ಕರ್ನಾಟಕ

karnataka

ETV Bharat / bharat

ಎಚ್ಚೆತ್ತುಕೊಂಡ ಮೊರಾದಾಬಾದ್ ಜನತೆ... ಕಲ್ಲು ತೂರಿದವರಿಂದಲೇ ಹೂಮಳೆಯ ಸ್ವಾಗತ

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಕೋವಿಡ್​-19 ರೋಗಿಯನ್ನು ಚಿಕಿತ್ಸೆಗೆಂದು ಕರೆದೊಯ್ಯಲು ಬಂದಿದ್ದ ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರ ತಂಡವಿದ್ದ ಆಂಬ್ಯುಲೆನ್ಸ್‌ಗೆ ಕಲ್ಲು ತೂರಿದ್ದ ಮೊರಾದಾಬಾದ್‌ ಜನತೆ ಈಗ ಅದೇ ತಂಡವನ್ನು ಹೂಮಳೆ ಸುರಿಸಿ ಸ್ವಾಗತಿಸಿದ್ದಾರೆ.

By

Published : Apr 19, 2020, 10:33 AM IST

Flower petals being showered to welcome medical team in Moradabad
ಕಲ್ಲು ತೂರಿದವರಿಂದಲೇ ಪುಷ್ಪ ಸ್ವಾಗತ: ಎಚ್ಚತ್ತುಕೊಂಡಂತಿದೆ ಮೊರಾದಾಬಾದ್ ಜನತೆ

ಮೊರಾದಾಬಾದ್(ಉತ್ತರ ಪ್ರದೇಶ): ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರ ತಂಡವಿದ್ದ ಆಂಬ್ಯುಲೆನ್ಸ್‌ ಮೇಲೆ ಕಲ್ಲು ತೂರಿದ್ದ ಮೊರಾದಾಬಾದ್‌ ಜನತೆ ಈಗ ಅದೇ ತಂಡಕ್ಕೆ ಹೂಮಳೆಗರೆದು ಸ್ವಾಗತಿಸಿದ್ದಾರೆ.

ಏಪ್ರಿಲ್ 15 ರಂದು ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಕೋವಿಡ್​-19 ರೋಗಿಯನ್ನು ಚಿಕಿತ್ಸೆಗೆಂದು ಕರೆದೊಯ್ಯಲು ಬಂದಿದ್ದ ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರ ತಂಡದ ಮೇಲೆ ಕಲ್ಲು ತೂರಿ ಹಲ್ಲೆ ನಡೆಸಲಾಗಿತ್ತು. ಅದರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದರು.

ಘಟನೆಯನ್ನು ತೀವ್ರವಾಗಿ ಖಂಡಿಸಿದ್ದ ಉತ್ತರ ಪ್ರದೇಶ ಸರ್ಕಾರವು ಈ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿತ್ತು. ಅದೇ ನಿಟ್ಟಿನಲ್ಲಿ 17 ಮಂದಿ ಹಲ್ಲೆಕೋರರನ್ನು ಬಂಧಿಸಲಾಗಿತ್ತು. ಆದ್ರೆ ಈಗ ಪರಿಸ್ಥಿತಿ ಬದಲಾಗಿರುವುದು ಒಳ್ಳೆಯ ಬೆಳವಣಿಗೆ.

ABOUT THE AUTHOR

...view details