ನವದೆಹಲಿ:ಬಂಗಾರದ ಬೆಲೆಯಲ್ಲಿ ಸತತ ಎರಡನೇ ದಿನವೂ ದಾಖಲೆ ಮಟ್ಟದ ಕುಸಿತ ಕಂಡು ಬಂದಿದ್ದು, ಈ ಮೂಲಕ 10 ಗ್ರಾಂ ಚಿನ್ನದ ಬೆಲೆ ಇದೀಗ 51,915 ರೂ ಆಗಿದೆ. ಹೀಗಾಗಿ ಆಭರಣ ಪ್ರೀಯರ ಮುಖದಲ್ಲಿ ಇದೀಗ ನಗೆ ಕಂಡು ಬಂದಿದೆ.
10 ಗ್ರಾಂ ಚಿನ್ನದ ಬೆಲೆಯಲ್ಲಿ 1,492 ರೂ. ಕಡಿಮೆಯಾಗಿದ್ದರಿಂದ ಸದ್ಯ ಬಂಗಾರದ ಬೆಲೆಯಲ್ಲಿ ಮತ್ತಷ್ಟು ಇಳಿಕೆ ಕಂಡು ಬಂದಿದೆ. ಇದರ ಜತೆಗೆ ಬೆಳ್ಳಿ ಬೆಲೆಯಲ್ಲೂ ದಾಖಲೆ ಮಟ್ಟದ ಇಳಿಕೆ ಕಂಡು ಬಂದಿದೆ. ಪ್ರತಿ ಕೆ.ಜಿ ಬೆಳ್ಳಿಯ ಬೆಲೆ 1,476ರಷ್ಟು ಕಡಿಮೆಯಾಗಿದೆ. ನಿನ್ನೆ ಕೂಡ ಪ್ರತಿ ಕೆ.ಜಿ ಬೆಳ್ಳಿಯ ಬೆಲೆಯಲ್ಲಿ 3,112 ರೂ. ಕಡಿಮೆಯಾಗಿ 69,450 ರೂ ಆಗಿತು.
ಸತತ ಏರಿಕೆ ಬಳಿಕ ದಾಖಲೆ ಮಟ್ಟದಲ್ಲಿ ಕುಸಿತ ಕಂಡ ಚಿನ್ನ-ಬೆಳ್ಳಿ ಬೆಲೆ!
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ - ಬೆಳ್ಳಿ ಮೇಲಿನ ದರ ಕಡಿಮೆಯಾಗಿರುವುದು ಹಾಗೂ ಬೇಡಿಕೆಯಲ್ಲಿ ಕುಸಿತ ಕಂಡು ಬಂದಿರುವ ಕಾರಣ ದೇಶಿಯ ಮಾರುಕಟ್ಟೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಇಳಿಕೆಯಾಗಿದೆ. ನಿನ್ನೆ ಕೂಡ ಬಂಗಾರದ ಬೆಲೆಯಲ್ಲಿ 10 ಗ್ರಾಂಗೆ 640 ರೂ ಕಡಿಮೆಯಾಗಿತ್ತು. ಹೀಗಾಗಿ ಕಳೆದ ಎರಡು ದಿನಗಳಿಂದ ದಾಖಲೆ ಮಟ್ಟದಲ್ಲಿ ಹಳದಿ ಲೋಹದ ಬೆಲೆ ಕುಸಿತಗೊಳ್ಳುತ್ತಿದೆ.
ಕಳೆದ ಕೆಲ ದಿನಗಳ ಹಿಂದೆ ದಾಖಲೆಯ ಮಟ್ಟದಲ್ಲಿ ಬಂಗಾರದ ಬೆಲೆ ಏರಿಕೆಯಾಗಿದ್ದು, 10 ಗ್ರಾಂ ಚಿನ್ನಕ್ಕೆ ಬರೋಬ್ಬರಿ 56,191 ರೂ ಆಗಿತ್ತು.