ಆಗ್ರಾ(ಉತ್ತರ ಪ್ರದೇಶ):ಫತೇಹಾಬಾದ್ನ ತಹಸೀಲ್ ಗ್ರಾಮದಲ್ಲಿ ವೈರಲ್ ಜ್ವರ ಸದ್ಯ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಇಲ್ಲಿ ಹಲವು ಜೀವಗಳನ್ನು ವೈರಲ್ ಫೀವರ್ ಬಲಿ ಪಡೆದಿದೆ.
ಮೂರು ದಿನದಲ್ಲಿ ಐದು ಸಾವು... ಮಹಾಮಾರಿ ವೈರಲ್ ಫೀವರ್ಗೆ ಗ್ರಾಮಸ್ಥರು ತತ್ತರ
ಕಳೆದ ಮೂರು ದಿನಗಳಲ್ಲಿ ಐದು ಮಂದಿ ವೈರಲ್ ಫೀವರ್ನಿಂದ ಸಾವನ್ನಪ್ಪಿದ್ದಾರೆ. ಸದ್ಯ 20ಕ್ಕೂ ಹೆಚ್ಚು ಮಂದಿ ಜ್ವರದಿಂದ ಬಳಲುತ್ತಿದ್ದಾರೆ. ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿ ಈ ಮಹಾಮಾರಿ ಜ್ವರ ಜನರನ್ನು ಕಂಗಾಲಾಗಿಸಿದೆ.
ವೈರಲ್ ಫಿವರ್
ಕಳೆದ ಮೂರು ದಿನಗಳಲ್ಲಿ ಐದು ಮಂದಿ ಜ್ವರದಿಂದ ಸಾವನ್ನಪ್ಪಿದ್ದಾರೆ. ಸದ್ಯ ಇಪ್ಪತ್ತಕ್ಕೂ ಅಧಿಕ ಮಂದಿ ಜ್ವರದಿಂದ ಬಳಲುತ್ತಿದ್ದಾರೆ.
ಪರಿಸ್ಥಿತಿ ಗಂಭೀರವಾಗಿರುವ ಪರಿಣಾಮ ಮಂಗಳವಾರ ವೈದ್ಯರ ತಂಡ ಗ್ರಾಮಕ್ಕೆ ದೌಡಾಯಿಸಿದ್ದು, ಸ್ಥಳದಲ್ಲೇ ಮೊಕ್ಕಾಂ ಹೂಡಿದೆ.