ನವದೆಹಲಿ :ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿಗೆ ಚತುಷ್ಪಥ ರಸ್ತೆ ಕಾಮಗಾರಿ ನಿರ್ಮಾಣ 5ನೇ ಹಂತ ತಲುಪಿದೆ. ಈ ಕಾಮಗಾರಿ ನಿಧಾನವಾಗಿ ಸಾಗಿದೆ ಎಂದು ಸಂಸತ್ ಅಧಿವೇಶನದಲ್ಲಿ ಸಂಸದ ಜಿ ಎಂ ಸಿದ್ದೇಶ್ವರ್ ಆರೋಪಿಸಿದ್ದಾರೆ.
ಚತುಷ್ಪಥ ರಸ್ತೆ ಕಾಮಗಾರಿಯಲ್ಲಿ ಹೆದ್ದಾರಿ ಪ್ರಾಧಿಕಾರ ಹಲವು ತಪ್ಪೆಸಗಿದೆ : ಜಿ ಎಂ ಸಿದ್ದೇಶ್ವರ್
ಈ ಕುರಿತಂತೆ ನಾನು ಹಲವು ಬಾರಿ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವರಿಗೆ ಮನವಿ ಮಾಡಿದ್ದೇನೆ. ಆದರೆ, ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದಿದ್ದಾರೆ..
ಈ ಮಾರ್ಗದ ರಸ್ತೆ ಕಾಮಗಾರಿಯ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹತ್ತು ಹಲವು ತಪ್ಪುಗಳನ್ನು ಎಸಗಿದೆ. ಕಾಮಗಾರಿ ಅಡಿ ಲಕ್ಕಮುತ್ತನಹಳ್ಳಿ ಮಾರ್ಗದ ಮೇಲ್ಸೇತುವೆ (ಆರ್ಓಬಿ) ಹಾಗೂ ಹೆಬ್ಬಾಳ ಆಳವರ್ತಿ, ಮಾಲಶೆಟ್ಟಿಹಳ್ಳಿ, ಹೆಚ್ ಕಲ್ಪನಳ್ಳಿ ಹಾಗೂ ದಾವಣಗೆರೆ ಸಿಟಿ ಎಂಟ್ರಿಯಲ್ಲಿ ಅಂಡರ್ ಬ್ರಿಡ್ಜ್ ಕಾಮಗಾರಿಯನ್ನು ಗಣನೆಗೆ ತೆಗೆದುಕೊಂಡಿಲ್ಲ. ಈ ಕುರಿತಂತೆ ನಾನು ಹಲವು ಬಾರಿ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವರಿಗೆ ಮನವಿ ಮಾಡಿದ್ದೇನೆ. ಆದರೆ, ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದಿದ್ದಾರೆ.
ಅಲ್ಲದೆ ಈ ಮೂಲಕ ನಾನು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ದಯವಿಟ್ಟು ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಂಡು ಆದಷ್ಟು ಶೀಘ್ರ ಮುಕ್ತಾಯಗೊಳಿಸಬೇಕಿದೆ. ಕಾಮಗಾರಿ ಆರಂಭಿಸುವಂತೆ ಆ ಭಾಗದ ಜನತೆ ನಿರಂತರ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಹಿನ್ನೆಲೆ ಹೆದ್ದಾರಿ ಪ್ರಾಧಿಕಾರಕ್ಕೆ ಕಾಮಗಾರಿ ಕೈಗೆತ್ತಿಕೊಳ್ಳಲು ಮನವಿ ಮಾಡುತ್ತೇನೆ ಎಂದಿದ್ದಾರೆ.