ಕರ್ನಾಟಕ

karnataka

ETV Bharat / bharat

65 ವರ್ಷದ ಮಹಿಳೆಗೆ 14 ತಿಂಗಳಲ್ಲಿ 8 ಹೆಣ್ಣು ಮಕ್ಕಳು...ಬಿಹಾರದಲ್ಲಿ ವಿಚಿತ್ರ ಪ್ರಕರಣ!

65 ವರ್ಷದ ಮಹಿಳೆಯೊಬ್ಬರು ಕೇವಲ 14 ತಿಂಗಳಲ್ಲಿ ಬರೋಬ್ಬರಿ 8 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂಬ ವಿಷಯ ಇದೀಗ ಬಿಹಾರದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

65-yr-old women
65-yr-old women

By

Published : Aug 22, 2020, 6:01 PM IST

ಮುಜಾಫರ್​​ಪುರ್​​​(ಬಿಹಾರ):65 ವರ್ಷದ ಮಹಿಳೆಯೊಬ್ಬರು ಕೇವಲ 14 ತಿಂಗಳಲ್ಲಿ ಬರೋಬ್ಬರಿ 8 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಬಿಹಾರ ಸರ್ಕಾರದ ದಾಖಲೆಯಲ್ಲಿದ್ದು, ಈ ವಿಷಯ ಇದೀಗ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

ಬಿಹಾರದಲ್ಲಿ ಝಾನ್ಸಿ ಸುರಕ್ಷಾ ಯೋಜನೆಯಡಿ ಹೆಣ್ಣು ಮಗುವಿಗೆ ಜನ್ಮ ನೀಡುವ ಪ್ರತಿ ಮಹಿಳೆಗೆ 1,400 ರೂ. ಹಣ ನೀಡಲಾಗುತ್ತದೆ. ಅದೇ ರೀತಿ 65 ವರ್ಷದ ಮಹಿಳೆ ಹೆಸರಿನಲ್ಲಿ ಕೇವಲ 14 ತಿಂಗಳಲ್ಲಿ 8 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಸುಳ್ಳು ದಾಖಲೆ ಹುಟ್ಟು ಹಾಕಿ ಹಣ ಪಡೆದುಕೊಳ್ಳಲಾಗಿದೆ.

65 ವರ್ಷದ ಲೀಲಾ ದೇವಿ ಮುಜಫರ್​​​ಪುರದ ಮಸೂರಿ ಬ್ಲಾಕ್​​ನಲ್ಲಿ ವಾಸವಾಗಿದ್ದಾರೆ.​​ ಈಕೆ ಕೊನೆಯದಾಗಿ ಜನ್ಮ ನೀಡಿರುವ ಮಗನಿಗೆ ಈಗಾಗಲೇ 21 ವರ್ಷ. 14 ತಿಂಗಳಲ್ಲಿ ತನ್ನ ಖಾತೆಗೆ ಹಣ ವರ್ಗಾವಣೆಗೊಂಡಿರುವ ಮಾಹಿತಿ ಕೂಡ ಲೀಲಾದೇವಿಗೆ ಗೊತ್ತಿಲ್ಲ ಎಂದು ಹೇಳಲಾಗುತ್ತಿದೆ. ಜತೆಗೆ ಮರು ದಿನವೇ ಆ ಹಣ ಖಾತೆಯಿಂದ ಡ್ರಾ ಆಗಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇದೇ ರೀತಿ ಅನೇಕ ಪ್ರಕರಣಗಳು ಜಿಲ್ಲೆಯಲ್ಲಿ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ.

ಪ್ರಕರಣದ ವಿಚಾರಣೆ ನಡೆಸಲು ಜಿಲ್ಲಾಧಿಕಾರಿ ಚಂದ್ರಶೇಖರ್​​ ಸಿಂಗ್​ ಮುಂದಾಗಿದ್ದು, ಇದರಲ್ಲಿ ಕೈವಾಡವಿರುವ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಝಾನ್ಸಿ ಸುರಕ್ಷಾ ಯೋಜನೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದ ಯೋಜನೆಯಾಗಿದ್ದು, ಬಾಣಂತಿಯರಿಗಾಗಿ 1400 ರೂ ಹಾಗೂ ಆಶಾ ಕಾರ್ಯಕರ್ತೆಯರಿಗೆ 400 ರೂ ನೀಡಲಾಗುತ್ತದೆ.

ABOUT THE AUTHOR

...view details