ನವದೆಹಲಿ:ಶೈತ್ಯಕಾರಕ ಹೊಂದಿರುವ ಎಲ್ಲಾ ಹವಾನಿಯಂತ್ರಣ ಸಾಧನ(ಎಸಿ)ಗಳ ಆಮದನ್ನು ಸಂಪೂರ್ಣವಾಗಿ ರದ್ದು ಮಾಡಿಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಈ ಮೊದಲು ಹವಾನಿಯಂತ್ರಣ ಸಾಧನಗಳ ಆಮದು ನಿಯಮದಲ್ಲಿ ಹಾರ್ಮೊನೈಸ್ಡ್ ಸಿಸ್ಟಮ್ ಕೋಡ್ (HS Code) 84151010 ಮತ್ತು 84151090 ಇರುವ ಎಸಿಗಳ ಆಮದು ''ಉಚಿತ'' ಎಂಬುದನ್ನು ''ನಿಷೇಧಿಸಲ್ಪಟ್ಟಿದೆ'' ಎಂದು ತಿದ್ದುಪಡಿ ಮಾಡಲಾಗಿದೆ ಎಂದು ಇಲಾಖೆ ಸ್ಪಷ್ಟನ ನೀಡಿದೆ.