ಕರ್ನಾಟಕ

karnataka

ETV Bharat / bharat

ಬ್ರಹ್ಮಾಂಡದ ಮಿತಿಯಾಚೆಗೆ… ಬಾಹ್ಯಾಕಾಶದ ವಾಣಿಜ್ಯ ಅಖಾಡಕ್ಕಿಳಿದ ಇಸ್ರೋ - Harness space technology for national development

ತನ್ನ ಪ್ರತಿಷ್ಠಿತ ಉಪಗ್ರಹ ಉಡಾವಣಾ ವಾಹನವಾದ ಪಿಎಸ್‌ಎಲ್‌ವಿ (ಧ್ರುವಗಾಮಿ ಉಪಗ್ರಹ ಉಡಾವಣಾ ವಾಹನ) 50ನೇ ಉಡಾವಣೆಗಾಗಿ ಇಸ್ರೋ ಸಿದ್ಧವಾಗಿದೆ.

ISRO, enter to the the commercial spacecraft
ISRO, enter to the the commercial spacecraft

By

Published : Dec 10, 2019, 6:13 PM IST

ಬಾಹ್ಯಾಕಾಶ ಕ್ಷೇತ್ರದ ವಾಣಿಜ್ಯ ಅಖಾಡಕ್ಕೆ ರಭಸದಿಂದ ಪ್ರವೇಶಿಸುತ್ತಿದೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ). ಜಗತ್ತಿನಾದ್ಯಂತ ಹಲವಾರು ಸರ್ಕಾರಿ ಮತ್ತು ಖಾಸಗಿ ಉದ್ಯಮಿಗಳಿರುವ ಈ ರಂಗದಲ್ಲಿ ಲಭ್ಯವಿರುವ ಅವಕಾಶಗಳನ್ನು ಬಾಚಿಕೊಳ್ಳುವ ಉದ್ದೇಶದಿಂದ ತನ್ನ ಪ್ರಯತ್ನಗಳನ್ನು ಇಸ್ರೋ ತೀವ್ರಗತಿಯಲ್ಲಿ ಹೆಚ್ಚಿಸಿದೆ. ಇದಕ್ಕಾಗಿ ತನ್ನ ಪ್ರತಿಷ್ಠಿತ ಉಪಗ್ರಹ ಉಡಾವಣಾ ವಾಹನವಾದ ಪಿಎಸ್‌ಎಲ್‌ವಿ (ಧ್ರುವಗಾಮಿ ಉಪಗ್ರಹ ಉಡಾವಣಾ ವಾಹನ) 50ನೇ ಉಡಾವಣೆಗಾಗಿ ಸಿದ್ಧವಾಗಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ, ದೇಶಿ ಕಣ್ಗಾವಲು ಉಪಗ್ರಹ ರಿಸ್ಯಾಟ್-‌2, ಬಿಆರ್-‌1 ಅಲ್ಲದೇ ಇತರ ಒಂಬತ್ತು ಸಣ್ಣ ಉಪಗ್ರಹಗಳ ಸಹಿತ ಪಿಎಸ್‌ಎಲ್‌ವಿ-ಸಿ-48 ರಾಕೆಟ್‌ ನಭಕ್ಕೆ ನೆಗೆಯಲಿದೆ. ಎಸ್‌ಎಲ್‌ವಿ ಮತ್ತು ಎಎಸ್‌ಎಲ್‌ವಿ ಉಡಾವಣಾ ರಾಕೆಟ್‌ಗಳ ಹಾದಿಯಲ್ಲಿ ಸಾಗಿದ ಪಿಎಸ್‌ಎಲ್‌ವಿ ಉಪಗ್ರಹ ಉಡಾವಣಾ ವಾಹನವು ಬಾಹ್ಯಾಕಾಶ ವಾಣಿಜ್ಯದ ದೃಷ್ಟಿಯಿಂದ ಇಸ್ರೋವನ್ನು ಉನ್ನತ ಹಂತಕ್ಕೆ ಏರಿಸಿದೆ. ಇತ್ತೀಚೆಗೆ ಉಡಾವಣೆಗೊಂಡ ಪಿಎಸ್‌ಎಲ್‌ವಿ ಸಿ47 ಈ ದೃಷ್ಟಿಯಿಂದ ವಿಶಿಷ್ಟವಾದುದು. ಅದರಲ್ಲಿದ್ದ ಕಾರ್ಟೊಸ್ಯಾಟ್‌ ಉಪಗ್ರಹವು ಅಮೆರಿಕದ ಎಷ್ಟೋ ಉಪಗ್ರಹಗಳಿಗಿಂತ ಸ್ಪಷ್ಟ ದೃಶ್ಯಗಳನ್ನು ಒದಗಿಸಬಲ್ಲದು. ಈ ಉಪಗ್ರಹದ ಜೊತೆಗೆ ವಿದೇಶದ ಹಲವಾರು ಉಪಗ್ರಹಗಳನ್ನೂ ಸೇರಿಸಿದರೆ, ಬಾಹ್ಯಾಕಾಶಕ್ಕೆ ಇಸ್ರೋ ಕಳಿಸಿದ ಉಪಗ್ರಹಗಳ ಸಂಖ್ಯೆ 300 ದಾಟಿದಂತಾಗುತ್ತೆ.

ಅಮೆರಿಕ, ಜರ್ಮನಿ ಮತ್ತು ಬ್ರಿಟನ್‌ ಸೇರಿ 33 ದೇಶಗಳು ಇಸ್ರೋಗೆ ಗ್ರಾಹಕ ದೇಶಗಳಾಗಿದ್ದು, ಸಣ್ಣ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ರವಾನಿಸುವ ತನ್ನ ಸಾಮರ್ಥ್ಯವನ್ನು ಇಸ್ರೋ ಈಗ ಮತ್ತೊಮ್ಮೆ ಸಾಬೀತುಪಡಿಸಿದೆ. ಇನ್ನೂ ಕುತೂಹಲದ ಸಂಗತಿ ಅಂದ್ರೆ, ಈ ಎಲ್ಲಾ ಉಪ್ರಹಗಳನ್ನು ಪಿಎಸ್‌ಎಲ್‌ವಿ ಉಡಾವಣಾ ವಾಹನವೇ ಉಡಾವಣೆ ಮಾಡಿರುವುದು.

ಇಸ್ರೋದ ಮಾರುಕಟ್ಟೆ ವಿಭಾಗವಾದ ಆಂತರಿಕ್ಷ ಕಾರ್ಪೊರೇಶನ್ ಸಂಸ್ಥೆಯು ಉಪಗ್ರಹಗಳ ವಾಣಿಜ್ಯ ಉಡಾವಣೆಯನ್ನು ಈಗ ನೋಡಿಕೊಳ್ಳುತ್ತಿದೆ. ಎಷ್ಟೋ ಸಂದರ್ಭಗಳಲ್ಲಿ ರಾಕೆಟ್‌ನ ಸಾಮರ್ಥ್ಯ ಮೀರಿದ ಪ್ರಮಾಣದಲ್ಲಿ ಬರುವ ಬೇಡಿಕೆಯನ್ನು ಕೈಬಿಡಬೇಕಾಗಿ ಬಂದಿದ್ದೂ ಉಂಟು.

2009-2018ರ ಅವಧಿಯಲ್ಲಿ ಸಣ್ಣ ಉಪಗ್ರಹಗಳ ಉಡಾವಣಾ ಮಾರುಕಟ್ಟೆ ಮೌಲ್ಯ $ 1260 ಡಾಲರ್​​​ (₹ 8950 ಕೋಟಿ) $ 4280 ಡಾಲರ್​ಗೆ (₹ 3,04,000 ಕೋಟಿ) ಏರಿದೆ. 2019-28ರ ಅವಧಿಯಲ್ಲಿ ಇದು ಮೂರು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಮುಂದಿನ 10 ವರ್ಷಗಳಲ್ಲಿ 8600 ಉಪಗ್ರಹಗಳು ಉಡಾಣೆಯಾಗುವ ನಿರೀಕ್ಷೆಯಿದೆ. ಬರಲಿರುವ ದಿನಗಳಲ್ಲಿ ಸಣ್ಣ ಉಪಗ್ರಹಗಳ ಉಡಾವಣೆಗೆ ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಹೆಚ್ಚಲಿರುವುದಕ್ಕೆ ಸಂಕೇತ ಇದು.

ಈ ಬೇಡಿಕೆಯನ್ನು ಈಡೇರಿಸಬೇಕೆಂದರೆ, ಭಾರತದ ಖಾಸಗಿ ಕ್ಷೇತ್ರವೂ ಬಾಹ್ಯಾಕಾಶ ವಲಯಕ್ಕೆ ಪ್ರವೇಶಿಸಬೇಕಾಗುತ್ತದೆ. ಅಮೆರಿಕದಲ್ಲಿ, ಸ್ಪೇಸ್‌ ಎಕ್ಸ್‌ ಮತ್ತು ಬ್ಲ್ಯೂ ಒರಿಜಿನ್‌ನಂತಹ ಕಂಪನಿಗಳು ಮಾನವಸಹಿತ ಬಾಹ್ಯಾಕಾಶ ಪ್ರಯಾಣಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ಆದ್ದರಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ ಖಾಸಗಿ ಉದ್ಯಮ ಉತ್ತೇಜಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ನಿರ್ಧಾರಕ್ಕೆ ಅನುಗುಣವಾಗಿ ಭಾರತದ ಮತ್ತೊಂದು ಖಾಸಗಿ ಘಟಕವಾದ ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ ಸಂಸ್ಥೆ ಇದೇ ವರ್ಷದ ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ಉದ್ಘಾಟನೆಯಾಯಿತು. ಬಾಹ್ಯಾಕಾಶ ವಲಯಕ್ಕೆ ಪ್ರವೇಶಿಸಲು ಭಾರತದ ಖಾಸಗಿ ಕಂಪನಿಗಳಿಗೆ ನೆರವಾಗುವ ಮೂಲಕ ಇಸ್ರೋ ಸಂಶೋಧನೆ ಲಾಭವನ್ನು ದೇಶದ ಕೈಗಾರಿಕಾ ಕ್ಷೇತ್ರಕ್ಕೂ ತಲುಪಿಸುವುದು ಈ ಸಂಸ್ಥೆಯ ಪ್ರಾಥಮಿಕ ಉದ್ದೇಶ. ಇದರ ಅಂಗವಾಗಿ ಈ ಕಂಪನಿಗಳಿಗೆ 'ಲಿಥಿಯಂ ಅಯಾನ್‌ ಬ್ಯಾಟರಿ' ತಂತ್ರಜ್ಞಾನವನ್ನೂ ಈ ವರ್ಷ ಅತಿ ಕಡಿಮೆ ದರದಲ್ಲಿ ಮಾರಾಟಕ್ಕೆ ಲಭ್ಯವಾಗಿಸಲಾಯಿತು.

ಇನ್ನೊಂದೆಡೆ, ಪಿಎಸ್‌ಎಲ್‌ವಿಗಿಂತ ಕಡಿಮೆ ಸಾಮರ್ಥ್ಯದ ಸಣ್ಣ ಉಪಗ್ರಹ ಉಡಾವಣಾ ವಾಹನವನ್ನು (ಎಸ್‌ಎಸ್‌ಎಲ್‌ವಿ) ಅಭಿವೃದ್ಧಿಪಡಿಸಲಾಗುತ್ತಿದೆ. ಇದರ ಸಾಮರ್ಥ್ಯ 300-500 ಕೆ.ಜಿ. ನಡುವೆ ಇರುವ ಅಂದಾಜಿದೆ. ಎಸ್‌ಎಸ್‌ಎಲ್‌ವಿಯನ್ನು ಶೀಘ್ರ ಉಡಾವಣೆ ಮಾಡಲಾಗುವುದು ಎಂದು ಕಾರ್ಟೊಸ್ಯಾಟ್‌ ಉಡಾವಣಾ ಸಂದರ್ಭದಲ್ಲಿ ಇಸ್ರೋ ಅಧ್ಯಕ್ಷ ಡಾ.ಶಿವನ್‌ ಹೇಳಿದ್ದರು. ಸಣ್ಣ ಉಪಗ್ರಹಗಳ ಉಡಾವಣಾ ರಾಕೆಟ್‌ ಪರೀಕ್ಷೆ ಯಶಸ್ವಿಯಾದಲ್ಲಿ, ಇಸ್ರೋ ಮೇಲಿನ ಆರ್ಥಿಕ ಹೊರೆ ಗಣನೀಯವಾಗಿ ತಗ್ಗಲಿದೆ. ಇದರಿಂದ ಉಪಗ್ರಹಗಳ ಉಡಾವಣೆ ಇನ್ನಷ್ಟು ಸುಲಭವಾಗಲಿದೆ.

ವಾಣಿಜ್ಯ ಉದ್ದೇಶಗಳಿಗೆ ಈ ಸಣ್ಣ ಉಪಗ್ರಹ ಉಡಾವಣಾ ವಾಹನವನ್ನು ಬಳಸುವುದು ಸುಲಭವಾಗುವಂತೆ ಇಸ್ರೋ ಎಚ್ಚರ ವಹಿಸುತ್ತಿದೆ. ಸಾಮಾನ್ಯವಾಗಿ ಪಿಎಸ್‌ಎಲ್‌ವಿ ಸಿದ್ಧತಾ ಅವಧಿ ಎರಡು ಮಾನವ ತಿಂಗಳುಗಳ ಯೋಜನೆಯಷ್ಟಿದ್ದು, ಇದಕ್ಕಾಗಿ ದೊಡ್ಡ ಮಟ್ಟದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಪಿಎಸ್‌ಎಲ್‌ವಿಗೆ ಹೋಲಿಸಿದಲ್ಲಿ, ಎಸ್‌ಎಸ್‌ಎಲ್‌ವಿಯ ಸಿದ್ಧತೆ ಹಾಗೂ ಜಾರಿಗೊಳಿಸುವಿಕೆ ಅವಧಿ ನಾಲ್ಕು ಪಟ್ಟು ಕಡಿಮೆ. ವೆಚ್ಚದ ದೃಷ್ಟಿಯಿಂದಲೂ ಅದು ಪಿಎಸ್‌ಎಲ್‌ವಿಗಿಂತ ಸಾಕಷ್ಟು ಕಡಿಮೆ. ಪಿಎಸ್‌ಎಲ್‌ವಿ ಪರೀಕ್ಷೆಗೆ ಕನಿಷ್ಠ 400 ಉದ್ಯೋಗಿಗಳು ಬೇಕಾಗಿದ್ದು, ₹ 30 ಕೋಟಿ ವೆಚ್ಚವಾದರೆ, ಕೇವಲ 10 ಉದ್ಯೋಗಿಗಳು ಎಸ್‌ಎಸ್‌ಎಲ್‌ವಿ ಪ್ರಯೋಗಕ್ಕೆ ಸಾಕಾಗುತ್ತಾರೆ. ಈ ಹಿನ್ನೆಲೆಯಲ್ಲಿ, ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಪ್ರತಿ ವರ್ಷ 60 ಉಪಗ್ರಹಗಳನ್ನು ಉಡಾವಣೆ ಮಾಡಬಹುದು ಎಂದು ಆಂತರಿಕ್ಷ ಸಂಸ್ಥೆ ಅಂದಾಜಿಸಿದೆ.

ವಾಣಿಜ್ಯ ಉಪಗ್ರಹಗಳ ಉಡಾವಣೆಯಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಪ್ರತಿಷ್ಠೆಯ ಜೊತೆಗೆ ಆದಾಯವೂ ಹೆಚ್ಚಲಿದೆ. ತನ್ನ ಸಂವಹನ ಮತ್ತು ಇಂಧನ ಬೇಡಿಕೆಗಳನ್ನು ಈಡೇರಿಸುವ ಯಾವೊಂದು ದೇಶವನ್ನೂ ಸಾಮಾನ್ಯವಾಗಿ ಯಾರೂ ವಿರೋಧಿಸಲು ಬಯಸುವುದಿಲ್ಲ. ಭಾರತದ ನೆರೆಹೊರೆಯ ದೇಶಗಳಿಗೆ ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಿಸಬೇಕಾದ ಅವಶ್ಯಕತೆಯಿದೆ. ಇಸ್ರೊದ ಹೊಸ ರಾಕೆಟ್‌ ವ್ಯವಸ್ಥೆಯಿಂದಾಗಿ, ಕಡಿಮೆ ದರದಲ್ಲಿ ಅವರ ಬೇಡಿಕೆಗಳನ್ನು ಈಡೇರಿಸಿದಲ್ಲಿ, ನೆರೆಹೊರೆಯ ದೇಶಗಳಲ್ಲಿ ಭಾರತದ ಪ್ರತಿಷ್ಠೆ ಹೆಚ್ಚುವುದು. ಉತ್ತಮ ದೂರಸಂಪರ್ಕ ವ್ಯವಸ್ಥೆಗಾಗಿ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್‌, ಮಾಲ್ಡೀವ್ಸ್‌, ನೇಪಾಳ ಮತ್ತು ಶ್ರೀಲಂಕಾದಂತಹ ಸಾರ್ಕ್‌ ದೇಶಗಳಿಗೆ ಜಿಸ್ಯಾಟ್‌ ಸೇವೆಗಳನ್ನು ಒದಗಿಸಿದ್ದಲ್ಲದೇ ಈ ನಿಟ್ಟಿನಲ್ಲಿ ವಿಶೇಷ ಸೇವೆಗಳನ್ನೂ ಭಾರತ ಒದಗಿಸಿದೆ.

ಹಲವಾರು ದೇಶಗಳ ಖಾಸಗಿ ಕಂಪನಿಗಳು ಉಪಗ್ರಹ ಉಡಾವಣಾ ಮಾರುಕಟ್ಟೆಯನ್ನು ಪ್ರವೇಶಿಸಿವೆ. ಸದ್ಯ ಒಂದು ಉಪಗ್ರಹವನ್ನು ಬಾಹ್ಯಾಕಾಶ ಕಕ್ಷೆಯಲ್ಲಿ ಇರಿಸಲು ತಗಲುವ ವೆಚ್ಚ ಅಂದಾಜು $ 20 ಸಾವಿರ ಡಾಲರ್​ (ಅಂದಾಜು ₹14.25 ಲಕ್ಷ). ಈ ಸೇವೆಯನ್ನು ನಾವು ಇನ್ನೂ ಕಡಿಮೆ ದರದಲ್ಲಿ ಒದಗಿಸಿದಾಗ ಮಾತ್ರ ಒಪ್ಪಂದಗಳಾಗುವುದು ಸಾಧ್ಯ. ಅಮೆರಿಕದ ಪೀಟರ್‌ಬೆಕ್‌ ಎಂಬ ಕಂಪನಿ 'ಎಲೆಕ್ಟ್ರಾನ್‌ʼ ಹೆಸರಿನ ಸಣ್ಣ ರಾಕೆಟ್‌ ವಿನ್ಯಾಸಗೊಳಿಸಿದೆ. ಸ್ಪೇಸ್‌ ಎಕ್ಸ್‌ನಿಂದ ಈಗಾಗಲೇ ಗುತ್ತಿಗೆ ಆಧಾರದ ಮೇಲೆ ಕೆಲವು ಕೆಲಸಗಳನ್ನೂ ಅದು ಪಡೆದುಕೊಂಡಿದ್ದಲ್ಲದೇ ನ್ಯೂಜಿಲ್ಯಾಂಡ್‌ನಲ್ಲಿರುವ ತನ್ನ ಉಡಾವಣಾ ಕೇಂದ್ರದಿಂದ 6 ಉಪಗ್ರಹಗಳನ್ನೂ ಉಡಾವಣೆ ಮಾಡಿದೆ. ಅಂದಾಜು 150 ಕೆಜಿ ತೂಗುವ ಉಪಗ್ರಹಗಳನ್ನು ಆಯಾ ಕಕ್ಷೆಗಳಲ್ಲಿರಿಸಲು ತಗಲುವ ವೆಚ್ಚ $ 600 ಲಕ್ಷ ಡಾಲರ್​​ (ಅಂದಾಜು ₹42.75 ಕೋಟಿ).

ಇನ್ನೊಂದೆಡೆ, ಮರುಬಳಖೆ ಸಾಧ್ಯವಾಗುವಂತಹ ರಾಕೆಟ್‌ಗಳನ್ನು ಪರೀಕ್ಷೆಗೆ ಒಳಪಡಿಸುವ ಹಂತವನ್ನು ಸ್ಪೇಸ್‌ ಎಕ್ಸ್‌ ಕಂಪನಿ ತಲುಪಿದೆ. ಭಾರತ ಇಂತಹ ಪರೀಕ್ಷೆಯನ್ನು 2016ರಲ್ಲಿ ಮಾಡಿತ್ತು. ಆರ್‌ಎಲ್‌ವಿಟಿ5 ರಾಕೆಟ್‌ ಅನ್ನು ಮರುಬಳಕೆ ಮಾಡುವ ಪ್ರಯತ್ನದಲ್ಲಿ ಚೀನಾ ಮೂಲದ ನವೋದ್ಯಮವಾದ ಲಿಂಕ್‌ ಸ್ಪೇಸ್‌ ಪ್ರಗತಿ ಸಾಧಿಸಿದೆ. ಚೀನಾದ ಐಸ್ಪೇಸ್‌ ಸಂಸ್ಥೆ 2021ರಲ್ಲಿ ಬಾಹ್ಯಾಕಾಶದಲ್ಲಿ ತನ್ನ ಮೊದಲ ಹೆಜ್ಜೆ ಇಡುವ ಗುರಿ ಹೊಂದಿದೆ. ಒಂದು ವೇಳೆ ಈ ಪ್ರಯತ್ನದಲ್ಲಿ ಯಶಸ್ವಿಯಾದರೆ, ಉಡಾವಣಾ ವೆಚ್ಚ ಶೇ.70ರಷ್ಟು ಕಡಿಮೆಯಾಗಲಿದೆ ಎಂದು ಐಸ್ಪೇಸ್‌ ಹೇಳಿದೆ. ಈ ತಂತ್ರಜ್ಞಾನವನ್ನು ಪಡೆದುಕೊಳ್ಳುವುದು ಇಸ್ರೋಗೆ ಸಾಧ್ಯವಾದರೆ, ಆಗ ಹಿಂದಿರುಗಿ ನೋಡುವ ಪ್ರಮೇಯವೇ ಬಾರದು. ಅಥವಾ ಬಾಹ್ಯಾಕಾಶದಿಂದ ಕೆಳಗೆ ನೋಡುವ ಪ್ರಸಂಗವೂ ಭಾರತಕ್ಕೆ ಬರಲಿಕ್ಕಿಲ್ಲ.

-ಲಕ್ಷ್ಮಿ ತುಳಸಿ

ABOUT THE AUTHOR

...view details