ಕರ್ನಾಟಕ

karnataka

ETV Bharat / bharat

ಮೋದಿ ಪ್ರಯಾಣಿಸುವ ವಿಮಾನಕ್ಕೆ ಅವಕಾಶ ಕೊಡಿ,ಪಾಕ್‌ಗೆ ಭಾರತ ಮನವಿ

ಶಾಂಘೈ ಸಹಕಾರ ಒಕ್ಕೂಟದ ಸಭೆಗೆ ತೆರಳುವ ಪ್ರಧಾನಿ ಮೋದಿ ವಿಮಾನ ಪಾಕಿಸ್ತಾನದ ವಾಯುನೆಲೆ ಬಳಸಲು ಅವಕಾಶ ಕೊಡಿ ಎಂದು ಭಾರತ, ಪಾಕ್​ಗೆ ಮನವಿ ಮಾಡಿದೆ.

By

Published : Jun 9, 2019, 6:44 PM IST

ಪಾಕಿಸ್ತಾನಕ್ಕೆ ಭಾರತ ಮನವಿ

ನವದೆಹಲಿ: ಕಿರ್ಗಿಸ್ತಾನದ ಬಿಶ್ಕೆಕ್​ಗೆ ಪ್ರಧಾನಿ ಮೋದಿ ಪ್ರಯಾಣ ಬೆಳೆಸಲಿದ್ದಾರೆ. ಈ ವೇಳೆ ಮೋದಿ ಪ್ರಯಾಣ ಮಾಡುವ ವಿಮಾನ ಪಾಕಿಸ್ತಾನದ ವಾಯುಮಾರ್ಗ ಬಳಸಲು ಅವಕಾಶ ಕೊಡಿ ಎಂದು ಭಾರತ ಪಾಕಿಸ್ತಾನಕ್ಕೆ ಮನವಿ ಮಾಡಿಕೊಂಡಿದೆ.

ಮುಂಬರುವ ಜೂನ್​ 13 ಮತ್ತು 14 ರಂದು ಕಿರ್ಗಿಸ್ತಾನದ ಬಿಶ್ಕೆಕ್​ನಲ್ಲಿ ನಡೆಯುವ ಶಾಂಘೈ ಸಹಕಾರ ಒಕ್ಕೂಟದ ಸಭೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಮೋದಿ ಪ್ರಯಾಣಿಸುವ ವಿಮಾನ ಪಾಕಿಸ್ತಾನದ ವಾಯು ಮಾರ್ಗದಲ್ಲೇ ಹೋಗಬೇಕಿದೆ. ಹಾಗಾಗಿ ಅನುಮತಿ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ.

ಫೆಬ್ರವರಿ 26ರಂದು ಭಾರತೀಯ ವಾಯುಸೇನೆ ಪಾಕಿಸ್ತಾನದ ಬಾಲಾಕೋಟ್​ ಮೇಲೆ ಏರ್​ಸ್ಟ್ರೈಕ್​ ನಡೆಸಿದ ನಂತರ ಪಾಕಿಸ್ತಾನ ತನ್ನೆಲ್ಲಾ ವಾಯುಮಾರ್ಗಗಳ ಮೇಲೆ ನಿರ್ಬಂಧ ವಿಧಿಸಿತ್ತು. ಇಲ್ಲಿಯವರೆಗೂ ಆ ನಿರ್ಬಂಧವನ್ನು ತೆರವುಗೊಳಿಸಿಲ್ಲ.

ಭಾರತ ಕೂಡ ಏರಸ್ಟ್ರೈಕ್​ ನಡೆಸಿದ ನಂತರ ಫೆಬ್ರವರಿ 27 ರಿಂದ ದೇಶದ ವಾಯುಮಾರ್ಗಗಳ ಮೇಲೆ ತಾತ್ಕಾಲಿಕ ನಿರ್ಬಂಧ ವಿಧಿಸಿತ್ತು. ಆದ್ರೆ ಕಳೆದ ಮೇ 31 ರಂದು ಈ ನಿರ್ಬಂಧವನ್ನು ತೆರವುಗೊಳಿಸಿದೆ.

For All Latest Updates

TAGGED:

ABOUT THE AUTHOR

...view details