ಕರ್ನಾಟಕ

karnataka

ETV Bharat / bharat

ಹೈಕಮಾಂಡ್​​ ಜತೆ ಸಿಎಂ ಬಿಎಸ್​ವೈ ಮಾತು ಯಶಸ್ವಿ... ನಾಳೆ ಸಚಿವ ಸಂಪುಟ ವಿಸ್ತರಣೆ!?

ಸಚಿವ ಸಂಪುಟ ರಚನೆಗಾಗಿ ಬಿಜೆಪಿ ಹೈಕಮಾಂಡ್​ ಗ್ರೀನ್​ ಸಿಗ್ನಲ್​ ನೀಡಿದ್ದು, ನಾಳೆ ಅಥವಾ ನಾಡಿದ್ದು ಬಹುನೀರಿಕ್ಷಿತ ರಾಜ್ಯ ಸಂಪುಟ ವಿಸ್ತರಣೆಯಾಗುವ ಎಲ್ಲ ಲಕ್ಷಣ ಗೋಚರಿಸುತ್ತಿವೆ.

By

Published : Jan 30, 2020, 8:22 PM IST

Updated : Jan 30, 2020, 10:30 PM IST

Karnataka CM Yediyurappa
ನಾಳೆ ಸಚಿವ ಸಂಪುಟ ವಿಸ್ತರಣೆ

ನವದೆಹಲಿ:ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಈಗಾಗಲೇ ಹೈಕಮಾಂಡ್​​ ಜತೆ ಮಾತಕತೆ ನಡೆಸಿದ್ದು, ನಾಳೆ ಅಥವಾ ನಾಡಿದ್ದು ಸಂಪುಟ ವಿಸ್ತರಣೆಗೊಳ್ಳುವ ಎಲ್ಲ ಲಕ್ಷಣ ಗೋಚರಿಸುತ್ತಿವೆ.

ಜೆಪಿ ನಡ್ಡಾ ಭೇಟಿ ಮಾಡಿದ ಬಿಎಸ್​ವೈ

ಈಗಾಗಲೇ ದೆಹಲಿಯಲ್ಲಿ ವಾಸ್ತವ್ಯ ಹೂಡಿರುವ ಮುಖ್ಯಮಂತ್ರಿ ಗೃಹ ಸಚಿವ ಅಮಿತ್​ ಶಾ ಭೇಟಿ ಮಾಡುವುದಕ್ಕೂ ಮುಂಚಿತವಾಗಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ಮಾತುಕತೆ ನಡೆಸಿದ್ದಾಗಿ ತಿಳಿದು ಬಂದಿದ್ದು, ಇದಾದ ಬಳಿಕ ಅಮಿತ್​ ಶಾ ಹಾಗೂ ಪ್ರಧಾನಿ ಮೋದಿ ಭೇಟಿಯಾಗಲಿದ್ದಾರೆ.

ನಿರ್ಮಲಾ ಸೀತಾರಾಮನ್​ ಭೇಟಿ ಮಾಡಿದ ಬಿಎಸ್​ವೈ

ನಾಳೆಯೇ ಸಚಿವ ಸಂಪುಟ ವಿಸ್ತರಣೆ ಶೇ.99ರಷ್ಟು ಖಚಿತ ಎಂದು ಯಡಿಯೂರಪ್ಪ ಈಗಾಗಲೇ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿರುವ ಅವರು ಹೆಚ್ಚಿನ ಡಿಸಿಎಂ ಹುದ್ದೆ ಸೃಷ್ಟಿ ಮಾಡುವ ಅವಶ್ಯಕತೆ ಇಲ್ಲ. ಈಗಾಗಲೇ ಮೂವರು ಉಪಮುಖ್ಯಮಂತ್ರಿಗಳಿದ್ದಾರೆ ಎಂದಿದ್ದಾರೆ. ಸಂಪುಟ ವಿಸ್ತರಣೆ ವಿಳಂಬದ ಬಗ್ಗೆ ಮಾತನಾಡಿರುವ ಬಿಎಸ್​ವೈ, ದೆಹಲಿಯಲ್ಲಿ ಚುನಾವಣೆ ನಡೆಯುತ್ತಿರುವ ಕಾರಣ ಪ್ರಮುಖ ಮುಖಂಡರು ಬ್ಯುಸಿಯಾಗಿದ್ದು, ಅವರೊಂದಿಗೆ ಮಾತುಕತೆ ನಡೆಸಲು ಸಮಯವಕಾಶ ಸಿಗುತ್ತಿಲ್ಲ ಎಂದಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಎಲ್ಲವೂ ಫೈನಲ್ ಆಗಲಿದೆ ಎಂದಿದ್ದು, ಸಂಪುಟ ವಿಸ್ತರಣೆಗಾಗಿ ಹೈಕಮಾಂಡ್​ ಬಹುತೇಕ ಗ್ರಿನ್​ ಸಿಗ್ನಲ್​ ನೀಡಿದೆ ಎಂದು ತಿಳಿಸಿದ್ದಾರೆ.

ನಾಳೆ ಸಚಿವ ಸಂಪುಟ ವಿಸ್ತರಣೆ?

ಇನ್ನು ಫೆಬ್ರವರಿ 5ರಿಂದ ರಾಜ್ಯ ಬಜೆಟ್​ ಅಧಿವೇಶನ ಆರಂಭಗೊಳ್ಳಲಿದ್ದು, ಅಷ್ಟರೊಳಗೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂಬ ಮಾಹಿತಿ ಕೂಡ ಬಿಜೆಪಿ ಖಚಿತ ಮೂಲಗಳಿಂದ ತಿಳಿದು ಬಂದಿದೆ. 224 ಶಾಸಕರನ್ನೊಳಗೊಂಡಿರುವ ರಾಜ್ಯದಲ್ಲಿ 34 ಸಚಿವರು ಇರಬೇಕು. ಬಿಎಸ್​ವೈ ನೇತೃತ್ವದ ಸರ್ಕಾರದಲ್ಲಿ ಸದ್ಯ ಡಿಸಿಎಂ, ಸಿಎಂ ಸೇರಿ 18 ಸಚಿವರಿದ್ದಾರೆ. ಇದೀಗ 16 ಸಚಿವರು ಸೇರ್ಪಡೆಯಾಗಬೇಕಾಗಿದೆ. ಶುಕ್ರವಾರ ಮುಖ್ಯಮಂತ್ರಿ ಬಿಎಸ್​ವೈ ಬೆಂಗಳೂರಿಗೆ ವಾಪಸ್​ ಆಗಲಿದ್ದಾರೆ.

Last Updated : Jan 30, 2020, 10:30 PM IST

ABOUT THE AUTHOR

...view details