ಕರ್ನಾಟಕ

karnataka

ಜೆಎಂಎಂ ಮುಖ್ಯಸ್ಥ ಶಿಬು ಸೊರೆನ್,  ಪತ್ನಿ ರೂಪಿ ಸೊರೆನ್​​​​​ಗೆ ಕೊರೊನಾ

By

Published : Aug 22, 2020, 10:10 AM IST

ಜಾರ್ಖಂಡ್​​​​ನ ಮಾಜಿ ಮುಖ್ಯಮಂತ್ರಿ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮುಖ್ಯಸ್ಥ ಶಿಬು ಸೊರೆನ್ ಮತ್ತು ಅವರ ಪತ್ನಿ ರೂಪಿ ಸೊರೆನ್ ಅವರಿಗೆ ಕೊರೊನಾ ಸೋಂಕು ತಗುಲಿದೆ.

JMM supremo Shibu Soren
JMM supremo Shibu Soren

ರಾಂಚಿ:ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮುಖ್ಯಸ್ಥ ಶಿಬು ಸೊರೆನ್ ಮತ್ತು ಅವರ ಪತ್ನಿ ರೂಪಿ ಸೊರೆನ್ ಅವರಿಗೆ ಕೊರೊನಾ ಸೋಂಕು ತಗುಲಿದೆ.

ಜಾರ್ಖಂಡ್ ಮಾಜಿ ಸಿಎಂ ಆಗಿದ್ದ ಶಿಬು ಸೊರೆನ್ ಅವರು ಕಳೆದ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದೀಗ ಇವರಿಗೆ ಸೋಂಕು ದೃಢಪಟ್ಟಿದೆ.

ಇನ್ನು ಕ್ಯಾಬಿನೆಟ್ ಸಭೆಯಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಸಚಿವ ಬನ್ನಾ ಗುಪ್ತಾ ಅವರಿಗೆ ಸೋಂಕು ತಗುಲಿದ್ದು, ಈ ಹಿನ್ನೆಲೆಯಲ್ಲಿಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹಾಗೂ ಶಿಬು ಸೊರೆನ್ ಅವರ ಪುತ್ರ ಹೇಮಂತ್ ಸೊರೆನ್ ಹಾಗೂ ಅವರ ಸಂಪರ್ಕದಲ್ಲಿದ್ದ ಇತರ ಮಂತ್ರಿಗಳು ಸ್ವಯಂ ಕ್ವಾರಂಟೈನ್​​ಗೆ ಒಳಗಾಗಿದ್ದಾರೆ.

ಬನ್ನಾ ಅವರು ಜೆಮಶೆಡ್​​ಪುರ​ ಪಶ್ಚಿಮ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಸಿಎಂ ಹೇಮಂತ್ ಅವರ ಸಂಪುಟದಲ್ಲಿ ಸೋಂಕು ತಗುಲಿದೆ ಎರಡನೇ ಸಚಿವರಾಗಿದ್ದಾರೆ.

ABOUT THE AUTHOR

...view details