ಕರ್ನಾಟಕ

karnataka

ETV Bharat / bharat

ಪುಲ್ವಾಮಾ ದಾಳಿ ವೇಳೆ ಬೀಫ್ ಬಿರಿಯಾನಿ ತಿಂದು ಮಲಗಿದ್ರಾ... ಮೋದಿ ವಿರುದ್ಧ ಓವೈಸಿ ಗುಡುಗು - ಈಟಿವಿ ಭಾರತ

ಪಾಕಿಸ್ತಾನದ ಬಾಲಾಕೋಟ್​ನಲ್ಲಿ 300 ಮೊಬೈಲ್​ ಫೋನ್​ ಇರುವುದು ಗೊತ್ತಾಗುತ್ತೆ. ಆದ್ರೆ ಪಕ್ಕದಲೇ ಇರುವ ಪುಲ್ವಾಮಾಗೆ ಆರ್​ಡಿಎಕ್ಸ್ ಸಾಗಿಸಿರುವುದು ಗೊತ್ತಾಗಲ್ವಾ - ಪ್ರಧಾನಿಗೆ ಓವೈಸಿ ಪ್ರಶ್ನೆ.

ಎಐಎಂಐಎಂ ಮುಖ್ಯಸ್ಥ ಅಸಾದುದ್ದಿನ್ ಓವೈಸಿ

By

Published : Mar 24, 2019, 11:36 AM IST

Updated : Mar 24, 2019, 12:41 PM IST

ಹೈದರಾಬಾದ್: ಪುಲ್ವಾಮಾ ಉಗ್ರ ದಾಳಿಯಾದಾಗ ಬೀಫ್ ಬಿರಿಯಾನಿ ತಿಂದು, ಮಲಗಿದ್ರಾ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ಗುಡುಗಿದ್ದಾರೆ.

ಶನಿವಾರ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಬಾಲಾಕೋಟ್​ನಲ್ಲಿ ಭಾರತೀಯ ವಾಯುಸೇನೆ ಬಾಂಬ್ ಹಾಕಿ ಬಂದಿದ್ದು, 250 ಜನ ಮೃತಪಟ್ಟಿದ್ದಾರೆ ಎಂದು ಶಾ ಹೇಳಿಕೆ ನೀಡಿದ್ದರೆ, 300 ಫೋನ್​ಗಳನ್ನು ಎನ್​ಟಿಆರ್​ಒ ಟ್ಯಾಪ್​ ಮಾಡಿದೆ ಅಂತ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಬಾಲಾಕೋಟ್​ನಲ್ಲಿರುವ 300 ಪೋನ್​ಗಳನ್ನು ಪತ್ತೆ ಹಚ್ಚುತ್ತೀರಿ. ಆದ್ರೆ ನಿಮ್ಮ ಕಾಶ್ಮೀರದಲ್ಲಿರುವ ಪುಲ್ವಾಮಾಗೆ 50 ಕೆಜಿ ಆರ್​ಡಿಎಕ್ಸ್​​​ ಬಾಂಬ್ ಸಾಗಿಸಿದ್ದು ನಿಮಗೆ ಗೊತ್ತೇ ಆಗ್ಲಿಲ್ವಾ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ಎಐಎಂಐಎಂ ಮುಖ್ಯಸ್ಥ ಅಸಾದುದ್ದಿನ್ ಓವೈಸಿ

ಅಲ್ಲದೆ, ಯೋಧರ ಮೇಲೆ ಬಾಂಬ್​ ದಾಳಿ ನಡೆದಾಗ ಪ್ರಧಾನಿ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್ ಬೀಫ್ ಬಿರಿಯಾನಿ ತಿಂದು ಮಲಗಿದ್ದರೆ ಎಂದು ಓವೈಸಿ ಪ್ರಶ್ನಿಸಿದ್ದಾರೆ.

ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿದಿರುವ ಓವೈಸಿ, ದೇಶದಲ್ಲಿ ಜಾತ್ಯಾತೀತತೆ ವಿರೋಧಿಸುವವರ ವಿರುದ್ಧ ನಾನು ಹೋರಾಡುತ್ತೇನೆ. ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ ಎಂದಿದ್ದಾರೆ.

Last Updated : Mar 24, 2019, 12:41 PM IST

ABOUT THE AUTHOR

...view details