ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಮೇಲೆ ಇದೀಗ ಡ್ರಗ್ಸ್ ಸೇವನೆ ಮಾಡಿರುವ ಗಂಭೀರ ಆರೋಪ ಮಾಡಲಾಗಿದ್ದು, ಇದೇ ವಿಚಾರವಾಗಿ ಮಾತನಾಡಿರುವ ನಟಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರಿಗೆ ಚಾಲೆಂಜ್ ಮಾಡಿದ್ದಾರೆ.
ಕಂಗನಾ ಡ್ರಗ್ಸ್ ಸೇವಿಸಿದ ಆರೋಪ: ತನಿಖೆ ನಡೆಸಲಾಗುವುದು ಎಂದ ಅನಿಲ್ ದೇಶ್ಮುಖ್!
ದಯವಿಟ್ಟು ನನ್ನ ಡ್ರಗ್ಸ್ ಪರೀಕ್ಷೆಗಳನ್ನ ಮಾಡಿ, ನಾನು ಡ್ರಗ್ಸ್ ತೆಗೆದುಕೊಂಡಿರುವುದು ಸಾಬೀತುಗೊಂಡರೆ ಹಾಗೂ ಡ್ರಗ್ಸ್ ಪೆಡ್ಲರ್ಗಳೊಂದಿಗೆ ಯಾವುದಾದರೂ ಲಿಂಕ್ ಹೊಂದಿರುವುದು ನನ್ನ ದೂರವಾಣಿ ಕರೆ ದಾಖಲೆ ಮೂಲಕ ಗೊತ್ತಾದರೆ ಶಾಶ್ವತವಾಗಿ ಮುಂಬೈ ತೊರೆಯುತ್ತೇನೆ ಎಂದು ಗೃಹ ಸಚಿವ ಅನಿಖ್ ದೇಶ್ಮುಖ್ ಅವರಿಗೆ ಚಾಲೆಂಜ್ ಹಾಕಿದ್ದಾರೆ. ನಿಮ್ಮನ್ನು ಭೇಟಿಯಾಗಲು ನಾನು ಎದುರು ನೋಡುತ್ತಿದ್ದೇನೆ ಎಂದು ಕಂಗನಾ ರಣಾವತ್ ಹೇಳಿದ್ದಾರೆ.
ಕಂಗನಾ ರಣಾವತ್ ನಾಳೆ ಮುಂಬೈಗೆ ಬರುವ ಸಾಧ್ಯತೆ ಇದೆ. ಹೀಗಾಗಿ ಅವರಿಗೆ ಈಗಾಗಲೇ Y ಮಟ್ಟದ ಭದ್ರತೆ ನೀಡಲಾಗಿದೆ.
ಇದಕ್ಕೂ ಮೊದಲು ಮಾತನಾಡಿದ್ದ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್, ಕಂಗನಾ ಡ್ರಗ್ಸ್ ಸೇವಿಸಿದ ಆರೋಪದ ಮೇಲೆ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದಿದ್ದರು. ಅಭಯನ್ ಸುಮನ್ ಅವರು ನಟಿಯ ಮೇಲೆ ಗಂಭೀರ ಆರೋಪ ಮಾಡಿದ್ದರಿಂದ ತನಿಖೆ ನಡೆಸಲು ನಿರ್ಧರಿಸಲಾಗಿದ್ದು, ಕಂಗನಾ ಡ್ರಗ್ಸ್ ತೆಗೆದುಕೊಳ್ಳುವುದಾಗಿ ಹಾಗೂ ತಮಗೂ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು ಎಂದು ಗೃಹ ಸಚಿವರು ಮಾಹಿತಿ ನೀಡಿದ್ದಾರೆ.