ಕರ್ನಾಟಕ

karnataka

ETV Bharat / bharat

ದೇವಾಲಯದ ಪ್ರಚಾರಕ್ಕೆ ಹಾವಿನೊಂದಿಗೆ ಆಟ.. ದೇವ ಮಹಿಳೆ ಕಥೆ ಏನಾಯ್ತು ಗೊತ್ತಾ?

ಜೀವಂತ ಹಾವನ್ನ ಪೂಜಿಸಿ ಕೊರಳಿಗೆ ಸುತ್ತಿಕೊಂಡು ಪೋಸ್​ ನೀಡಿದ್ದ ಸ್ವಯಂ ಘೋಷಿತ ದೇವ ಮಹಿಳೆಯನ್ನ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

By

Published : Dec 22, 2019, 8:00 PM IST

ಜೀವಂತ ಹಾವನ್ನ ಪೂಜಿಸಿದ ದೇವ ಮಹಿಳೆ ಬಂಧನ, Forest Department arrest God Woman kamala
ಜೀವಂತ ಹಾವನ್ನ ಪೂಜಿಸಿದ ದೇವ ಮಹಿಳೆ ಬಂಧನ

ಕಾಂಚಿಪುರಂ(ತಮಿಳುನಾಡು):2 ವರ್ಷದ ಹಿಂದೆ ಹಾವನ್ನ ಕೊರಳಿಗೆ ಹಾಕಿಕೊಂಡು ಪವಾಡ ಎಂಬುವರೀತಿ ಬಿಂಬಿಸಿದ್ದ ದೇವ ಮಹಿಳೆಯನ್ನ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಜೀವಂತ ಹಾವನ್ನ ಪೂಜಿಸಿದ ದೇವ ಮಹಿಳೆ ಬಂಧನ

ಕಾಂಚೀಪುರಂ ಜಿಲ್ಲೆಯ ವಲಾಜಾಬಾದ್‌ನಲ್ಲಿ ಈ ಘಟನೆ ಸಂಭವಿಸಿದ್ದು, ಉತ್ತರ ಭದ್ರಕಾಳಿ ಅಮ್ಮನ್ ದೇವಾಲಯ ನಿರ್ಮಾಣ ಸಮಯದಲ್ಲಿ 2018 ಫೆಬ್ರವರಿ 2 ರಂದು ದೇವ ಮಹಿಳೆ ಕಮಲಾ ಹಾವುಗಳನ್ನ ಪೂಜಿಸಿ ಕೊರಳಿಗೆ ಸುತ್ತಿಕೊಂಡು ದೇವರ ಮಹಿಮೆ ಎಂಬ ರೀತಿಯಲ್ಲಿ ಬಿಂಬಿಸುವ ಪ್ರಯತ್ನ ಮಾಡಿದ್ದರು.

ಕಮಲಾ ಹಾವನ್ನ ಕೊರಳಿಗೆ ಸುತ್ತಿಕೊಂಡಿರುವ ವಿಡೀಯೋ ಇತ್ತೀಚೆಗೆ ಜಾಲತಾಣದಲ್ಲಿ ಫುಲ್ ವೈರಲ್​ ಆಗಿತ್ತು. ಇದನ್ನ ಗಮನಿಸಿದ ಕಾಂಚಿಪುರಂ ಜಿಲ್ಲಾ ಅರಣ್ಯ ಅಧಿಕಾರಿಗಳು ಆಕೆಯನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಹೊಸದಾಗಿ ನಿರ್ಮಿಸಿದ್ದ ದೇವಾಲಯದ ಪ್ರಚಾರಕ್ಕಾಗಿ ಹಾವುಗಳನ್ನ ಬಾಡಿಗೆಗೆ ತೆಗೆದುಕೊಂಡು ಬಂದು ಪೂಜೆ ಮಾಡಿ, ಈ ರೀತಿ ಮಾಡಲಾಗಿತ್ತು ಎಂದು ದೇವ ಮಹಿಳೆ ಕಮಲಾ ವಿಚಾರಣೆ ವೇಳೆ ತಿಳಿಸಿದ್ದಾಳೆ. ಜಿಲ್ಲಾ ಅರಣ್ಯಾಧಿಕಾರಿಗಳ ಆದೇಶದ ಮೇರೆಗೆ ಆಕೆಯನ್ನ ಬಂಧಿಸಲಾಗಿದೆ. ಘಟನೆ ನಡೆದು ವರ್ಷಗಳೆ ಕಳೆದಿದ್ದು, ಈಗ ದೇವ ಮಹಿಳೆಯನ್ನ ಬಂಧಿಸಿರುವುದಕ್ಕೆ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details