ಮೈನ್ಪುರಿ(ಉತ್ತರಪ್ರದೇಶ):ಮುಲಾಯಂ ಸಿಂಗ್ ಯಾದವ್ ನಾಮಪತ್ರ ಸಲ್ಲಿಕೆಗೆ ಹೊರಟಿದ್ದ ರಸ್ತೆಯಲ್ಲೆ ಅಂದರೆ. ಮೈನ್ಪುರಿ ದನ್ನಾಹಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷ್ಕ್ರೀಯಗೊಂಡಿದ್ದ ಗ್ರೆನೇಡ್ ರಸ್ತೆ ಮೇಲೆ ಪತ್ತೆಯಾಗಿದೆ.
ಮುಲಾಯಂ ನಾಮಪತ್ರ ಸಲ್ಲಿಕೆಗೆ ಮುನ್ನ: ಹೆದ್ದಾರಿಯಲ್ಲಿ ಗ್ರೆನೇಡ್ ಪತ್ತೆ, ಆತಂಕ
ಮುಲಾಯಂ ನಾಮಪತ್ರ ಸಲ್ಲಿಕೆ ಸಂದರ್ಭ. ನಿಷ್ಕ್ರೀಯಗೊಂಡಿದ್ದ ಗ್ರೆನೇಡ್ ರಸ್ತೆ ಮೇಲೆ ಪತ್ತೆ. ತನಿಖೆ ಮುಂದುವರಿಕೆ. ಮಕ್ಕಳು ರಸ್ತೆಯಲ್ಲಿ ಬಿಟ್ಟು ಹೋಗಿರುವ ಶಂಕೆ
ನಿಷ್ಕ್ರೀಯಗೊಂಡಿದ್ದ ಗ್ರೆನೇಡ್
ಇದು ಅಲ್ಲಿನ ಜನರಲ್ಲಿ ಆತಂಕ ತಂದಿದೆ. ಅದೂ ಮಾಜಿ ಸಿಎಂ ಮುಲಾಯಂಸಿಂಗ್ ಯಾದವ್ ಸಂಚರಿಸುತ್ತಿದ್ದ ಹೆದ್ದಾರಿಯಲ್ಲಿ ಹಾಗಾಗಿ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.ಪ್ರಾಥಮಿಕ ತನಿಖಾ ವರದಿಯಂತೆ ಮಕ್ಕಳು ಆಡಲು ತಂದು ರಸ್ತೆಯಲ್ಲಿ ಎಸೆದು ಹೋಗಿದ್ದಾರೆ ಎನ್ನಲಾಗಿದೆ.
ಮೈನಿಪುರಿ ಎಸ್ಪಿ ಅಜಯ್ ಶಂಕರ್ ಈ ವಿಷಯ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.