ಶ್ರೀನಗರ:ಜಮ್ಮು-ಕಾಶ್ಮೀರದಲ್ಲಿ ಬದ್ಧವೈರಿ ಹಾಗೂ ಶತ್ರುಪಕ್ಷಗಳಾಗಿದ್ದ ಮೆಹಬೂಬಾ ಮುಫ್ತಿ(ಪಿಡಿಪಿ) ಹಾಗೂ ಫಾರೂಕ್ ಅಬ್ದುಲ್ಲಾ( ಎನ್ಸಿಪಿ) ಇದೀಗ ಮೈತ್ರಿಕೂಟ ಘೋಷಣೆ ಮಾಡಿವೆ. ಕಣಿವೆ ನಾಡಿನಲ್ಲಿ ಆರ್ಟಿಕಲ್ 370 ವಿಧಿ ಪುನಃಸ್ಥಾಪನೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ಹೇಳಿವೆ.
ಫಾರೂಕ್ ಅಬ್ದುಲ್ಲಾ ನಿವಾಸದಲ್ಲಿ ಇಂದು ಸರ್ವ ಪಕ್ಷ ಸಭೆ ನಡೆಸಲಾಯಿತು. ಈ ವೇಳೆ ಫಿಪಲ್ಸ್ ಡೆಮಾಕ್ರಟಿಕ್ ಪಕ್ಷದ ಮೆಹಬೂಬಾ ಮುಫ್ತಿ, ನ್ಯಾಷನಲ್ ಕಾನ್ಫರೆನ್ಸ್ನ ಫಾರೂಕ್ ಅಬ್ದುಲ್ಲಾ ಹಾಗೂ ಒಮರ್ ಅಬ್ದುಲ್ಲಾ ಭಾಗಿಯಾಗಿದ್ದರು. ಮೈತ್ರಿಗೆ ಗುಪ್ಕರ್ ಡಿಕ್ಲೇರೇಷನ್(ನಾಗರಿಕ) ಎಂದು ಹೆಸರಿಡಲಾಗಿದೆ.