ಕರ್ನಾಟಕ

karnataka

ETV Bharat / bharat

ಭಾರತ ದರ್ಶನಕ್ಕಾಗಿ ನಾಲ್ಕು ವಿಶೇಷ ಯಾತ್ರಾ ರೈಲುಗಳನ್ನು ಆರಂಭಿಸಿದ ಐಆರ್‌ಸಿಟಿಸಿ

ಭಾರತೀಯ ರೈಲ್ವೆಯ ಅಂಗಸಂಸ್ಥೆಯಾದ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಗುಜರಾತ್‌ನ ರಾಜ್‌ಕೋಟ್‌ನಿಂದ ನಾಲ್ಕು ವಿಶೇಷ ಯಾತ್ರಾ ರೈಲುಗಳಿಗೆ ಚಾಲನೆ ನೀಡಲಿದೆ.

By

Published : Feb 6, 2021, 1:23 PM IST

IRCTC to run 4 pilgrim special trains
ನಾಲ್ಕು ವಿಶೇಷ ಯಾತ್ರಾ ರೈಲುಗಳನ್ನು ಆರಂಭಿಸಿದ ಐಆರ್‌ಸಿಟಿಸಿ

ಗಾಂಧಿನಗರ:ಐಆರ್‌ಸಿಟಿಸಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಗುಜರಾತ್‌ನ ರಾಜ್‌ಕೋಟ್‌ನಿಂದ ನಾಲ್ಕು ವಿಶೇಷ ಯಾತ್ರಾ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಲಿದೆ.

ಈ ಬಗ್ಗೆ ಐಆರ್‌ಸಿಟಿಸಿ ಪಶ್ಚಿಮ ವಲಯದ ಗ್ರೂಪ್ ಜನರಲ್ ಮ್ಯಾನೇಜರ್ ರಾಹುಲ್ ಹಿಮಾಲಯನ್ ಮಾಹಿತಿ ನೀಡಿದ್ದು, ಎಲ್ಲಾ ನಾಲ್ಕು ರೈಲುಗಳು ರಾಜ್‌ಕೋಟ್​​ ರೈಲುನಿಲ್ದಾಣದಿಂದ ಆರಂಭವಾಗುತ್ತವೆ ಹಾಗೂ. ಈ ತಿಂಗಳಲ್ಲಿ ಎರಡು ವಿಶೇಷ ಯಾತ್ರಾ ರೈಲುಗಳು ಪ್ರಾರಂಭವಾಗಲಿವೆ ಎಂದು ಹೇಳಿದ್ರು.

ದಕ್ಷಿಣ ದರ್ಶನ್ ವಿಶೇಷ ಯಾತ್ರಿಕ ರೈಲು ಫೆಬ್ರವರಿ 14 ರಿಂದ ಫೆ. 25 ರವರೆಗೆ ನಾಸಿಕ್, ಔರಂಗಾಬಾದ್, ಪಾರ್ಲಿ, ಕರ್ನೂಲ್ ಪಟ್ಟಣ, ರಾಮೇಶ್ವರಂ, ಮಧುರೈ ಮತ್ತು ಕನ್ಯಾಕುಮಾರಿ ಮಾರ್ಗವಾಗಿ ಚಲಿಸಲಿದ್ದು, ಫೆಬ್ರವರಿ 14 ರಿಂದ ಫೆಬ್ರವರಿ 25 ರವರೆಗೆ ಒಳಗೊಂಡಿದೆ.

"ಫೆಬ್ರವರಿ 27 ರಿಂದ ಮಾರ್ಚ್ 8 ರವರೆಗೆ ಚಲಿಸುವ ನಮಾಮಿ ಗಂಗೆ ವಿಶೇಷ ಯಾತ್ರಿಕರ ರೈಲು ವಾರಣಾಸಿ, ಗಯಾ, ಕೋಲ್ಕತಾ, ಗಂಗಾ ಸಾಗರ್ ಮತ್ತು ಪುರಿ ಮಾರ್ಗವಾಗಿ ತೆರಳಲಿದೆ.

ಭಾರತ್​ ದರ್ಶನ್​ ಟ್ರೈನ್​ ಮಾರ್ಚ್​ನಿಂದ ಆರಂಭ:

ಮಥುರಾ, ಹರಿದ್ವಾರ, ಋಷಿಕೇಶ್​, ಅಮೃತಸರ ಮತ್ತು ವೈಷ್ಣೋದೇವಿ ಮಾರ್ಗದಲ್ಲಿ ಚಲಿಸುವ ಕುಂಭ ಹರಿದ್ವಾರ್ ಭಾರತ್ ದರ್ಶನ ರೈಲು ಮಾರ್ಚ್ 6 ರಿಂದ ಮಾರ್ಚ್ 14 ರವರೆಗೆ ಚಲಿಸಲಿದೆ.

ದಕ್ಷಿಣ ಭಾರತ ಪ್ರವಾಸ ಮಾಡುವ ಭಾರತ್ ದರ್ಶನ ರೈಲು ಮಾರ್ಚ್ 20 ರಿಂದ ಮಾರ್ಚ್ 31 ರವರೆಗೆ ರಾಮೇಶ್ವರಂ, ಮಧುರೈ, ಕನ್ಯಾಕುಮಾರಿ, ತಿರುವನಂತಪುರ, ಗುರುವಾಯೂರ್, ತಿರುಪತಿ ಮತ್ತು ಮೈಸೂರು ಮಾರ್ಗದಲ್ಲಿ ಪ್ರಯಾಣ ಬೆಳೆಸಲಿದೆ.

ಅಲ್ಲದೆ ಕೊರೊನಾ ಕಾರಣಕ್ಕೆ ಸ್ಥಗಿತಗೊಂಡಿದ್ದ, ತೇಜಸ್ ಎಕ್ಸ್‌ಪ್ರೆಸ್ ರೈಲು ಫೆಬ್ರವರಿ 14 ರಿಂದ ಅಹಮದಾಬಾದ್ - ಮುಂಬೈ ಮಾರ್ಗದಲ್ಲಿ ಮರು ಆರಂಭವಾಗಲಿದೆ. ಈ ರೈಲು ಶುಕ್ರವಾರ, ಶನಿವಾರ, ಭಾನುವಾರ ಮತ್ತು ಸೋಮವಾರದಂದು ಸಂಚರಿಸಲಿದೆ ”ಎಂದು ಐಆರ್‌ಸಿಟಿಸಿಯ ಪ್ರವಾಸೋದ್ಯಮದ ಜಂಟಿ ಜನರಲ್ ಮ್ಯಾನೇಜರ್ ವಾಯುನಂದನ್ ಶುಕ್ಲಾ ತಿಳಿಸಿದ್ದಾರೆ.

ABOUT THE AUTHOR

...view details