ಕರ್ನಾಟಕ

karnataka

ETV Bharat / bharat

ತಮ್ಮವರೆಂದು ತಿಳಿದು ಪಿಪಿಇ ಕಿಟ್​ ಸುತ್ತಿದ್ದ ಬೇರೆ ವ್ಯಕ್ತಿಯ ಶವ ಸಂಸ್ಕಾರ ನಡೆಸಿದ ಕುಟುಂಬ

ಕೊರೊನಾದಿಂದ ಮೃತಪಟ್ಟ ಮಹಿಳೆಯ ಮೃತದೇಹ ಹಾಗೂ ಕಾಲುವೆಗೆ ಬಿದ್ದು ಮೃತಪಟ್ಟಿದ್ದ ಮಹಿಳೆಯ ಮೃತದೇಹ ಅದಲು ಬದಲಾಗಿರುವ ಘಟನೆ ಕೇರಳದಲ್ಲಿ ನಡೆದಿದೆ. ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪ ಕೇಳಿಬಂದಿದೆ.

By

Published : Sep 19, 2020, 5:06 PM IST

hospital
hospital

ಪಾಲಕ್ಕಾಡ್ (ಕೇರಳ):ಕೇರಳದ ಪಾಲಕ್ಕಾಡ್‌ನಲ್ಲಿರುವ ಜಿಲ್ಲಾ ಆಸ್ಪತ್ರೆ ಅಧಿಕಾರಿಗಳು ಮೃತ ದೇಹವನ್ನು ತಪ್ಪು ವಿಳಾಸಕ್ಕೆ ಹಸ್ತಾಂತರಿಸಿರುವ ಘಟನೆ ನಡೆದಿದೆ.

ಕೋವಿಡ್​ನಿಂದ ಮೃತಪಟ್ಟ ಜಾನಕಿ ಅಮ್ಮ ಎಂಬವವರ ಸಂಬಂಧಿಕರಿಗೆ ಅತ್ತಪ್ಪಾದ ವಲ್ಲಿ ಎಂಬ ಇನ್ನೊಬ್ಬ ಮಹಿಳೆಯ ಮೃತ ದೇಹವನ್ನು ಹಸ್ತಾಂತರಿಸಲಾಗಿತ್ತು. ಶವಸಂಸ್ಕಾರದ ನಂತರ ಆಸ್ಪತ್ರೆಯ ಅಧಿಕಾರಿಗಳು ಈ ವಿಷಯ ಅರಿತು, ಕುಟುಂಬಸ್ಥರಿಗೆ ತಿಳಿಸಿದರು.

ಘಟನೆಯ ಕುರಿತು ಪಾಲಕ್ಕಾಡ್ ಜಿಲ್ಲಾ ವೈದ್ಯಕೀಯ ಅಧಿಕಾರಿ ಇಲಾಖಾ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

ಕಾಲುವೆಗೆ ಬಿದ್ದು ಮೃತಪಟ್ಟಿದ್ದ ಅತ್ತಪ್ಪಡಿಯ ಧೋನಿಗುಂಡು ಮೂಲದ ವಲ್ಲಿ ಎಂಬ ಮಹಿಳೆಯ ಮೃತ ದೇಹವನ್ನು ಶವಪರೀಕ್ಷೆಗಾಗಿ ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು.

ಮರಣೋತ್ತರ ಪರೀಕ್ಷೆಯ ನಂತರ ಮೃತದೇಹ ಸ್ವೀಕರಿಸಲು ವಲ್ಲಿಯ ಕುಟುಂಬ ಮತ್ತು ಅಗಲಿಯ ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ತಲುಪಿದಾಗ, ಶವಾಗಾರದಿಂದ ಶವ ಕಾಣೆಯಾಗಿದೆ ಎಂದು ಅಧಿಕಾರಿಗಳು ಅರಿತುಕೊಂಡರು.

ನಂತರ ಶವಾಗಾರದಲ್ಲಿ ಉಳಿದಿರುವ ಮೃತ ದೇಹ ಜಾನಕಿ ಅಮ್ಮನದ್ದು ಎಂದು ಅವರ ಕುಟುಂಬವು ಗುರುತಿಸಿದಾಗ, ಕುಟುಂಬದವರು ಜಾನಕಿ ಅಮ್ಮನ ಬದಲು ವಲ್ಲಿಯ ಅಂತ್ಯಕ್ರಿಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕೊರೊನಾದಿಂದ ಮೃತಪಟ್ಟಿದ್ದ ಜಾನಕಿ ಅಮ್ಮನ ಮೃತದೇಹ ಪಿಪಿಇ ಕಿಟ್‌ನಲ್ಲಿ ಸುತ್ತಿಡಲಾಗಿತ್ತು. ಕುಟುಂಬದವರು ಮೃತದೇಹವನ್ನು ಸ್ವೀಕರಿಸಿ ಪಾಲಕ್ಕಾಡ್‌ನ ಚಂದ್ರನಗರದ ವಿದ್ಯುತ್ ಶವಾಗಾರದಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ.

ABOUT THE AUTHOR

...view details