ಕರ್ನಾಟಕ

karnataka

ETV Bharat / bharat

ನೂತನ ಗೇಮಿಂಗ್ ಅಪ್ಲಿಕೇಶನ್ ಅನ್ನು ಉಚಿತವಾಗಿ ಬಿಡುಗಡೆ ಮಾಡುತ್ತಿದೆ ಫೇಸ್‌ಬುಕ್

ಫೇಸ್​ಬುಕ್​ ತನ್ನದೇ ಆದ ಗೇಮಿಂಗ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ಸಿದ್ಧವಾಗಿದ್ದು, ಇದು ಶತಕೋಟಿ ಬಳಕೆದಾರರಿಗೆ ತಮ್ಮ ಸ್ಮಾರ್ಟ್ಫೋನ್​ ಗಳಿಂದ ಲೈವ್ ಗೇಮ್​ ವೀಕ್ಷಿಸಲು ಮತ್ತು ಸ್ಟ್ರೀಮ್ ಮಾಡಲು ಅವಕಾಶ ನೀಡಲಿದೆ.

By

Published : Apr 20, 2020, 3:08 PM IST

Facebook launching a dedicated Gaming app for free
ನೂತನ ಗೇಮಿಂಗ್ ಅಪ್ಲಿಕೇಶನ್ ಅನ್ನು ಉಚಿತವಾಗಿ ಬಿಡುಗಡೆ ಮಾಡುತ್ತಿದೆ ಫೇಸ್‌ಬುಕ್

ಫೇಸ್ಬುಕ್ ತನ್ನದೇ ಆದ ಗೇಮಿಂಗ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ಸಿದ್ಧವಾಗಿದ್ದು, ಇದು ಶತಕೋಟಿ ಬಳಕೆದಾರರಿಗೆ ತಮ್ಮ ಸ್ಮಾರ್ಟ್​ ಫೋನ್​​ ಗಳಿಂದ ಲೈವ್ ಗೇಮ್​ ವೀಕ್ಷಿಸಲು ಮತ್ತು ಸ್ಟ್ರೀಮ್ ಮಾಡಲು ಅವಕಾಶ ನೀಡಲಿದೆ.

ಫೇಸ್ಬುಕ್ ಗೇಮಿಂಗ್ ಅಪ್ಲಿಕೇಶನ್ ಆರಂಭದಲ್ಲಿ ಆಂಡ್ರಾಯ್ಡ್ ಸಾಧನಗಳಲ್ಲಿ ಲಭ್ಯವಿರುತ್ತದೆ. ಇದು ಬಳಕೆದಾರರಿಗೆ ಕೆಲವೇ ಬಟನ್​ಗಳನ್ನು ಒತ್ತುವ ಮೂಲಕ ಆಟವಾಡುವ ಅವಕಾಶ ನೀಡುತ್ತದೆ.

"ಸಾಮಾನ್ಯವಾಗಿ ಗೇಮಿಂಗ್‌ನಲ್ಲಿ ಹೂಡಿಕೆ ಮಾಡುವುದು ನಮಗೆ ಆದ್ಯತೆಯಾಗಿದೆ. ಏಕೆಂದರೆ, ಗೇಮಿಂಗ್​ ಕೇವಲ ನಿಷ್ಕ್ರಿಯ ಬಳಕೆಯ ಒಂದು ರೂಪವಲ್ಲ. ಆದರೆ, ಸಂವಾದಾತ್ಮಕ ಮತ್ತು ಜನರನ್ನು ಒಟ್ಟಿಗೆ ಸೇರಿಸುವ ಮನರಂಜನೆಯ ರೂಪವಾಗಿದೆ" ಎಂದು ಫೇಸ್‌ಬುಕ್ ಗೇಮಿಂಗ್ ಆ್ಯಪ್‌ನ ಮುಖ್ಯಸ್ಥರಾದ ಫಿಡ್ಜಿ ಸಿಮೋ ಉಲ್ಲೇಖಿಸಿದ್ದಾರೆ.

ABOUT THE AUTHOR

...view details