ಕರ್ನಾಟಕ

karnataka

ಈ ನಡೆ ಮೂಲ ಸಿದ್ಧಾಂತಗಳಿಗೆ ವಿರುದ್ಧವಾಗಿದೆ: ಕೇಂದ್ರದ ವಿರುದ್ಧ ಮಮತಾ ಮತ್ತೆ ಕಿಡಿ

ರಾಜ್ಯ ಸರ್ಕಾರದ ಆಕ್ಷೇಪಣೆ ಹೊರತಾಗಿಯೂ, ಕೇಂದ್ರವು ಮೂರು ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ರಾಯಭಾರಿಗೆ ಬರುವಂತೆ ಕರೆ ನೀಡಿತ್ತು. ಇದನ್ನು ವಿರೋಧಿಸಿ ಸಿಎಂ ಮಮತಾ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

By

Published : Dec 17, 2020, 9:41 PM IST

Published : Dec 17, 2020, 9:41 PM IST

Updated : Dec 17, 2020, 9:46 PM IST

Mamata
Mamata

ಕೋಲ್ಕತಾ: ರಾಜ್ಯ ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ರಾಯಭಾರಕ್ಕೆ ಕಳುಹಿಸುವ ಬಗ್ಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತೆ ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ. ಚುನಾವಣೆಯ ಮೊದಲು ಇಂತಹ ನಡೆ ಸಂಯುಕ್ತ ರಾಷ್ಟ್ರ ರಚನೆಯ ಮೂಲ ಸಿದ್ಧಾಂತಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರದ ಆಕ್ಷೇಪಣೆಯ ಹೊರತಾಗಿಯೂ, ಕೇಂದ್ರವು ಮೂರು ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ರಾಯಭಾರಿಗೆ ಬರುವಂತೆ ಕರೆ ನೀಡಿತ್ತು. ಇದನ್ನು ವಿರೋಧಿಸಿ ಸಿಎಂ ಮಮತಾ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ಅವರು, ಚುನಾವಣೆಗೆ ಮುಂಚಿತವಾಗಿ ಇಂತಹ ಕ್ರಮ 'ಫೆಡರಲ್ ರಚನೆಯ ಮೂಲ ಸಿದ್ಧಾಂತ'ಗಳಿಗೆ ವಿರುದ್ಧವಾಗಿದೆ. ಈ ಕೃತ್ಯವು ರಾಜ್ಯದ ವ್ಯಾಪ್ತಿಯನ್ನು ಅತಿಕ್ರಮಿಸಲು ಮತ್ತು ಪಶ್ಚಿಮ ಬಂಗಾಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಆತ್ಮಸ್ಥೈರ್ಯ ಕೆಡಿಸುವಂತಹ ಪ್ರಯತ್ನ. ವಿಶೇಷವಾಗಿ ಚುನಾವಣೆಗೂ ಮೊದಲು ಇಂತಹ ಫೆಡರಲ್ ರಚನೆ ಮೂಲ ಸಿದ್ಧಾಂತಗಳಿಗೆ ವಿರುದ್ಧವಾಗಿದೆ. ಇದು ಅಸಂವಿಧಾನಿಕ ಹಾಗೂ ಸ್ವೀಕಾರಾರ್ಹವಲ್ಲ, ಎಂದು ಸಿಎಂ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:"ನಾನು ಮೊದಲು ಈ ದೇಶದ ಪ್ರಜೆ, ನಂತರ ಸಿಎಂ": ಕೇಂದ್ರದ ಕೃಷಿ ಕಾನೂನುಗಳ ಪ್ರತಿ ಹರಿದು ಹಾಕಿದ ಕೇಜ್ರಿವಾಲ್

ಡಿಸೆಂಬರ್ 10 ರಂದು ಡೈಮಂಡ್ ಹಾರ್ಬರ್‌ನಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದಾಗ ಅನೇಕ ಅಧಿಕಾರಿಗಳು ಅವರ ಭದ್ರತೆಯಲ್ಲಿ ನಿಯೋಜನೆಗೊಂಡಿದ್ದರು. ಅನೇಕ ಬಿಜೆಪಿ ನಾಯಕರು ಹಾಗೂ ಮೂವರು ಅಧಿಕಾರಿಗಳು ಈ ಘಟನೆಯಲ್ಲಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಲ್ಲಿನ ಡಿಜಿಪಿ ಮತ್ತು ಸಿಎಸ್​ಗೆ ನೋಟಿಸ್​ ನೀಡಿತ್ತು.

Last Updated : Dec 17, 2020, 9:46 PM IST

ABOUT THE AUTHOR

...view details