ಕರ್ನಾಟಕ

karnataka

ETV Bharat / bharat

'ದೋಷ ಪತ್ತೆಯಾದ ದಿನದಿಂದ ಉಡಾವಣೆವರೆಗೆ ವಿಜ್ಞಾನಿಗಳು ನಿದ್ದೆಯೇ ಮಾಡಿರಲಿಲ್ಲ'... ರೋಚಕ ಮಾಹಿತಿ ಬಿಚ್ಚಿಟ್ಟ ಇಸ್ರೋ ಮುಖ್ಯಸ್ಥ

ಉಡಾವಣೆ ಹಿಂಪಡೆದ ಕ್ಷಣ ನಿಜಕ್ಕೂ ಭಾವನಾತ್ಮಕವಾಗಿತ್ತು. ತಾಂತ್ರಿಕ ಹೆಜ್ಜೆ ಮತ್ತು ಭಾವನೆಯನ್ನು ಹಿಡಿದಿಡುವ ಕಾರ್ಯ ನಮ್ಮೆಲ್ಲರಿಗೂ ಸವಾಲಾಗಿತ್ತು ಎನ್ನುತ್ತಾರೆ ಕೆ.ಸಿವನ್.

ಚಂದ್ರಯಾನ 2

By

Published : Jul 29, 2019, 6:37 PM IST

ನವದೆಹಲಿ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವದ ಪ್ರಾಜೆಕ್ಟ್​ ಚಂದ್ರಯಾನ-2 ನಿರೀಕ್ಷೆಯಂತೆ ಜುಲೈ 15ರ ಮುಂಜಾನೆ ನಭಕ್ಕೆ ಜಿಗಿಯಬೇಕಿತ್ತು. ಆದರೆ ತಾಂತ್ರಿಕ ದೋಷದ ಪರಿಣಾಮ ವಿಜ್ಞಾನಿಗಳ ವರ್ಷದ ಪ್ರಯತ್ನ ಆ ದಿನ ಕೈಗೂಡಲಿಲ್ಲ.

ಎಲ್ಲ ಅಡೆತಡೆಗಳನ್ನು ಮೆಟ್ಟಿ ಒಂದೇ ವಾರದಲ್ಲಿ ಇಸ್ರೋ ವಿಜ್ಞಾನಿಗಳು ಚಂದ್ರಯಾನ-2 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದರು. ಆ ಒಂದು ವಾರದಲ್ಲಿ ಫಿನಿಕ್ಸ್​​ನಂತೆ ಇಸ್ರೋ ವಿಜ್ಞಾನಿಗಳು ಮೇಲೆದ್ದು ಬಂದಿದ್ದು ಹೇಗೆ ಅನ್ನುವ ರೋಚಕ ಸಂಗತಿಯನ್ನು ಇಸ್ರೋ ಸಂಸ್ಥೆಯ ಮುಖ್ಯಸ್ಥ ಕೆ.ಸಿವನ್ ರಿವೀಲ್ ಮಾಡಿದ್ದಾರೆ.

ಜುಲೈ 15ರ ಮುಂಜಾನೆ ಉಡಾವಣೆಗೆ 56 ನಿಮಿಷ ಮುನ್ನ ತಾಂತ್ರಿಕ ದೋಷ ಪತ್ತೆಯಾಗಿತ್ತು. ಐತಿಹಾಸಿಕ ಉಡಾವಣೆಯನ್ನು ಕಣ್ತುಂಬಿಕೊಳ್ಳಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹ ಆಗಮಿಸಿದ್ದರು. ತಾಂತ್ರಿಕ ದೋಷ ಪತ್ತೆಯಾದ ಬಳಿಕ ಉಡಾವಣೆಗೆ ರಾಷ್ಟ್ರಪತಿ ಕಚೇರಿಯಿಂದ ಯಾವುದೇ ಒತ್ತಡವಿರಲಿಲ್ಲ. ನೀವು ದೋಷವನ್ನು ಸರಿಪಡಿಸಿ ಎಂದು ರಾಷ್ಟ್ರಪತಿ ಹೇಳಿದರು ಎಂದು ಕೆ.ಸಿವನ್ ಹೇಳಿದ್ದಾರೆ.

ಇನ್ನು ಕೇವಲ ಮೂರೇ ಹಂತ ಬಾಕಿ... ಚಂದಿರನ ಸಮೀಪಕ್ಕೆ ನಮ್ಮ ಗಗನನೌಕೆ..!

ಉಡಾವಣೆ ಹಿಂಪಡೆದ ಕ್ಷಣ ನಿಜಕ್ಕೂ ಭಾವನಾತ್ಮಕವಾಗಿತ್ತು. ತಾಂತ್ರಿಕ ಹೆಜ್ಜೆ ಮತ್ತು ಭಾವನೆಯನ್ನು ಹಿಡಿದಿಡುವ ಕಾರ್ಯ ನಮ್ಮೆಲ್ಲರಿಗೂ ಸವಾಲಾಗಿತ್ತು ಎನ್ನುತ್ತಾರೆ ಕೆ.ಸಿವನ್.

ಚಂದ್ರಯಾನ 2 ರಾಕೆಟ್​

ಉಡಾವಣೆ ರದ್ದುಗೊಳಿಸಿದ ಮುಂದಿನ 24 ಗಂಟೆ ಸಂಪೂರ್ಣ ತಂಡಕ್ಕೆ ಅತಿದೊಡ್ಡ ಸವಾಲಾಗಿತ್ತು. ಅದು ಮಧ್ಯರಾತ್ರಿ 2 ಗಂಟೆ, ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ ಹಾಗೂ ಮಹೇಂದ್ರ ಗಿರಿಯ ಬಾಹ್ಯಾಕಾಶ ಕೇಂದ್ರದ ವಿಜ್ಞಾನಿಗಳು ಎಚ್ಚರವಾಗಿಯೇ ಇದ್ದರು. ಒಂದೇ ಗಂಟೆಯಲ್ಲಿ ಆ ಎಲ್ಲ ವಿಜ್ಞಾನಿಗಳು ಶ್ರೀಹರಿಕೋಟಾಗೆ ಆಗಮಿಸಿದ್ದರು. ದೋಷ ಪತ್ತೆಯಾದ ಮರುಕ್ಷಣದಿಂದ ಉಡಾವಣೆವರೆಗೂ ಪ್ರಾಜೆಕ್ಟ್​​ನಲ್ಲಿ ಭಾಗಿಯಾದ ಯಾವುದೇ ವಿಜ್ಞಾನಿಗಳು ನಿದ್ದೆಯೇ ಮಾಡಿಲ್ಲ ಎನ್ನುವ ವಿಚಾರವನ್ನು ಕೆ.ಸಿವನ್ ಹೇಳಿದ್ದಾರೆ.

ತಾಂತ್ರಿಕ ದೋಷ ಪತ್ತೆಯಾಗಿದ್ದು ಒಂದು ನಿಟ್ಟಿನಲ್ಲಿ ಉತ್ತಮ ಎನ್ನಬಹುದಾದರೂ ಇದೇ ರಾಕೆಟ್​ ಎರಡು ಬಾರಿ ಯಶಸ್ವಿ ಉಡ್ಡಯನ ಕಂಡಿತ್ತು, ಆದರೆ ಈ ಬಾರಿ ಕೊನೇ ಕ್ಷಣದಲ್ಲಿ ಇದೇ ರಾಕೆಟ್ ಕೈಕೊಟ್ಟಿತ್ತು. ಒಂದು ಸಾವಿರ ಕೋಟಿಯ ಯೋಜನೆ, ಇಡೀ ಭಾರತೀಯರ ಅಸ್ಮಿತೆ ಕಾಪಾಡುವ ದೊಡ್ಡ ಜವಾಬ್ದಾರಿಯಿಂದ ಭಯ ಹೆಚ್ಚಾಗಿತ್ತು ಎಂದು ಕೆ.ಸಿವನ್​ ಹೇಳಿದ್ದಾರೆ.

ಚಂದ್ರಯಾನ-2 ಉಡಾವಣೆಯನ್ನು ಕಣ್ತುಂಬಿಕೊಂಡ ಮಂದಿ

ತಾಂತ್ರಿಕ ದೋಷ ಪತ್ತೆಯಾದ 48 ಗಂಟೆಯಲ್ಲಿ ಸರಿಪಡಿಸಲಾಯಿತು. ಮುಂದಿನ ಎರಡು ದಿನ ಚಂದ್ರಯಾನ-2ರ ಪೂರ್ವಾಭ್ಯಾಸ ಯಶಸ್ವಿಯಾಗಿ ಮಾಡಲಾಯಿತು. ಎಲ್ಲ ಸಮರ್ಪಕವಾಗಿದೆ ಎಂದು ಖಾತ್ರಿಯಾದ ಬಳಿಕ ಜುಲೈ 22ರಂದು ಉಡಾವಣೆ ಮಾಡಲಾಗುವುದು ಎಂದು ಅಧಿಕೃತವಾಗಿ ಘೋಷಿಸಲಾಯಿತು ಎಂದು ಇಸ್ರೋ ಮುಖ್ಯಸ್ಥ ಕೆ.ಸಿವನ್​ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details