ಕರ್ನಾಟಕ

karnataka

By

Published : Oct 13, 2019, 12:58 PM IST

ETV Bharat / bharat

ನಾಲ್ಕನೇ ದಿನವೂ ವಿಷವಾಗಿದೆ ರಾಷ್ಟ್ರ ರಾಜಧಾನಿಯ ಪ್ರಾಣವಾಯು!

ಹರಿಯಾಣ ಮತ್ತು ಪಂಜಾಬ್​ ರಾಜ್ಯಗಳಲ್ಲಿ ಭತ್ತದ ಒಣ ಹುಲ್ಲನ್ನ ಸುಡಲಾಗುತ್ತಿದ್ದು, ಇದರಿಂದ ನವದೆಹಲಿಯಲ್ಲಿ ತೀವ್ರ ಸ್ವರೂಪದ ವಾಯುಮಾಲಿನ್ಯ ಉಂಟಾಗಿದೆ.

ವಿಷವಾಗಿದೆ ರಾಷ್ಟ್ರ ರಾಜಧಾನಿಯ ಪ್ರಾಣವಾಯು

ನವದೆಹಲಿ:ನವದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕಳಪೆಯಾಗಿದ್ದು, ವಾಯು ಗುಣಮಟ್ಟ ಸೂಚ್ಯಂಕ 266ಕ್ಕೆ ತಲುಪಿದೆ.

ಸಿಸ್ಟಮ್ ಆಫ್ ಏರ್ ಕ್ವಾಲಿಟಿ, ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ ಪ್ರಕಾರ, ನವದೆಹಲಿಯ ಗಾಳಿಯ ಗುಣಮಟ್ಟ ಮುಂದಿನ ದಿನಗಳಲ್ಲಿ ಕುಸಿಯುವ ಸಾಧ್ಯತೆ ಇದೆ ಎಂದಿದೆ.

ಗುಣಮಟ್ಟ ಮಾಪನದ ಪ್ರಕಾರ, ವಾಯು ಗುಣಮಟ್ಟ ಸೂಚ್ಯಂಕ 0-50 ಇದ್ದರೆ ಉತ್ತಮ, 51-100 ಇದ್ದರೆ ತೃಪ್ತಿದಾಯಕ, 101-200 ಇದ್ದರೆ ಮಧ್ಯಮ, 201-300 ಇದ್ದರೆ ಕಳಪೆ 301-400 ಇದ್ದರೆ ತೀರಾ ಕಳಪೆಯಾಗಿರುತ್ತದೆ.

ನವದೆಹಲಿಯ ಕೆಲವು ನಗರಗಳಲ್ಲಿ ಗಾಳಿಯ ಗುಣಮಟ್ಟ ಪ್ರಮಾಣ ತೀರಾ ಕಳಪೆಯಾಗಿದೆ. ಧೀರ್​ಪುರ್​ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ 313, ಮಥುರಾ ರಸ್ತೆ 306, ದೆಹಲಿ ವಿಶ್ವವಿದ್ಯಾಲಯ ಬಳಿ 300ಕ್ಕೆ ಏರಿಕೆ ಆಗಿದೆ.

ಕಾರಣವೇನು?

ಪಕ್ಕದ ಹರಿಯಾಣ, ಪಂಜಾಬ್​ ರಾಜ್ಯಗಳಲ್ಲಿ ಬೆಳೆ ಕಟಾವು ಮಾಡಿದ ನಂತರ ರೈತರು ಜಮೀನಿನಲ್ಲಿರುವ ಭತ್ತದ ಒಣ ಹುಲ್ಲನ್ನು ಸುಡುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಈ ರೀತಿ ಕಸವನ್ನು ರಾಶಿ ಹಾಕಿ ಸುಡುವ ಪ್ರಮಾಣ ಹೆಚ್ಚಾದ ಪರಿಣಾಮ ನವದೆಹಲಿಯಲ್ಲಿ ವಾಯುಮಾಲಿನ್ಯ ಉಂಟಾಗಿದೆ.

ABOUT THE AUTHOR

...view details