ಕರ್ನಾಟಕ

karnataka

ETV Bharat / bharat

ವಿದ್ಯುತ್​ ಕದ್ದವನಿಗೆ ದೆಹಲಿ ಕೋರ್ಟ್​ ಕೊಟ್ಟ ಶಿಕ್ಷೆ ಏನು ಗೊತ್ತೇ?

ವಿದ್ಯುತ್ ಕದ್ದ ಕಾರಣಕ್ಕೆ 50 ಗಿಡಗಳನ್ನು ನೆಡುವಂತೆ ದೆಹಲಿ ಹೈಕೋರ್ಟ್​ ಆರೋಪಿಗೆ ಸೂಚಿಸಿದ್ದು ಇದನ್ನು ಪೂರೈಸಲು ಒಂದು ತಿಂಗಳ ಗಡುವನ್ನೂ ಸಹ ಕೋರ್ಟ್​ ನೀಡಿದೆ.

By

Published : Aug 11, 2019, 1:46 PM IST

ಮಾದರಿ ಶಿಕ್ಷೆ

ನವದೆಹಲಿ:ವಿದ್ಯುತ್ ಕಳ್ಳತನ ಮಾಡಿದ ಆರೋಪದಲ್ಲಿ ವ್ಯಕ್ತಿಯೋರ್ವನಿಗೆ ದೆಹಲಿ ಹೈಕೋರ್ಟ್ ವಿಭಿನ್ನ ಶಿಕ್ಷೆ ನೀಡಿದೆ.

ವಿದ್ಯುತ್ ಕದ್ದ ಕಾರಣಕ್ಕೆ 50 ಗಿಡಗಳನ್ನು ನೆಡುವಂತೆ ದೆಹಲಿ ಹೈಕೋರ್ಟ್​ ಆರೋಪಿಗೆ ಸೂಚಿಸಿದ್ದು ಇದನ್ನು ಪೂರೈಸಲು ಒಂದು ತಿಂಗಳ ಗಡುವನ್ನೂ ಸಹ ಕೋರ್ಟ್​ ನೀಡಿದೆ.

ಒಂದು ತಿಂಗಳ ಒಳಗಾಗಿ ಐವತ್ತು ಗಿಡಗಳನ್ನು ನೆಟ್ಟು ಅರಣ್ಯ ಉಪ ಸಂರಕ್ಷಣಾಧಿಕಾರಿಗೆ ಮಾಹಿತಿ ನೀಡಬೇಕು ಎಂದು ಕೋರ್ಟ್​ ಸೂಚಿಸಿದೆ. ವಂದೇ ಮಾತರಂ ಮಾರ್ಗದಲ್ಲಿರುವ ಕೇಂದ್ರ ಮೀಸಲು ಅರಣ್ಯ ಪ್ರದೇಶದಲ್ಲಿ ಆರೋಪಿಗೆ ಗಿಡ ನೆಡುವಂತೆ ಹೇಳಲಾಗಿದೆ.

ಆರೋಪಿ ವಿವಿಧ ಬಗೆಯ ಗಿಡಗಳನ್ನು ನೆಡಬೇಕಿದ್ದು ಯಾವೆಲ್ಲಾ ಗಿಡಗಳು ಉತ್ತಮ ಎಂದು ಆದೇಶ ಪ್ರತಿಯಲ್ಲಿ ಕೋರ್ಟ್​ ಉಲ್ಲೇಖಿಸಿದೆ. ಹಲಸು, ಪಾಲಾಶ, ಟೀಕ್​ವುಡ್ ಸೇರಿದಂತೆ ಕೆಲವು ಗಿಡಗಳನ್ನು ಹೆಸರಿಸಲಾಗಿದೆ.

ABOUT THE AUTHOR

...view details