ಆಂಧ್ರ ಪ್ರದೇಶ: ಭೀಕರ ರಸ್ತೆ ಅಪಘಾತದಲ್ಲಿ ಒಂದು ಪುಟ್ಟ ಮಗು ಸೇರಿ ಒಂದೇ ಕುಟುಂಬದ ಐದು ಜನರು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕೊಠಪಲ್ಲಿ ಸೇತುವೆ ಬಳಿ ನಡೆದಿದೆ.
ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಐವರು ಬಲಿ - AP crime latest news'
ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಡಿಶಾ ಮೂಲದ ಒಂದೇ ಕುಟುಂಬದ ಐದು ಜನರು ಮೃತಪಟ್ಟಿದ್ದಾರೆ.
ಆಂಧ್ರದಲ್ಲಿ ಭೀಕರ ರಸ್ತೆ ಅಪಘಾತ
ಸಿಂಹಾಸ್ರಿ ಅಪ್ಪಣ್ಣ ದೇವಾಲಯಕ್ಕೆ ಭೇಟಿ ನೀಡಿ ಒಡಿಶಾದ ಬ್ರಹ್ಮಪುತ್ರಕ್ಕೆ ತೆರಳುತ್ತಿರುವ ವೇಳೆ ಕೊಠಪಲ್ಲಿ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಕಾಲುವೆಗೆ ಉರುಳಿ ಬಿದ್ದಿದೆ. ಕಾರಿನ ಬಾಗಿಲು ಲಾಕ್ ಆಗಿದ್ದರಿಂದ ಘಟನೆಯಿಂದ ಪಾರಾಗಲು ಯಾರೊಬ್ಬರಿಗೂ ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಮೃತರು ಒಡಿಶಾ ರಾಜ್ಯದ ಭುವನೇಶ್ವರದವರು ಎಂದು ತಿಳಿದು ಬಂದಿದೆ.