ಕರ್ನಾಟಕ

karnataka

ETV Bharat / bharat

ಹೈ ಬಿಪಿ ಇರೋ ಕೊರೊನಾ ಸೋಂಕಿತರಿಗೆ ಔಷಧಗಳಿಂದ ಅಡ್ಡ ಪರಿಣಾಮವಿಲ್ಲ, ಬಿ ಹ್ಯಾಪಿ

ಈಗ ಸಂಶೋಧನಾ ವರದಿಯೊಂದು ಹೊರಬಂದಿದ್ದು, ಯಾವುದೇ ರೀತಿಯ ಅಡ್ಡ ಪರಿಣಾಮಗಳು ಆಗುವುದಿಲ್ಲ. ಕೋವಿಡ್​-19 ಸೋಂಕಿತರು ಔಷಧ ತೆಗೆದುಕೊಳ್ಳಲು ಭಯಪಡಬೇಕಿಲ್ಲ ಎಂದು ಹೇಳಿದೆ.

By

Published : May 2, 2020, 12:49 PM IST

Updated : May 2, 2020, 1:17 PM IST

High BP
ಅಧಿಕ ರಕ್ತದೊತ್ತಡ

ನ್ಯೂಯಾರ್ಕ್​(ಅಮೆರಿಕ):ಅಧಿಕ ರಕ್ತದೊತ್ತಡಕ್ಕೆ ಬಳಸುವ ಸಾಮಾನ್ಯ ಔಷಧಿಗಳು ಕೊರೊನಾ ಸೋಂಕಿತನ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ಸಂಶೋಧನಾ ವರದಿಯೊಂದು ಹೇಳಿದೆ. ಕೋವಿಡ್​​-19ಗೆ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಆತ ತೆಗೆದುಕೊಳ್ಳುವ ಔಷಧಗಳು ರೋಗಿಯ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತವೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಕೆಲವು ತಜ್ಞರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಈಗ ಸಂಶೋಧನಾ ವರದಿಯೊಂದು ಹೊರಬಂದಿದ್ದು, ಯಾವುದೇ ರೀತಿಯ ಸೈಡ್ ಎಫೆಕ್ಟ್ಸ್‌ಆಗುವುದಿಲ್ಲ. ಕೋವಿಡ್​-19 ಸೋಂಕಿತರು ಔಷಧ ತೆಗೆದುಕೊಳ್ಳಲು ಭಯ ಪಡಬೇಕಿಲ್ಲ ಎಂದು ಹೇಳಿದೆ. ಸುಮಾರು 12,594 ರೋಗಿಗಳ ಮೇಲೆ ಈ ಪ್ರಯೋಗ ಮಾಡಿ ಯಶಸ್ಸು ಕಾಣಲಾಗಿದೆ. ಈ ಮೂಲಕ ಹೈ ಬಿಪಿಗೆ ಬಳಸುವ ಔಷಧ ಸುರಕ್ಷಿತ ಎಂದು ಸಾಬೀತುಪಡಿಸಲಾಗಿದೆ.

ಅಮೆರಿಕನ್ ಹಾರ್ಟ್ ಅಸೋಸಿಯೇಷನ್, ಅಮೇರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಮತ್ತು ಹಾರ್ಟ್ ಫೇಲ್ಯೂರ್ ಸೊಸೈಟಿ ಆಫ್ ಅಮೆರಿಕ ಜಂಟಿ ಹೇಳಿಕೆಯನ್ನು ನೀಡಿದ್ದು, ಈ ಹೇಳಿಕೆಯನ್ನು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ನ್ಯೂಯಾರ್ಕ್ ಯೂನಿವರ್ಸಿಟಿ (ಎನ್​ವೈಯು) ಗ್ರಾಸ್‌ಮನ್ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರ ನೇತೃತ್ವದಲ್ಲಿ ಈ ಸಂಶೋಧನೆ ನಡೆದಿದ್ದು, '' ಸಾಮಾನ್ಯವಾಗಿ ಬಳಕೆಯಾಗುವ ಔಷಧಿಗಳು ಹಾಗೂ ಕೊರೊನಾ ಚಿಕಿತ್ಸೆಗೆ ಬಳಕೆಯಾಗುವ ಔಷಧಗಳನ್ನು ಒಟ್ಟಿಗೆ ತೆಗೆದುಕೊಂಡಾಗಿ ಏರ್ಪಡುವ ಸಮಸ್ಯೆಗಳ ಬಗ್ಗೆ ಸಂಶೋಧನೆ ಅಗತ್ಯವಿದೆ. ಸಾಮಾನ್ಯ ಆರೋಗ್ಯ ಏರುಪೇರುಗಳಾದಾಗ ಸಾಮಾನ್ಯ ಔಷಧ ತೆಗೆದುಕೊಳ್ಳಬಹುದು'' ಎಂದು ನ್ಯೂಯಾರ್ಕ್ ಯೂನಿವರ್ಸಿಟಿ ಸಂಶೋಧಕ ಹಾಗೂ ಕಾರ್ಡಿಯೋ ವಾಸ್ಕುಲರ್ ಕ್ಲಿನಿಕಲ್​ ರಿಸರ್ಚ್​ ಸೆಂಟರ್​ನ ನಿರ್ದೇಶಕ ಹಾರ್ಮನಿ ರೆನಾಲ್ಡ್ಸ್ ಹೇಳಿದ್ದಾರೆ.

Last Updated : May 2, 2020, 1:17 PM IST

ABOUT THE AUTHOR

...view details