ವಾಷಿಂಗ್ಟನ್:ಹೆತ್ತ ತಾಯಿ ಮತ್ತು ಪತ್ನಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಭಾರತದ ಮಾಜಿ ಏಷ್ಯನ್ ಚಾಂಪಿಯನ್ಶಿಪ್ನ ಕಂಚಿನ ಪದಕ ವಿಜೇತ ಇಕ್ಬಾಲ್ ಸಿಂಗ್ರನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.
ಪೆನ್ಸಿಲ್ವೇನಿಯಾದ ಡೆಲವೇರ್ ಕೌಂಟಿ ನಿವಾಸಿ ಸಿಂಗ್ (62) ಭಾನುವಾರ ಪೊಲೀಸರ ಮುಂದೆ ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಫಿಲಡೆಲ್ಫಿಯಾ ತನಿಖಾಧಿಕಾರಿಗಳು ತಿಳಿಸಿದ್ದಾರೆ.
ನ್ಯೂಟೌನ್ ಟೌನ್ಶಿಪ್ನಲ್ಲಿ ವಾಸವಿರುವ ಮನೆಯಲ್ಲಿ ಸಿಂಗ್ ತನ್ನ ತಾಯಿ ಮತ್ತು ಹೆಂಡ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ತನ್ನ ಮಗನಿಗೆ ಮತ್ತು ಮಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಕೂಡಲೇ ಮಕ್ಕಳು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.