೋಜಿ ಗ್ರೂಪ್​ನ ಉದ್ಯೋಗಿಗಳಿಂದಲೂ ನಮಗೆ ಬೆಂಬಲ ದೊರಕಿತು ಎಂದು ಅವರು ಹೇಳಿದರು.

ಕೇರಳದ ಕುಡುಂಬಶ್ರೀ (ಮಹಿಳಾ ಸ್ವಸಹಾಯ ಗುಂಪುಗಳು) ಅಡಿಯಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರೇ ಈ ಮನೆಗಳನ್ನು ನಿರ್ಮಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು ಎಂದು ಚೆರುಕುರಿ ಕಿರಣ್ ಹೇಳಿದ್ದಾರೆ.

ಪ್ರವಾಹ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಟ್ಟು ಸಹಾಯ ಹಸ್ತ ಚಾಚಿದ ರಾಮೋಜಿ ಸಮೂಹವನ್ನು ಸಿಎಂ ಪಿಣರಾಯಿ ವಿಜಯನ್ ಶ್ಲಾಘಿಸಿದರು. ರಾಮೋಜಿ ಸಮೂಹದ ವಿಶೇಷ ಆಸಕ್ತಿ ಮತ್ತು ಕಾಳಜಿಯಿಂದಾಗಿ ಅಲಪ್ಪುಜದಲ್ಲಿ 121 ಪ್ರವಾಹಪೀಡಿತ ಕುಟುಂಬಗಳಿಗೆ ಮನೆಗಳು ದೊರೆತಿವೆ. ಸರ್ಕಾರ ಮತ್ತು ರಾಮೋಜಿ ಗುಂಪಿನ ಮನಸ್ಸುಗಳು ಒಗ್ಗೂಡಿ ಈ ವಿಶೇಷ ಕಾರ್ಯ ಸಾಧ್ಯವಾಯ್ತು. ಇಂಥ ಉತ್ತಮ ಕಾರ್ಯ ಮಾಡಿದ ಹೈದರಾಬಾದ್‌ನ ರಾಮೋಜಿ ಗ್ರೂಪ್​ಗೆ ಮೆಚ್ಚುಗೆ ಸೂಚಿಸಲೇಬೇಕು. ರಾಜ್ಯದ ಮುಂದಿನ ಯೋಜನೆಗಳಿಗೆ ಸರ್ಕಾರ ಈ ಸಾಮಾಜಿಕ ಕಳಕಳಿ ಹೊಂದಿರುವ ಸಂಸ್ಥೆಗಳ ಸಹಕಾರವನ್ನು ನಿರೀಕ್ಷಿಸುತ್ತದೆ ಎಂದು ಹೇಳಿದ್ದಾರೆ.

Last Updated : Feb 10, 2020, 6:53 AM IST

ABOUT THE AUTHOR

...view details