ನವದೆಹಲಿ: ಅಂಫಾನ್ ಚಂಡಮಾರುತದಿಂದ ಉಂಟಾಗುವ ಪರಿಹಾರ ಕಾರ್ಯಾಚರಣೆಗೆ ವಾಯು ಸೇನೆ ಮತ್ತಷ್ಟು ಅಲರ್ಟ್ ಆಗಿದೆ. ಅಗತ್ಯ ಪರಿಹಾರಗಳನ್ನು ಒದಗಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಪರಿಹಾರ ಸಾಮಗ್ರಿಗಳ ಪೂರೈಕೆಗಾಗಿ ಸೇನಾ ವಿಮಾನಗಳನ್ನು ಕಾರ್ಯ ಸನ್ನದ್ಧಗೊಳಿಸಿದೆ. ಇದಕ್ಕಾಗಿ 56 ಬೃಹತ್ ವಿಮಾನಗಳು, 25 ಸಣ್ಣ ವಿಮಾನಗಳು ಹಾಗೂ 31 ಹೆಲಿಕಾಪ್ಟರ್‌ಗಳನ್ನು ವಿಪತ್ತು ಕಾರ್ಯಾಚರಣೆಗಾಗಿ ಗುರುತಿಸಿದೆ.
ತನ್ನ ವಾಯು ನೆಲೆಗಳಲ್ಲಿರುವ ವಿಮಾನಗಳು, ಹೆಲಿಕಾಪ್ಟರ್‌ಗಳಲ್ಲಿ ಹೆಚ್ಚಿನ ಪರಿಹಾರ ಸಾಮಗ್ರಿಗಳನ್ನು ಸಾಗಿಸಲು ಮುಂದಾಗಿದೆ. ತುರ್ತು ಸ್ಪಂದನೆಗಾಗಿ ಸೇನಾ ಪೈಲಟ್‌ಗಳು ಸಿದ್ಧರಿದ್ದಾರೆ. ಮಾತ್ರವಲ್ಲದೇ, ಆಡಳಿತಾಧಿಕಾರಿಗಳು ಮತ್ತು ಎನ್‌ಡಿಆರ್‌ಎಫ್‌ನ ಸಮನ್ವಯತೆಯಲ್ಲಿ ವಾಯು ಸೇನೆಯ ಮುಖ್ಯ ಕಚೇರಿಯಲ್ಲಿ ಬಿಕ್ಕಟ್ಟು ನಿರ್ವಹಣೆ ದಳ ಕಾರ್ಯ ಪ್ರವೃತ್ತವಾಗಿದೆ.