ನವದೆಹಲಿ:ಇದೇ ಮೊದಲ ಬಾರಿಗೆ ಭಾರತದಲ್ಲಿ ಬಂಗಾರದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.
ಒಂದೇ ದಿನ 502 ರೂ ಏರಿಕೆ: ಭಾರತದಲ್ಲಿ 51 ಸಾವಿರ ರೂ. ಗಡಿ ದಾಟಿದ ಚಿನ್ನದ ಬೆಲೆ - ಚಿನ್ನಿವಾರ ಪೇಟೆ
ಭಾರತೀಯ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ಪ್ರತಿದಿನ ಏರಿಕೆಯಾಗುತ್ತಿದೆ. ಇದೀಗ 10 ಗ್ರಾಂಗೆ 51 ಸಾವಿರ ಗಡಿ ದಾಟಿದ್ದು ಹಳದಿ ಲೋಹ ಮತ್ತಷ್ಟು ದುಬಾರಿಯಾಗಿದೆ.
ಹೌದು, ದಿನ ಕಳೆದಂತೆ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಇಂದು ಒಂದೇ ದಿನ ಬರೋಬ್ಬರಿ 502 ರೂಪಾಯಿ ಏರಿಕೆಯಾಗಿರುವ ಕಾರಣ ಇದೀಗ ಬಂಗಾರದ ಬೆಲೆ 51 ಸಾವಿರ ರೂ ಗಡಿ ದಾಟಿದೆ. ಸದ್ಯ 24 ಕ್ಯಾರೆಟ್ ಗುಣಮಟ್ಟದ ಬಂಗಾರದ ಬೆಲೆ ದೆಹಲಿಯಲ್ಲಿ 51 ಸಾವಿರ ರೂ ಇದೆ. ಇಂದೇ ಬರೋಬ್ಬರಿ 502 ರೂಪಾಯಿ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಹೆಚ್ಚಾಗಿರುವ ಕಾರಣ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.
ಬೆಳ್ಳಿ ಬೆಲೆಯಲ್ಲೂ ಏರಿಕೆಯಾಗಿದ್ದು, ಪ್ರತಿ ಕೆ.ಜಿ ಬೆಳ್ಳಿಗೆ ಸದ್ಯ 62,829 ರೂ ಆಗಿದೆ. ಅಮೆರಿಕ-ಚೀನಾ ನಡುವಿನ ಬಿಕ್ಕಟ್ಟಿನಿಂದಾಗಿ ಚಿನ್ನದ ಬೆಲೆಯಲ್ಲಿ ಇಷ್ಟೊಂದು ಏರಿಕೆ ಕಂಡು ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.