ಕರ್ನಾಟಕ

karnataka

ಇರಾನ್ ವಿದೇಶಾಂಗ ಸಚಿವರ ಜೊತೆ ಮೋದಿ ಮಾತುಕತೆ

ಭಾರತಕ್ಕೆ ಆಗಮಿಸಿರುವ ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜಾವದ್ ಜರೀಫ್ ಅವರ ಜೊತೆ ಪ್ರಧಾನಿ ನರೇಂದ್ರ ಮೋದಿ ಸಮಾಲೋಚಿಸಿದರು. ಇರಾನ್‌-ಭಾರತ ಬಾಂಧವ್ಯ ಹಾಗೂ ಸದ್ಯದ ಉದ್ವಿಗ್ನ ಪರಿಸ್ಥಿತಿ ಬಗ್ಗೆ ಉಭಯ ನಾಯಕರು ಮಾತುಕತೆ ನಡೆಸಿದರು.

By

Published : Jan 16, 2020, 2:28 AM IST

Published : Jan 16, 2020, 2:28 AM IST

ಪ್ರಧಾನಿ ಮೋದಿ ಹೇಳಿಕೆ
ಪ್ರಧಾನಿ ಮೋದಿ ಹೇಳಿಕೆ

ನವದೆಹಲಿ: ಇರಾನ್‌ನೊಂದಿಗೆ ಬಲವಾದ ಮತ್ತು ಸ್ನೇಹಪರ ಸಂಬಂಧ ಬೆಳೆಸುವಲ್ಲಿ ಭಾರತದ ನಿರಂತರ ಬದ್ಧತೆ ಇದೆ ಎಂದು ಇರಾನ್ ವಿದೇಶಾಂಗ ಸಚಿವ ಜರೀಫ್​​ಗೆ ಪ್ರಧಾನಿ ಮೋದಿ ತಿಳಿಸಿದರು.

ರೈಸಿನಾ ಸಂವಾದದಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿರುವ ಜರೀಫ್​ ಜೊತೆ ಮೋದಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಎಂದು ಪಿಎಂ ಕಚೇರಿ ತಿಳಿಸಿದೆ.

ಈ ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ಸ್ಥಿರತೆ ಕಾಪಾಡಲು ಭಾರತ ಸದಾ ಮುಂದಿರುತ್ತದೆ ಎಂದು ಕೂಡ ಪ್ರಧಾನಿ ನರೇಂದ್ರ ಮೋದಿ ಅವರು ಇರಾನಿನ ವಿದೇಶಾಂಗ ಸಚಿವರಿಗೆ ತಿಳಿಸಿದ್ದಾರೆ. ಇನ್ನು ಇತ್ತೀಚಿನ ಕೆಲ ಬೆಳವಣಿಗೆಗಳ ಬಗ್ಗೆ ವಿದೇಶಾಂಗ ಸಚಿವರು ತಮ್ಮ ಅಭಿಪ್ರಾಯಗಳನ್ನು ಪ್ರಧಾನಿ ಜೊತೆ ಹಂಚಿಕೊಂಡಿದ್ದಾರೆ. ಜೊತೆಗೆ ಚಬಹಾರ್ ಯೋಜನೆಯ ಪ್ರಗತಿಗೆ ಇರಾನ್ ನಾಯಕರಿಗೆ ಮೋದಿ ಧನ್ಯವಾದ ತಿಳಿಸಿದ್ದಾರೆ ಎಂದು ಪಿಎಂ ಕಚೇರಿ ಮಾಹಿತಿ ನೀಡಿದೆ.

ಇರಾನ್ ಕಮಾಂಡರ್ ಸುಲೇಮಾನಿ ಹತ್ಯೆ ಬಳಿಕ ಅಮೆರಿಕಾ ಮತ್ತು ಇರಾನ್ ಮಧ್ಯೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬೆನ್ನಲ್ಲೇ ಸಂವಾದದಲ್ಲಿ ಭಾಗವಹಿಸಲು ಇರಾನ್ ವಿದೇಶಾಂಗ ಸಚಿವರು ಭಾರತಕ್ಕೆ ಆಗಮಿಸಿದ್ದಾರೆ.

For All Latest Updates

ABOUT THE AUTHOR

...view details