ಕರ್ನಾಟಕ

karnataka

ETV Bharat / bharat

ಜಯಪ್ರದಾ ಕುರಿತು ಕೀಳುಮಟ್ಟದ ಪದ ಬಳಕೆ ಆರೋಪ: ಅಜಂ ಖಾನ್​ ವಿರುದ್ಧ ಎಫ್​ಐಆರ್​​

ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾದ ಅಜಂ ಖಾನ್​. ಜಯಪ್ರದಾ ಕುರಿತು ನೀಡಿರುವ ಹೇಳಿಕೆ ಸಂಬಂಧ ಅಜಂ ಖಾನ್​ ವಿರುದ್ಧ ಎಫ್​ಐಆರ್.

By

Published : Apr 15, 2019, 9:58 AM IST

ಜಯಪ್ರದಾ ಕುರಿತು ಕೀಳುಮಟ್ಟದ ಪದ ಬಳಕೆ ಆರೋಪ: ಅಜಂ ಖಾನ್​ ವಿರುದ್ಧ ಎಫ್​ಐಆರ್​​

ರಾಂಪುರ: ವಿವಾದಿತ ಮಾತುಗಳ ಮೂಲಕ ಸದಾ ಸುದ್ದಿಯಲ್ಲಿರುವ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್‌, ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ. ಜಯಪ್ರದಾ ಕುರಿತು ನೀಡಿರುವ ಹೇಳಿಕೆ ಸಂಬಂಧ ಅಜಂ ಖಾನ್​ ವಿರುದ್ಧ ಇದೀಗ ಎಫ್​ಐಆರ್​ ಕೂಡಾ ದಾಖಲಾಗಿದೆ.

ರಾಂಪುರದಲ್ಲಿ ತಮ್ಮ ಪ್ರತಿಸ್ಪರ್ಧಿ ಜಯಪ್ರದಾ ಬಗ್ಗೆ ಮಾತನಾಡುವ ವೇಳೆ ಅಜಂ ಖಾನ್​ ಬಳಸಿರುವ ಕೀಳುಮಟ್ಟದ ಪದವೊಂದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದಲೇ ವಜಾಮಾಡಬೇಕೆಂಬ ಒತ್ತಾಯ ಕೂಡಾ ಕೇಳಿಬಂದಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆಜಂ ಖಾನ್‌, 17 ವರ್ಷಗಳ ಹಿಂದೆ ನಾನು ಜಯಪ್ರದಾರನ್ನು ಈ ಕ್ಷೇತ್ರಕ್ಕೆ ಕರೆತಂದಿದ್ದೆ. ಇಷ್ಟು ವರ್ಷ ಯಾರಿಗೂ ಆಕೆಯನ್ನು ಮುಟ್ಟಲು ಬಿಟ್ಟಿರಲಿಲ್ಲ. ಆದರೆ 17 ದಿನಗಳಲ್ಲೇ ಆಕೆ ಖಾಕಿ ಒಳವಸ್ತ್ರ ತೊಟ್ಟಿದ್ದು ಗೊತ್ತಾಯ್ತು ಎಂದಿದ್ದಾರೆ.

ಈ ಮೂಲಕ ಜಯಾಪ್ರದಾ ಬಿಜೆಪಿ ಸೇರ್ಪಡೆಯನ್ನು ಅಜಂ ಖಾನ್​ ವ್ಯಂಗ್ಯವಾಡಿದ್ದಾರೆ. ಅವರ ಈ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಈ ಹೇಳಿಕೆ ಸಂಬಂಧ ಅಜಂ ಖಾನ್​ ವಿರುದ್ಧ ಎಫ್​ಐಆರ್​ ಕೂಡಾ ದಾಖಲಾಗಿದೆ.

ABOUT THE AUTHOR

...view details