ಕರ್ನಾಟಕ

karnataka

ತ್ವರಿತ ಗತಿ ಕೋರ್ಟ್​​ಗಳಲ್ಲಿ ನ್ಯಾಯ ಆಮೆಗತಿ... ಯಾವ್ಯಾವ ರಾಜ್ಯಗಳಲ್ಲಿ ಏನು ಸ್ಥಿತಿ?

2017ರ ರಾಷ್ಟ್ರೀಯ ಕ್ರಿಮಿನಲ್ ಸ್ಟ್ಯಾಟಿಸ್ಟಿಕ್ಸ್ ಬ್ಯೂರೋ ವರದಿಯ ಪ್ರಕಾರ ಸುಮಾರು 12% ಪ್ರಕರಣಗಳಲ್ಲಿ, ರಾಜ್ಯ ತ್ವರಿತಗತಿ ನ್ಯಾಯಾಲಯಗಳು ತೀರ್ಪು ನೀಡಲು 10 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿವೆ.

By

Published : Dec 6, 2019, 10:38 AM IST

Published : Dec 6, 2019, 10:38 AM IST

How quick is justice dispensed?
ತ್ವರಿತ ಗತಿ ನ್ಯಾಯಾಲಯ ತ್ವರಿತ ನ್ಯಾಯ ನೀಡುತ್ತಿದೆಯೇ?

ರಾಜ್ಯಗಳಲ್ಲಿರುವ ತ್ವರಿತ ಗತಿ ನ್ಯಾಯಾಲಯಗಳು ಕೇವಲ ಶೇ. 12 ರಷ್ಟು ಪ್ರಕರಣಗಳನ್ನು ಇತ್ಯರ್ಥ ಮಾಡಲು ತೆಗೆದುಕೊಂಡಿರುವ ಕಾಲಾವಕಾಶ 10 ವರ್ಷಗಳಿಗಿಂತಲೂ ಹೆಚ್ಚು.

ತ್ವರಿತವಾಗಿ ನ್ಯಾಯ ಕಲ್ಪಿಸಿಕೊಡುವ ಉದ್ದೇಶದಿಂದ ಸ್ಥಾಪಿಸಲಾದ ತ್ವರಿತ ಗತಿ ನ್ಯಾಯಾಲಯಗಳಲ್ಲಿ ಅನೇಕ ಪ್ರಕರಣಗಳ ವಿಚಾರಣೆಗೆ ಹತ್ತು ವರ್ಷಗಳೇ ಬೇಕಾಯಿತು ಎಂಬುದು ಆಶ್ಚರ್ಯವಾದರೂ ಸತ್ಯ. ಇನ್ನೂ ಇತ್ತೀಚೆಗಷ್ಟೇ ನಡೆದ 'ದಿಶಾ' ಪ್ರಕರಣದಲ್ಲಿ ತ್ವರಿತ ಗತಿ ನ್ಯಾಯಾಲಯ ರಚಿಸುವ ಹಿನ್ನೆಲೆಯಲ್ಲೂ ದೇಶದಲ್ಲಿ ವ್ಯಾಪಕ ಚರ್ಚೆ ನಡೆದಿತ್ತು.

ಜಮ್ಮು ಕಾಶ್ಮೀರ ಹಾಗೂ ಮಧ್ಯ ಪ್ರದೇಶ ತ್ವರಿತವಾಗಿ ನ್ಯಾಯ ವಿತರಿಸುವ ದೇಶದ ಮುಂಚೂಣಿ ರಾಜ್ಯಗಳಾಗಿದ್ದು, ಬಿಹಾರ ಮತ್ತು ತೆಲಂಗಾಣ ಅತೀ ಹಿಂದುಳಿದವಾಗಿವೆ.

ಇನ್ನೂ ಬಿಹಾರದಲ್ಲಿ ಮೂರನೇ ಒಂದು ಭಾಗದಷ್ಟು ಪ್ರಕರಣಗಳು ಪರಿಹಾರಕ್ಕಾಗಿ ಹತ್ತು ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿವೆ. ಈ ವರ್ಷದ ಮಾರ್ಚ್​ನ ವರೆಗೆ ಪರಿಗಣಿಸುವುದಾದರೆ ಸುಮಾರು 6 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ತ್ವರಿತಗತಿ ನ್ಯಾಯಾಲಯದಲ್ಲಿ ಇನ್ನೂ ಇತ್ಯರ್ಥವಾಗದೇ ಬಾಕಿ ಉಳಿದಿದ್ದು, ಅವುಗಳಲ್ಲಿ ಹೆಚ್ಚಿನವು ಉತ್ತರ ಪ್ರದೇಶದ್ದಾಗಿವೆ.

ಈ ಹಿಂದೆ, ಲೈಂಗಿಕ ಕಿರುಕುಳ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ನಿರ್ಭಯಾ ನಿಧಿಯೊಂದಿಗೆ ದೇಶಾದ್ಯಂತ 1023 ತ್ವರಿತ ಗತಿ ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಈ ವರ್ಷದ ಆಗಸ್ಟ್‌ನಲ್ಲಿ ಘೋಷಿಸಿತ್ತು. ಆದರೆ, ದೇಶಾದ್ಯಂತ ಒಟ್ಟು 581 ತ್ವರಿತ ಗತಿ ನ್ಯಾಯಾಲಯಗಳಿದ್ದು, ಅಲ್ಲೂ ಕೂಡ ತೀವ್ರ ಸಿಬ್ಬಂದಿ ಕೊರತೆಯಿದೆ.

ABOUT THE AUTHOR

...view details