ಕರ್ನಾಟಕ

karnataka

ನೋಯ್ಡಾದಲ್ಲಿ ಐರನ್​ ಮ್ಯಾನ್ ಎಂಬ ಅನ್ಯಗ್ರಹ ಜೀವಿ ಮೂಡಿಸಿದ ಕುತೂಹಲ ಅಷ್ಟಿಷ್ಟಲ್ಲ: ಅಸಲಿಗೆ ಏನಿದು?

ಹಾಲಿವುಡ್​​ ಸಿನಿಮಾದ 'ಐರನ್ ಮ್ಯಾನ್' ಪಾತ್ರದಾರಿಯ ರೊಬೊಟ್​ ಅನ್ನು ಹೋಲುವ ಅನಿಲದಿಂದ ತುಂಬಿದ ಬಲೂನ್ ಶನಿವಾರ ಮುಂಜಾನೆ ಪಟ್ಟಣದ ಮೇಲೆ ಕೆಲಹೊತ್ತು ಹಾರಾಡಿ ಭಟ್ಟ ಪಾರ್ಸೌಲ್ ಗ್ರಾಮದ ಬಳಿಯ ಕಾಲುವೆಯಲ್ಲಿ ಬಿತ್ತು. ಇದನ್ನು ಕೆಲವರು 'ಅನ್ಯಲೋಕದ' ಜೀವಿ ಎಂದು ಭಾವಿಸಿ, ಅದನ್ನು ನೋಡಲು ಜನಸಮೂಹವೇ ಸ್ಥಳದಲ್ಲಿ ನೆರೆದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

By

Published : Oct 18, 2020, 11:02 AM IST

Published : Oct 18, 2020, 11:02 AM IST

Iron Man Balloon
ಐರನ್​ ಮ್ಯಾನ್

ನೋಯ್ಡಾ: ಕಾಲ್ಪನಿಕ ಕಾಮಿಕ್ ಪಾತ್ರದ ಐರನ್ ಮ್ಯಾನ್ ಹೋಲುವ ಬಲೂನ್ ಆಕಾಶದಲ್ಲಿ ತೇಲಾಡುತ್ತಾ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಡಂಕೌರ್ ಪಟ್ಟಣದ ನಿವಾಸಿಗಳಲ್ಲಿ ಅನ್ಯಲೋಕದ ಆಕ್ರಮಣದ ಭೀತಿ ಹುಟ್ಟಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಹಾಲಿವುಡ್​​ ಸಿನಿಮಾದ 'ಐರನ್ ಮ್ಯಾನ್' ಪಾತ್ರದಾರಿಯ ರೊಬೊಟ್​ ಅನ್ನು ಹೋಲುವ ಅನಿಲದಿಂದ ತುಂಬಿದ ಬಲೂನ್ ಶನಿವಾರ ಮುಂಜಾನೆ ಪಟ್ಟಣದ ಮೇಲೆ ಕೆಲಹೊತ್ತು ಹಾರಾಡಿ ಭಟ್ಟ ಪಾರ್ಸೌಲ್ ಗ್ರಾಮದ ಬಳಿಯ ಕಾಲುವೆಯಲ್ಲಿ ಬಿತ್ತು. ಇದನ್ನು ಕೆಲವರು 'ಅನ್ಯಲೋಕದ' ಜೀವಿ ಎಂದು ಭಾವಿಸಿ, ಅದನ್ನು ನೋಡಲು ಜನಸಮೂಹವೇ ಸ್ಥಳದಲ್ಲಿ ನೆರೆದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಗಾಳಿಯಿಂದ ತುಂಬಿದ ಬಲೂನ್ ಆಗಿದ್ದು, ಅದು ಆಕಾಶದಲ್ಲಿ ಹಾರಾಡುತ್ತಾ ಕೆಲ ಸಮಯದ ಬಳಿಕ ಕಾಲುವೆಯ ಪಕ್ಕದ ಪೊದೆಗಳಲ್ಲಿ ಸಿಲುಕಿಕೊಂಡಿತು. ಬಲೂನಿನ ಒಂದು ಭಾಗವು ಕಾಲುವೆಯಲ್ಲಿ ಹರಿಯುವ ನೀರು ಸ್ಪರ್ಶಿಸುತ್ತಿತ್ತು. ಅದು ಬಲೂನ್ ಅನ್ನು ಅಲುಗಾಡಿಸಲು ಕಾರಣವಾಯಿತು. ಇದನ್ನೇ ನೋಡಿದ ಸ್ಥಳೀಯರು ಅನ್ಯಲೋಕದ ಜೀವಿ ಎಂದು ಭಾವಿಸಿ ಆತಂಕದಿಂದ ವೀಕ್ಷಣೆಗೆ ನೆರದಿದ್ದರು ಎಂದು ಡಂಕೌರ್ ಪೊಲೀಸ್ ಅಧಿಕಾರಿ ಅನಿಲ್ ಕುಮಾರ್ ಪಾಂಡೆ ಹೇಳಿದರು.

ಇದ ಐರನ್ ಮ್ಯಾನ್ (ಕಾಲ್ಪನಿಕ ಸೂಪರ್​ ಹೀರೋ ಪಾತ್ರ) ನಂತೆ ಅದರ ಬಣ್ಣ ಮತ್ತು ವಿನ್ಯಾಸ ಮಾಡಲಾಗಿದೆ. ಅಸಾಮಾನ್ಯ ಕಾಣುವುದರಿಂದ ಕೆಲವರು ಇದನ್ನು ಅನ್ಯಲೋಕದ್ದು ಎಂದು ಭಾವಿಸಿದ್ದರು ಮತ್ತು ಆತಂಕಕ್ಕೊಳಗಾಗಿದ್ದರು ಎಂದರು.

ಬಲೂನ್​ನಲ್ಲಿದ್ದ ಅನಿಲ ಹೊರಬಂದಂತೆ ಕೆಳಗಿಳಿದಿರಬೇಕು. ಮಧ್ಯಾಹ್ನದ ವೇಳೆ ಕಾಲುವೆ ಬಳಿ ಮೀನು ಹೋದ ವ್ಯಕ್ತಿ ಇದನ್ನು ಗಮನಿಸಿದ್ದಾನೆ. ಇದರಲ್ಲಿ ಯಾವುದೇ ಹಾನಿಕಾರಕ ಅಂಶಗಳಿಲ್ಲ. ಆದರೆ, ಅದನ್ನು ಗಾಳಿಯಲ್ಲಿ ಹಾರುಡುವಂತೆ ಯಾರು ಮಾಡಿಕೊಟ್ಟಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ABOUT THE AUTHOR

...view details