ಮುಂಬೈ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ಈಗಾಗಲೇ ಮುಕ್ತಾಯಗೊಂಡಿದ್ದು, ಟೂರ್ನಿ ಬರುವ ಮಾರ್ಚ್ 29ರಿಂದ ಆರಂಭಗೊಳ್ಳಲಿದೆ ಎಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ.
ವಾಂಖೆಡೆ ಮೈದಾನದಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ... ಈ ದಿನಾಂಕದಿಂದ ಟೂರ್ನಿ ಆರಂಭ!
ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳುವ ದಿನಾಂಕ ರಿವೀಲ್ ಆಗಿದ್ದು, ಬಹುನಿರೀಕ್ಷಿತ ಟೂರ್ನಿ ಮಾರ್ಚ್ 29ರಿಂದ ಆರಂಭಗೊಳ್ಳಲಿದೆ.
ವಾಖಂಡೆ ಮೈದಾನದಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ತಿಳಿಸಿರುವ ಪ್ರಕಾರ, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಆರಂಭಿಕ ಪಂದ್ಯವನ್ನ ಮುಂಬೈನ ವಾಂಖೆಡೆ ಮೈದಾನದಲ್ಲಿ ಆಡಲಿದ್ದು, ಈ ಮೂಲಕ ಅದ್ಧೂರಿ ಟೂರ್ನಿಗೆ ಚಾಲನೆ ಸಿಗಲಿದೆ ಎಂದು ತಿಳಿಸಿದೆ.
ಇದೇ ವೇಳೆ ಮಾಹಿತಿ ನೀಡಿರುವ ಡೆಲ್ಲಿ ತಂಡ, ಪ್ರಾರಂಭದ ಕೆಲವೊಂದು ಮ್ಯಾಚ್ಗಳಿಂದ ಆಸ್ಟ್ರೆಲಿಯಾ, ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ನ ಪ್ಲೇಯರ್ಸ್ ಹೊರಗುಳಿದುಕೊಳ್ಳಲಿದ್ದಾರಂತೆ. ಈ ವೇಳೆ ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್ ನಡುವೆ ಹಾಗೂ ಇಂಗ್ಲೆಂಡ್-ಶ್ರೀಲಂಕಾ ನಡುವೆ ಕ್ರಿಕೆಟ್ ಸರಣಿ ನಡೆಯಲಿದೆ ಎಂದು ತಿಳಿಸಿದೆ.
Last Updated : Dec 30, 2019, 11:48 PM IST