ಮಥುರಾ: ಭಾರತೀಯ ಜನತಾ ಪಕ್ಷದ ಹಾಲಿ ಸಂಸದೆ ಹಾಗೂ ಸಿನಿಮಾ ತಾರೆ ಹೇಮಾ ಮಾಲಿನಿ ನಿನ್ನೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಉಮೇದುವಾರಿಕೆ ಸಲ್ಲಿಕೆ ಮಾಡುವ ವೇಳೆ ಅವರು ಒಟ್ಟು 101ಕೋಟಿ ರೂ ಆಸ್ತಿ ಘೋಷಣೆ ಮಾಡಿದ್ದಾರೆ.
ಬಿಲಿಯನೇರ್ ಈ ಬಿಜೆಪಿ ಅಭ್ಯರ್ಥಿ... ಹೇಮಾ ಮಾಲಿನಿ ಘೋಷಿಸಿದ ಆಸ್ತಿ ___ ಕೋಟಿ! - ಮಥುರಾ
ಉತ್ತರಪ್ರದೇಶದ ಮಥುರಾದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹೇಮಾ ಮಾಲಿನಿ, ಕಳೆದ ಐದು ವರ್ಷಗಳಲ್ಲಿ 34.46 ಕೋಟಿ ಆಸ್ತಿ ಮೌಲ್ಯ ಹೆಚ್ಚಳ ಮಾಡಿಕೊಂಡಿದ್ದಾರಂತೆ.
ಉತ್ತರಪ್ರದೇಶದ ಮಥುರಾದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹೇಮಾ ಮಾಲಿನಿ, ಕಳೆದ ಐದು ವರ್ಷಗಳಲ್ಲಿ 34.46 ಕೋಟಿ ಆಸ್ತಿ ಮೌಲ್ಯ ಹೆಚ್ಚಳ ಮಾಡಿಕೊಂಡಿದ್ದಾರಂತೆ. ಅವರ ಬಳಿ ಇರುವ ಬಂಗಲೆ,ಆಭರಣ,ನಗದು,ಷೇರು ಸೇರಿ ಒಟ್ಟು 101 ಕೋಟಿ ಮೌಲ್ಯದ ಸಂಪತ್ತು ಹೊಂದಿದ್ದಾಗಿ ಅಫಿಡವಿಟ್ನಲ್ಲಿ ತಿಳಿಸಿದ್ದಾರೆ. 2014ರ ಸಾರ್ವತ್ರಿಕ ಚುನಾವಣೆಗೂ ಮೊದಲು ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 66ಕೋಟಿ ರೂ ಇತ್ತು.
ಕಳೆದ ಐದು ವರ್ಷಗಳಲ್ಲಿ ಪತಿ ಧರ್ಮೇಂದ್ರ ಅವರ ಆಸ್ತಿ ಮೌಲ್ಯ 12.30 ಕೋಟಿ ಹೆಚ್ಚಳವಾಗಿದೆ ಎಂದು ಹೇಮಾ ಮಾಲಿನಿ ತಿಳಿಸಿದ್ದಾರೆ.ಅವರ ಒಟ್ಟು ಆಸ್ತಿ 123.85 ಕೋಟಿ ಆಗಿದೆ. ಹೇಮಾ ಮಾಲಿನಿ ಬಳಿ ಮರ್ಸಿಡಿಸ್ ಹಾಗೂ ಟೊಯೊಟಾ ಕಾರ್ಗಳಿವೆ. ಇನ್ನು ಹೇಮಾ ಮಾಲಿನಿ 6.75 ಕೋಟಿ ಸಾಲ ಮಾಡಿದ್ದಾರೆ.