ಕರ್ನಾಟಕ

karnataka

By

Published : Jan 18, 2021, 2:46 PM IST

ETV Bharat / bharat

ಸೋನಿಯಾ-ರಾಹುಲ್‌ ಭೇಟಿಯಾದ ಜಾರ್ಖಂಡ್ ಸಿಎಂ ; ಮೈತ್ರಿ ಬಲವರ್ಧನೆಗಾಗಿ ಚರ್ಚೆ

ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೇಂದ್ರವು ರೈತರ ಮಾತನ್ನು ಕೇಳದಿರುವುದು ದುರದೃಷ್ಟಕರ. ಕೇಂದ್ರವು ತಕ್ಷಣವೇ ವಿವಾದಿತ ಕಾನೂನುಗಳನ್ನು ರದ್ದುಪಡಿಸಬೇಕು ಎಂದು ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಆಗ್ರಹಿಸಿದ್ದಾರೆ.

Jharkhand CM meets Sonia, Rahul; discussion on strengthening alliance
ಸೋನಿಯಾ, ರಾಹುಲ್ ಅವರನ್ನು ಭೇಟಿಯಾದ ಜಾರ್ಖಂಡ್ ಸಿಎಂ

ನವದೆಹಲಿ :ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸೋಮವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ನವದೆಹಲಿಯಲ್ಲಿ ಸಭೆ ನಡೆಸಿದರು.

ಸುಮಾರು 45 ನಿಮಿಷಗಳ ಕಾಲ ನಡೆದ ಈ ಸಭೆಯಲ್ಲಿ ಸೊರೆನ್, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಜಾರ್ಖಂಡ್‌ನ ರಾಜ್ಯಸಭಾ ಸದಸ್ಯ ಧೀರಜ್ ಸಾಹು, ಜಾರ್ಖಂಡ್ ಕಾಂಗ್ರೆಸ್ ಉಸ್ತುವಾರಿ ಆರ್‌ಪಿಎನ್ ಸಿಂಗ್ ಉಪಸ್ಥಿತರಿದ್ದರು.

ಸೋನಿಯಾ, ರಾಹುಲ್ ಅವರನ್ನು ಭೇಟಿಯಾದ ಜಾರ್ಖಂಡ್ ಸಿಎಂ

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೊರೆನ್, ಇದು ಸೌಜನ್ಯದ ಸಭೆ. ಒಂದು ವರ್ಷದ ನಂತರ ನಾನು ನಾಯಕರನ್ನು ಭೇಟಿಯಾದೆ. ಜಾರ್ಖಂಡ್‌ನಲ್ಲಿ ತಮ್ಮ ಸರ್ಕಾರ ಕಳೆದ ತಿಂಗಳು ಒಂದು ವರ್ಷ ಪೂರ್ಣಗೊಳಿಸಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರ ಪರವಾಗಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಇದನ್ನೂ ಓದಿ:ಕೃಷಿ ಕಾಯ್ದೆ ಮೂಲಕ ರೈತರ ಆದಾಯ ದ್ವಿಗುಣಗೊಳಿಸುವ ಪ್ರಯತ್ನ : ತೋಮರ್

ಸಭೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕರು ಮತ್ತು ಕಾಂಗ್ರೆಸ್ ನಡುವೆ ಸಮನ್ವಯ ಮುಂದುವರೆಸುವ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಿದರು. ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೇಂದ್ರವು ರೈತರ ಮಾತನ್ನು ಕೇಳದಿರುವುದು ದುರದೃಷ್ಟಕರ. ಕೇಂದ್ರವು ತಕ್ಷಣವೇ ಕಾನೂನುಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ABOUT THE AUTHOR

...view details